ಯಾತ್ರಾ ಜಪಾನ್ ಕಿ ಸಾರಾಂಶ - Yatra Japan Ki Summary in Kannada: ಟೋಕಿಯೊ ವಿಶ್ವವಿದ್ಯಾನಿಲಯದ ವಿದೇಶೀ ಭಾಷಾ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಸಮ್ಮೇಳನ ಮತ್ತು ಓಸಾಕಾ ವಿಶ್
ಯಾತ್ರಾ ಜಪಾನ್ ಕಿ ಸಾರಾಂಶ - Yatra Japan Ki Summary in Kannada
ಟೋಕಿಯೊ ವಿಶ್ವವಿದ್ಯಾನಿಲಯದ ವಿದೇಶೀ ಭಾಷಾ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಸಮ್ಮೇಳನ ಮತ್ತು ಓಸಾಕಾ ವಿಶ್ವವಿದ್ಯಾನಿಲಯದಲ್ಲಿ 2010ರಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಹಿಂದಿ ಸಮ್ಮೇಳನದಲ್ಲಿ ಭಾಗವಹಿಸಲು ಆರು ಸದಸ್ಯರ ತಂಡವೊಂದು ಜಪಾನಿಗೆ ಹೋಗುತ್ತದೆ ಅದರಲ್ಲಿ ಮಮತಾ ಕಾಲಿಯಾ ಕೂಡಾ ಒಬ್ಬರು. ಪ್ರತಿನಿಧಿ ಮಂಡಳಿಯು 2010ರ ಅಕ್ಟೋಬರ್ 24ರಂದು ಪ್ರಪಂಚದ ಅತಿ ದೊಡ್ಡ ವಿಮಾನ ನಿಲ್ದಾಣವಾದ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುತ್ತದೆ.
ಏರ್ ಇಂಡಿಯಾ ವಿಮಾನದ ಮೂಲಕ ಇವರು ಜಪಾನಿನ ನರೀತಾ ವಿಮಾನ ನಿಲ್ದಾಣವನ್ನು ತಲುಪುತ್ತಾರೆ. ಕಸ್ಟಮ್ಸ್ನಲ್ಲಿ ಬೆರಳುಗಳ ಗುರುತನ್ನು ಮುದ್ರಿಸಿಕೊಳ್ಳಲಾಯಿತು ಮತ್ತು ಪಾಸ್‌ಪೋರ್ಟನ್ನು ಅನೇಕ ಬಾರಿ ಪರೀಕ್ಷಿಸಲಾಯಿತು. ಏರ್‌ಮೋರ್ಟ್‌ನ ಹೊರಗೆ ಟೋಕಿಯೊ ವಿಶ್ವವಿದ್ಯಾನಿಲಯದ ಪ್ರತಿನಿಧಿಯು ದೊಡ್ಡ ವ್ಯಾನ್‌ನೊಂದಿಗೆ ಕಾಯುತ್ತಿದ್ದರು. 100 ಕಿಲೋಮೀಟರಿಗೂ ಅಧಿಕ ದೂರ ಪ್ರಯಾಣಿಸಿ ಅವರುಗಳು ಟೋಕಿಯೊ ತಲುಪಿದರು. ಅಲ್ಲಿ ಸನ್‌ಪೇಟೆಯೋ ಹೋಟೆಲಿನಲ್ಲಿ ಅವರುಗಳಿಗೆ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಹೊರಗಿನ ತಾಪಮಾನ ಬಹಳ ಕಡಿಮೆ ಇದ್ದಿತು. ಆದರೆ ಹೋಟೆಲಿನ ರೂಮಿನ ಒಳಗಿನ ತಾಪಮಾನ ಎಷ್ಟು ಹೆಚ್ಚಿತ್ತೆಂದರೆ, ರೂಮಿನ ಕಿಟಕಿಗಳನ್ನು ತೆರೆಯಬೇಕಾಯಿತು. ನಮ್ಮ ಕೋಣೆ ಏಳನೇ ಅಂತಸ್ತಿನಲ್ಲಿ ಇದ್ದಿತು. ಕೆಳಗೆ ರಸ್ತೆಯಲ್ಲಿ ವೇಗವಾಗಿ ಸಾಯಿಕಲ್ ಚಲಾಯಿಸುವ ಜಪಾನೀವಾಲ ಕಂಡುಬರುತ್ತಾನೆ. ಪ್ರತಿಯೊಂದು ಅಂಗಡಿಗಳ ಮೇಲೆ ಹೆಸರುಗಳನ್ನು ಜಪಾನೀ, ಚೀನೀ ಮತ್ತು ಆಂಗ್ಲ ಭಾಷೆಗಳಲ್ಲಿ ಬರೆಯಲಾಗಿತ್ತು. ರಸ್ತೆ,ಹೋಟೆಲುಗಳು ಪೂರ್ಣವಾಗಿ ಮಾಲಿನ್ಯರಹಿತವಾಗಿದ್ದವು. ಜನರೂ ಕೂಡಾ ತುಂಬಾ ಕಡಿಮೆ ಮಾತನಾಡುತ್ತಿದ್ದರು.
ಟೋಕಿಯೊ ವಿಶ್ವವಿದ್ಯಾಲಯದ ಅತಿಥಿ ಪ್ರೊಫೆಸರ್ ಸುರೇಶ್ ಋತುಪರ್ಣರವರು ಬಂದರು. ಹತ್ತಿರದಲ್ಲೇ ಇದ್ದ ಭಾರತೀಯ ರೆಸ್ಟಾರೆಂಟ್ 'ಕಲಕತ್ತಾ'ಗೆ ಅವರು ನಮ್ಮನ್ನು ಕರೆದೊಯ್ದರು. ಅಲ್ಲಿ ಹಿಂದಿ ಸಂಗೀತವನ್ನು ನುಡಿಸುತ್ತಿದ್ದರು. ದೋಸೆ, ಸಾಂಬಾರ್ ಮುಂತಾದ ಭಾರತೀಯ ಮಸಾಲೆಗಳ ಸುಗಂಧವು ಅಲ್ಲಿ ಹರಡಿದ್ದಿತು. ಎಲ್ಲಕ್ಕೂ ಮೊದಲು ಅಲ್ಲಿ ನಮಗೆ ಕುಡಿಯಲು ಬಿಸಿ ನೀರು ಕೊಡಲಾಯಿತು. ನಂತರ ದಾಲ್ಟಿನ್ನಿ, ಕರಿಮೆಣಸು, ಚಹಾದ ಎಲೆ ಹಾಕಿ ತಯಾರಿಸಿದ ಮಸಾಲೆ ಟೀಯನ್ನು ಸವಿಯಲು ನೀಡಲಾಯಿತು. ಈ ರೆಸ್ಟಾರೆಂಟಿನ ಕಾರಣದಿಂದಾಗಿ ನಮಗೆ ಜಪಾನಿನಲ್ಲಿಯೂ ಭಾರತೀಯ ತಿನಿಸುಗಳು ಸಿಗುತ್ತಿದ್ದವು ಮತ್ತು ಹೊಟ್ಟೆಯ ವಿಷಯಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ.
ಮಧ್ಯಾಹ್ನ ಒಂದೂವರೆ ಗಂಟೆಗೆ ಪ್ರೊಫೆಸರ್ ಋತುಪರ್ಣರೊಂದಿಗೆ ಸನ್ ಪೇಟಿಯಾದಿಂದ ಟೋಕಿಯೊ ವಿಶ್ವವಿದ್ಯಾಲಯಕ್ಕೆ ಹೊರೆಟೆವು. ಅಲ್ಲಿಗೆ ನಾವು ರೈಲಿನಲ್ಲಿ ಪ್ರಯಾಣಿಸಿದೆವು. ಇಲ್ಲಿ ಹೆಜ್ಜೆ ಹೆಜ್ಜೆಗೂ ರೇಲ್ವೇ ನಿಲ್ದಾಣಗಳಿವೆ. ರಸ್ತೆ, ಅಂಗಡಿ, ಮುಖಚಹರೆಗಳು- ಇಲ್ಲಿ ಎಲ್ಲ ಸ್ಥಳಗಳೂ, ಎಲ್ಲವೂ ಸುಂದರ, ಅತಿ ಸುಂದರ.
ಸುರೇಶ್‌ರವರು ನೋಟನ್ನು ಹಾಕಿ ಮೆಶೀನಿನಿಂದ ಟಿಕೆಟ್ ತೆಗೆಯುತ್ತಾರೆ. ಎಲ್ಲ ಕೆಲಸಗಳೂ ಕಣ್ಣು ಮಿಟುಕುವಷ್ಟರಲ್ಲಿ ಆಗುತ್ತದೆ. ರೈಲಿನಲ್ಲಿ ಹತ್ತುವಾಗ, ಇಳಿಯುವಾಗ ಯಾವುದೇ ನೂಕು ನುಗ್ಗಲು ಇಲ್ಲ. ಪ್ಲಾಟ್ ಫಾರ್ಮ್‌ನಲ್ಲಿ ಅಂತರಗಳಲ್ಲಿ ಕೆಂಪು ಗೆರೆಗಳನ್ನು ಹಾಕಲಾಗಿರುತ್ತದೆ. ಪ್ರತಿಯೊಂದು ಬೋಗಿಯೂ ಈ ಕೆಂಪು ಗೆರೆಗಳ ಮುಂದೆಯೇ ಬಂದು ನಿಲ್ಲುತ್ತದೆ. ಹತ್ತುವವರಿಗಾಗಿ ಮತ್ತು ಇಳಿಯುವವರಿಗಾಗಿ ಬೇರೆ ಬೇರೆ ಬಾಗಿಲುಗಳಿವೆ. ಹಾಗಾಗಿ ಯಾವುದೇ ನೂಕು ನುಗ್ಗಲು ಉಂಟಾಗುವುದಿಲ್ಲ. ರೈಲಿನೊಳಗೆ ಕುಳಿತುಕೊಳ್ಳುವ ಸ್ಥಳ ಕಡಿಮೆ ಮತ್ತು ನಿಲ್ಲುವ ಸ್ಥಳ ಸಾಕಷ್ಟು ಹೆಚ್ಚು ಇದೆ.
ಜಪಾನೀ ಭಾಷೆ ಚಿತ್ರಾತ್ಮಕವಾಗಿದೆ. ವಿಕಲಾಂಗರಿಗೆ, ವೃದ್ಧರಿಗೆ, ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ ಮೀಸಲಾದ ಸ್ಥಾನಗಳಿಗೆ ಛಿಠಿಣಡಿಣಜಥಿ ಜಚಿಣ್ಣ ಅಂದರೆ ಸೌಜನ್ಯದ ಆಸನಗಳು ಎಂದು ಹೆಸರಿಸಿರುತ್ತಾರೆ. ವಿನಮ್ರತೆಯು ಜಪಾನಿನ ಗುಣಧರ್ಮ, ಜಪಾನಿನ ಜನರು ಕರೆಯದಿದ್ದರೂ ಸಹಾಯಕ್ಕಾಗಿ ಓಡಿ ಬರುತ್ತಾರೆ. ಜನರು ರೈಲಿನಲ್ಲಿಯೂ ಓದುತ್ತಿರುತ್ತಾರೆ. ಕಡಿಮೆ ಮಾತನಾಡುತ್ತಾರೆ. ಕೇವಲ ನಮ್ಮಲ್ಲಿ ಮಾತ್ರ ವಾರ್ತಾಲಾಪ ನಡೆಯುತ್ತಿತ್ತು.
ಸೆಮಿನಾರ್ ಸ್ಥಳದಲ್ಲಿ ಸಭಾಗೃಹವು ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ಎಲ್ಲರೂ ಹಿಂದಿಯಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತಿದ್ದರು. ಎಲ್ಲರ ಬಳಿಯೂ ನನ್ನ ಕತೆಗಳಿಗೆ ಸಂಬಂಧಿಸಿದ ಒಂದಲ್ಲಾ ಒಂದು ಪ್ರಶ್ನೆ ಇತ್ತು.
ದಿಲ್ಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನೊಂದಿಗೆ ಟಫ್ ಟೊಕ್ಕೋ ಯೂನಿವರ್ಸಿಟಿ ಆಫ್ ಫಾರಿನ್ ಸ್ಟಡೀಸ್‌ನ ನಿರ್ದೇಶಕರಾದ ಪ್ರೊಫೆಸರ್ ಮುಜಿಯಿ ತಾಕೇಶಿಯವರ ಸಂಪರ್ಕವಿದೆ. ಹಾಗಾಗಿ ನಾನು, ಸುರೇಶ್ ಮತ್ತು ಮುಜಿಯಿ ತಾಕೇಶಿಯವರು ಒಂದು ತಂಡವಾಗಿ ಹೋದವು. ಟಲ್ಸ್‌ನಲ್ಲಿ ಸುಮಾರು ಐವತ್ತು ವಿದೇಶಿ ಭಾಷೆಗಳ ಅಧ್ಯಯನ ಆಗುತ್ತದೆ. ಜಪಾನೀ ಭಾಷೆಯ ಅತ್ಯಂತ ಪ್ರಾಚೀನತೆಯಿಂದ ಹಿಡಿದು ಆಧುನಿಕ ವಿಕಾಸದವರೆಗೂ ಅಧ್ಯಯನವು ಸಾಗುತ್ತದೆ. ಹಿಂದಿ, ಉರ್ದು ಎರಡು ಭಾಷೆಗಳಲ್ಲಿ ಯೋಗದ ಅನುಕೂಲವು ಇಲ್ಲಿ ಲಭ್ಯವಿದೆ.
ಬಾತ್‌ರೂಮ್‌ಗೆ ಹೋದಾಗ ನೋಡ್ತೀನಿ, ವಾಷ್ ಬೇಸಿನ್ ಬಳಿ ಹುಡುಗಿಯರ ದೊಡ್ಡ ಸಾಲೇ ಇದೆ. ಆಮೇಲೆ ಗೊತ್ತಾಯ್ತು, ಎಲ್ಲ ಹುಡುಗಿಯರೂ ಊಟವಾದ ನಂತರ ಕಡ್ಡಾಯವಾಗಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಾರೆಂದು! ಉದ್ಘಾಟನೆಯ ಸಮಯದಲ್ಲಿ ಎಲ್ಲರೂ ತಮ್ಮ ಪರಿಚಯ ಮಾಡಿಕೊಂಡರು ಮತ್ತು ತಮ್ಮ ಬಯೋಡಾಟಾ ಓದಿದರು. ವಿದ್ಯಾರ್ಥಿಗಳು ತುಂಬಾ ಏಕಾಗ್ರತೆಯಿಂದ ನಮ್ಮ ಭಾಷಣ ಕೇಳಿದರು. ತರಗತಿಯ ಅಂತ್ಯದಲ್ಲಿ ಅವರುಗಳು ಹಿಂದಿಯಲ್ಲಿ ಪ್ರಶ್ನೆಗಳನ್ನು ಕೇಳಿದರು. ಸಂಚಾಲಕ ವಿದ್ಯಾರ್ಥಿನಿಯರು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು.
ನಂತರ ನಮಗೆ ಟಫ್ ಪುಸ್ತಕಾಲಯವನ್ನು ತೋರಿಸಲಾಯಿತು. ನಾಲ್ಕು ಅಂತಸ್ತಿನ ಈ ಪುಸ್ತಕಾಲಯದಲ್ಲಿ ವಿದ್ಯುತ್‌ಚಾಲಿತ ಅಲಮೇರಾಗಳಲ್ಲಿ ಇಟ್ಟಿರುವ ಪುಸ್ತಕಗಳು ಬಟನ್ ಒತ್ತುತ್ತಿದ್ದ ಹಾಗೆ ತನ್ನಿಂತಾನೇ ಬರುತ್ತವೆ. ನಿಮಗೆ ಮನ ಬಂದಷ್ಟು ಓದಬಹುದು, ನೋಟ್ಸ್ ಮಾಡಿಕೊಳ್ಳಬಹುದು, ನಂತರ ಮನ: ಬಟನ್ ಒತ್ತಿದರೆ ಪುಸ್ತಕವು ಅಲಮಾರಿನೊಳಗೆ ತನ್ನ ಸ್ವಸ್ಥಾನಕ್ಕೆ ಹೋಗಿ ಸೇರಿಕೊಳ್ಳುತ್ತದೆ. ಇಲ್ಲಿ ಹಿಂದಿ, ಅವಧಿ, ಬ್ರಜ್, ರಾಜಸ್ಥಾನಿ, ಭೋಜಪುರಿ, ಪಹಾಡಿ, ಮೈಥಿಲಿ ಭಾಷೆಯ ಪುಸ್ತಕಗಳೂ ಇವೆ. ದುರ್ಲಭವಾದ ಪುಸ್ತಕಗಳಿಗಾಗಿ ಇಲ್ಲಿ 'ನವಲ ಕಿಶೋರ ಸಂಗ್ರಹ' ಇದೆ, ಇದರಲ್ಲಿ 987 ಗ್ರಂಥಗಳಿವೆ. ಇಲ್ಲಿ 1805ರಲ್ಲಿ ಪ್ರಕಟಣೆಗೊಂಡ 'ಸಿಂಹಾಸನ್ ಬತ್ತೀಸಿ' ಪುಸ್ತಕದ ಪುಟಗಳನ್ನು ನಾನು ತಿರುಗಿಸಿದೆ. ಟೆಮ್‌ಟ್ರೊಮಿ ಬರೆದ 'ದಿ ಹಿಂದೂಸ್'ನಲ್ಲಿ ಕೈಯಿಂದ ಬಿಡಿಸಿದ ಚಿತ್ರವಿತ್ತು ಮತ್ತು ಇದರಿಂದ ಎಲ್ಲ ಜಾತಿ ಮತ್ತು ಅವರ ಕಸುಬುಗಳ ಪರಿಚಯ ಸಿಗುತ್ತಾಇತ್ತು. ಸರಸ್ವತೀ, ವಿಶಾಲ ಭಾರತ, ಮಾಧುರಿ ಯಂತಹ ಪತ್ರಿಕೆಗಳ ಅಂಕಣಗಳೂ ಇಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಇಲ್ಲಿ ನನಗೆ ಫಿಜಿ ದ್ವೀಪದ ಪ್ರವಾಸಿ ಪತ್ರಗಳ ಮೇಲೆ ಸುಬ್ರಮಣಿಯವರು ಬರೆದಿರುವ 'ಡವುಕಾ ಪುರಾಣ' ಕೂಡಾ ಓದಲು ಸಿಕ್ಕಿತು. ಇದು ಫಿಜಿ ಸಭತೆಯನ್ನು ಪರಿಚಯಿಸುವ ಪ್ರಪ್ರಥಮ ಹಿಂದಿ ಉಪನ್ಯಾಸವಾಗಿದೆ.
ಹಗಲು ಕಳೆದಂತೆ ಟೋಕಿಯೊ ವಿದ್ಯುದಲಂಕಾರಗೊಳ್ಳುತ್ತೆ. ಆಗಸಕ್ಕೆ ಏಣಿಯನ್ನು ಹಾಕಿದಂತೆ ಕಾಣುವ ಗಗನಚುಂಬಿ ಕಟ್ಟಡಗಳನ್ನು ನೋಡಿ ಲೇಖಕಿಯು ಕೇಳುತ್ತಾರೆ 'ಜಪಾನಿನಲ್ಲಿ ಇಷ್ಟೊಂದು ಬಿರುಗಾಳಿ, ಭೂಕಂಪಗಳು ಸಂಭವಿಸುತ್ತಿರುತ್ತವೆ. ಆದರೂ ಇಂತಹ ಗಗನಚುಂಬಿ ಕಟ್ಟಡಗಳನ್ನೇಕೆ ಕಟ್ಟುತ್ತೀರಿ?' ಸುರೇಶ್ ಜೀ ಹೇಳ್ತಾರೆ 'ಇಲ್ಲಿನ ಕಟ್ಟಡಗಳಲ್ಲಿನ ಎಲ್ಲ ಮಹಡಿಗಳಲ್ಲೂ ಭೂಕಂಪನದ ಹೊಡೆತವನ್ನು ಸಹಿಸಿಕೊಳ್ಳೋವಷ್ಟು ಸ್ಥಳವನ್ನು ಬಿಟ್ಟಿರುತ್ತಾರೆ.
ಪ್ರಪಂಚದ ಬೇರೆ ದೇಶಗಳಲ್ಲಿರುವಂತೆ ಜಪಾನಿನಲ್ಲಿಯೂ ಹಣದುಬ್ಬರವಿದೆ. ಇಲ್ಲಿಯ ನಾಣ್ಯ ಯೆನ್ ಮತ್ತು ಇದರ ಮೌಲ್ಯ ಎರಡು ರೂಪಾಯಿ, ಸಣ್ಣ ಸಣ್ಣ ಉಡುಗೊರೆಗಳನ್ನೂ ಸೇರಿಸಿ ನಮ್ಮಿಂದ ಹಲವಾರು ಸಾವಿರ ಯೆನ್ ಖರ್ಚು ಮಾಡಿಸುತ್ತಾರೆ. ಹಾಗಾಗಿ ಸುರೇಶ್ ಋತುಪರ್ಣಿಯವರು ಯಾವುದೇ ವಸ್ತು ಖರೀದಿಸಿದರೂ 100 ಯೆನ್ ಇರುವಂತಹ ಅಂಗಡಿಗೆ ನಮ್ಮನ್ನು ಕರೆದುಕೊಂಡು ಹೋದರು, ಅಂದರೆ, 100 ಯೆನ್‌ಗೆ ಹಲಕೆಲವು ಡಾಟ್‌ಪೆನ್‌ಗಳು ಮಾತ್ರ ಸಿಕ್ಕವು! ವಾಪಸ್ಸು ಭಾರತಕ್ಕೆ ಮರಳಿದಾಗ ಸ್ನೇಹಿತರಿಗೆ ಕೊಡಲೆಂದು ಎಲ್ಲರೂ ಶೂ ಹಾರ್ನ್ (ಶೂಗಳನ್ನು ಧರಿಸುವಾಗ ಉಪಯೋಗಿಸುವ ಫೋರ್ಕ್) ಖರೀದಿಸಿದೆವು.
ನಮ್ಮ ಸಾಮಾನುಗಳು ಮೊದಲೇ ನಮಗೆ ಕಿರಿಕಿರಿಯುಂಟು ಮಾಡುತ್ತಿದ್ದವು. ಟೋಕಿಯೊದಿಂದ ಒಸಾಕಾಗೆ ಹೋಗಲು ಜಪಾನಿನ ಸರ್ವಾಧಿಕ ವೇಗದ ರೈಲು 'ಶಿಕಾನ್‌ಸೇನ್' ಹಿಡಿಯಬೇಕಿತ್ತು. ಇದನ್ನೇ ಬುಲೆಟ್ ಟ್ರೈನ್ ಅಂತಲೂ ಕರೆಯುತ್ತಾರೆ. ಈ ಯಾತ್ರೆ ಜೀವನದ ಒಂದು ಮೌಲಿಕ ಅನುಭವ. ಬುಲೆಟ್ ಟ್ರೈನ್ 16 ಬೋಗಿಗಳ ಗಾಡಿ, ಪ್ರತಿ ಬೋಗಿಯಲ್ಲಿ 1300 ಜನ ಯಾತ್ರಿಕರಿಗೆ ಆಸನ ಕಲ್ಪಿಸಲಾಗಿದೆ. 1300 ಅಡಿ ಉದ್ದದ ಈ ಗಾಡಿಯಲ್ಲಿ 40 ಜನರೇಟರ್‌ಗಳಿವೆ. ಇದು ಗಂಟೆಗೆ 170 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಹಾಗಾಗಿ ಎಲ್ಲಿಯಾದರೂ ನಿಲ್ಲಬೇಕೆಂದರೆ ಕನಿಷ್ಟ 5 ಕಿಲೋಮೀಟರ್ ವ್ಯಾಪ್ತಿಯಿರಬೇಕು. ಟೋಕಿಯೊ ಮತ್ತು ಒಸಾಕಾಗಳ ನಡುವೆ 66 ಸುರಂಗಮಾರ್ಗಗಳಿವೆ ಮತ್ತು ಇವುಗಳ ನಿರ್ವಹಣೆಗಾಗಿ 8600 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಪ್ರಯಾಣದಲ್ಲಿ ಆರಾಮವಾಗಿರಲೆಂದು ನಮಗೆ ಬಲಭಾಗದ ಕುರ್ಚಿಗಳಲ್ಲಿ ಕೂರಿಸಲಾಯಿತು. ರಸ್ತೆಯಲ್ಲಿ ಪೂಜಿ ಪರ್ವತದ ಹಿಮಾಚ್ಛಾದಿತ ಶಿಖರವನ್ನು ನೋಡಿದೆವು. ಅನೇಕ ಗುಡ್ಡಗಳನ್ನು ನೋಡಿ ಯಂತ್ರದ ಸಾಧನದಿಂದ ನಿಧಾನವಾಗಿ ಓದಿದೆವು. ಸುರೇಶ್ ಹೇಳಿದ್ರು 'ನಮ್ಮ ಪೂಜಿ ಪರ್ವತವು ಮನೋಕಾಮನೆಗಳನ್ನು, ಇಷ್ಟಾರ್ಥಗಳನ್ನು ನೆರವೇರಿಸುವ ಪರ್ವತವಾಗಿದೆ'. ನಮಗೆ ಬಾಯಾರಿಕೆಯಾಗಿತ್ತು. ನಮಗೇ ಗೊತ್ತಿಲ್ಲದಂತೆ ಪ್ರೊಫೆಸರ್ ಇಥಿಹಾ ಎರಡು ಬಾಟಲ್ ನೀರನ್ನು ನಮ್ಮ ಟೇಬಲ್ ಮೇಲೆ ಇಟ್ಟು ಹೋಗಿದ್ದು, ಜಪಾನಿನಲ್ಲಿ ನೀರಿಗೆ 'ಮಿಜು' ಎನ್ನುತ್ತಾರೆ. ಹೌದು ಎನ್ನಲು 'ಹಾಯ್' ಇಲ್ಲ ಎನ್ನಲು 'ಇಮ್' ಎನ್ನುತ್ತಾರೆ. ಥ್ಯಾಂಕ್ ಯೂ ವೆರಿ ಮಚ್ ಎನ್ನಲು 'ದೂಮೋ ಆರಿಗಾತ್'ಎನ್ನುತ್ತಾರೆ.
ಒಸಾಕಾ ನಿಲ್ದಾಣದಲ್ಲಿ ಆಯೋಗದ ಪ್ರತಿನಿಧಿಯು ದೊಡ್ಡ ವ್ಯಾನ್‌ನೊಂದಿಗೆ ಹಾಜರಿದ್ದರು. ಪ್ರಪಂಚ ಭಾಷೆಗಳ ಸಂಶೋಧನಾ ಸಂಸ್ಥೆ (ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಲಾಂಗ್ಜಸ್)ಯ ನಿರ್ದೇಶಕರಾದ ಪ್ರೊಫೆಸರ್ ಅಕಿರಾ ತಾಕಾಹಿಶ್‌ರವರು ಆಶ್ಚರ್ಯವೆಂಬಂತೆ ಅಲ್ಲಿ ಆಗ ಪ್ರಕಟವಾದರು. ಮೂವತ್ತು ವರ್ಷಗಳ ನಂತರ ಅವರನ್ನು ನೋಡಿದ್ದು, ಆದರೂ ಅವರು ಈಗಲೂ ಹುಡುಗನಂತೆಯೇ ಇದ್ದಾರೆ. ತೆಳುವಾದ ಮೈಕಟ್ಟು, ನಗುಮೊಗ. ಅವರೊಡನೆ ಹರಜೇಂದ್ರ ಚೌಧರಿಯವರೂ ಇದ್ದರು. ಪರದೇಶದಲ್ಲಿ ನಮ್ಮವರನ್ನು ಕಂಡಾಗ ಆ ದೇಶ ನಮ್ಮ ದೇಶವೇ ಆಗಿಬಿಡುತ್ತದೆ. ಅಲ್ಲಿ ಭಾಷೆ ನಗಲು, ಆಡಲು ಪ್ರಾರಂಭಿಸುತ್ತದೆ!
ಒಸಾಕಾತನಕದ ದೃಶ್ಯಾವಳಿಗಳು ಮನೋರಮವಾಗಿತ್ತು. ಬಣ್ಣ ಬಣ್ಣದ ಮರಗಳು. ಒಸಾಕಾ ಜೋ ಇಲ್ಲಿನ ಕೋಟೆ, ಜೋ ಎಂದರೆ ಕೋಟೆ ಎಂದರ್ಥ. ಇದನ್ನು 1585 ನೇ ಇಸವಿಯಲ್ಲಿ ಆಗಿನ ಸಾಮ್ರಾಟ್ ತೋಯೋತೋಮಿ ಕಟ್ಟಿಸಿದ್ದನು. ಕೋಟೆಯ ನಾಲ್ಕೂ ಕಡೆ ಆಳವಾದ ಕಂದರ ಮತ್ತು ಜಲಾಶಯವಿದೆ. ಪ್ರತಿಯೊಂದು ದ್ವಾರದಲ್ಲೂ ವಿಶಾಲವಾದ ಕಪ್ಪಗಿನ ಬಾಗಿಲುಗಳಿವೆ. ಕಪ್ಪು ಕಲ್ಲಿನ ಗೋಡೆಗಳಿವೆ. 1496 ರಲ್ಲಿ ಇಲ್ಲಿ ಪಾದರಿಯೊಬ್ಬರು ಆಶ್ರಮವನ್ನು ಕಟ್ಟಿದ್ದರು. ಬೆಂಕಿ ತಗುಲಿ ಆ ಮಂದಿರವು ನಾಶವಾಗಿತ್ತು. ನಂತರ 'ಒಸಾಕಾ ಜೋ' ಕಟ್ಟಿದ್ದು, 1931 ರಲ್ಲಿ ಇದನ್ನು ನವೀಕರಿಸಲಾಗಿದೆ. ಇದರಲ್ಲಿ ಕೋಟೆಯ ಸಂಗ್ರಹಾಲಯವಿದೆ. ರಾತ್ರಿಯ ವೇಳೆ ಇದು ನಯನಮನೋಹರವಾಗಿರುತ್ತೆ.
ಇಲ್ಲಿಯೇ ಮರದ ಕೆಳಗಿನ ಬೆಂಚೊಂದರ ಮೇಲೆ ಕುಳಿತು ನಾವು ತಂದಿದ್ದ ಶಾಖಾಹಾರಿ ಸ್ಯಾಂಡ್‌ವಿಚ್ ತಿಂದೆವು. ಮಕ್ಕಾಳ ಗಾಡಿಗಳಲ್ಲಿ ಮಲಗಿದ್ದ ಮಕ್ಕಳು ಪ್ಲಾಸ್ಟಿಕ್ ಬೊಂಬೆಗಳಂತೆ ಕಾಣುತ್ತಿದ್ದವು. ಸುರೇಶ್‌ಜೀ ಕೇಳಿದರು 'ಗಟಪಾರ್ಚಾ' ಅಂದ್ರೆ ಏನು ಹೇಳಿ ನೋಡೋಣ? ತಾಕಾಹಾಶಿ ತಕ್ಷಣ ಹೇಳಿದು 'ಪ್ಲಾಶ್ಚಿಕ್'. ಅವರ ಶಬ್ದಜ್ಞಾನ ಅಮೋಘವಾದುದು.
ಜಪಾನೀ ಜನ ತಮ್ಮ ಸಾಮ್ರಾಟನ ಬಗ್ಗೆ ಶ್ರದ್ಧೆ ಮತ್ತು ಪ್ರೇಮವನ್ನು ಹೊಂದಿದವರಾಗಿದ್ದಾರೆ. ಕೋಟೆಯ ಹಾದಿಯಲ್ಲಿ ಪಾರಂಪರಿಕ ವೇಷದಲ್ಲಿ ಭಿಕ್ಷುಕನೊಬ್ಬ ಭಿಕ್ಷೆ ಬೇಡುತ್ತಲಿದ್ದ.
ನಮ್ಮ ಸಮೀಪದಲ್ಲಿ ಬೆಂಚೊಂದರ ಮೇಲೆ ಒಬ್ಬ ವ್ಯಕ್ತಿಯು ಮೊಸಳೆಯ ಮರಿಗಳಿಗೆ ರಂಗುರಂಗಿನ ವೇಷಗಳನ್ನು ಹಾಕಿ ಕೂರಿಸಿದ್ದಾನೆ. ಅನೇಕ ಜನ ಆ ಮೊಸಳೆ ಮರಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ನಮ್ಮ ಟೋಲಿಯ ಕೆಲವು ಸದಸ್ಯರೂ ಇದನ್ನು ಮಾಡಿದರು.
ರಾತ್ರಿಯ ಔತಣ ಹರಜೇಂದ್ರ ಚೌಧರಿಯವರ ಮನೆಯಲ್ಲಿ ಇದ್ದಿತು. ಇಲ್ಲಿ ಹರಜೇಂದ್ರ ಚೌಧರಿಯವರ ಕಥಾ ಸಂಕಲನ 'ಪತಾ ನಹೀ ಕ್ಯಾ ಹೋಗಾ'ದ ಲೋಕಾರ್ಪಣೆ ಕಾರ್ಯಕ್ರಮವಿದ್ದಿತು. ಅಡುಗೆ ತಯಾರಿಯ ಕೆಲಸವನ್ನು ಇಬ್ಬರು ಸಂಶೋಧಕ ವಿದ್ಯಾರ್ಥಿಗಳು ವಹಿಸಿಕೊಂಡಿದ್ದರು. ಸಂಕಲನದ ಲೋಕಾರ್ಪಣೆಯನ್ನು ಪ್ರೊಫೆಸರ್ ತಾಕಾಹಾಶಿಯವರು ನೆರವೇರಿಸುತ್ತಾರೆ. ಹಿಂದಿ, ಉರ್ದು ಮಾತನಾಡುವ ಪ್ರೊಫೆಸರ್ ಯಾಮಾನೆಯವರು ಉತ್ಸಾಹದಿಂದ ಸ್ವಾಗತ ಭಾಷಣ ಮತ್ತು ಅಭಿನಂದನೆ ಮಾಡುವರು. ಕುರ್ತಾ ಮತ್ತು ಪೈಜಾಮದಲ್ಲಿ ಬಂದ ಅವರನ್ನು ಕಂಡ ಯಾರಿಗಾದರೂ ಲಖನೌನ ನವಾಬ ಒಸಾಕಾಗೆ ಬಂದು ನೆಲೆಸಿದಾನೇನೋ ಅನ್ನಿಸುತ್ತೆ. ಯಾಸೀನ್ ಸುಲ್ತಾನ್ ನಕಬೀ ಕೂಡಾ ಅಲಹಾಬಾದಿನವರು, ಕಳೆದ ಐದು ವರ್ಷಗಳಿಂದ ಒಸಾಕಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ.
ಮರುದಿನ ಅಂದರೆ ನವೆಂಬರ 28ರ ಸೋಮವಾರದಂದು ಸೆಮಿನಾರಿನ ಉದ್ಘಾಟನೆ ಆಗುತ್ತದೆ. ಎಷ್ಟು ಜನ ಜಪಾನೀ ಹಿಂದೀ ಮಾತನಾಡುವವರು ಇದ್ದಾರೆಯೋ, ಅವರೆಲ್ಲರೊಂದಿಗೆ ಭೇಟಿ ಆಯಿತು. ಭಾರತ ಸರ್ಕಾರದ ಉಚ್ಚ ಆಯುಕ್ತರೂ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್ತಿನ ನಿರ್ದೇಶಕರೂ ಸಭೆಯಲ್ಲಿ ವಿರಾಜಮಾನರಾಗಿದ್ದರು. ಪ್ರೊ, ತೋಮಿಯೋ ಮಿಜೋಕಾಮಿಯವರು ಮೊದಲನೇ ಅವಧಿಗೆ ಅಧ್ಯಕ್ಷರಾಗಿದ್ದರು. ಅವರು 1951 ರಿಂದ 1980ರ ತನಕ ಹಿಂದಿ ಸಿನಿಮಾ ಹಾಡುಗಳನ್ನು ಜಪಾನೀ ಭಾಷೆಗೆ ಅನುವಾದಿಸಿದವರಾಗಿದ್ದಾರೆ. ಜಪಾನಿನಲ್ಲಿ ಹಿಂದಿ ಸಿನಿಮಾ ಹಾಡುಗಳಿಗೆ ಉತ್ತಮ ಸ್ಪಂದನೆಯಿದೆ.
ವಿಕಾಸ್ ಸ್ವರೂಪ್ ರವರ ಪುಸ್ತಕವನ್ನಾಧರಿಸಿ ಮಾಡಿದ ಚಿತ್ರ ಸ್ಲಮ್‌ಡಾಗ್ ಮಿಲಿಯನೇ ಆಸ್ಕರ್ ಪ್ರಶಸ್ತಿಯನ್ನೇನೋ ಪಡೆಯಿತು. ಆದರೆ ಅದರ ಬಗ್ಗೆ ದೊಡ್ಡ ಸುದ್ದಿಯನ್ನೇನೂ ಅವರು ಮಾಡಲಿಲ್ಲಿ, ಅಪಿತು ಇನ್ನೊಂದು ಪುಸ್ತಕ ಬರೆಯಲು ಕುಳಿತರು. ಅವರ ಚಿತ್ರಕಾರ ಪತ್ನಿ ಅಪರ್ಣಾರವರನ್ನೂ ನಾವು ಭೇಟಿಯಾದ್ವಿ. ಅವರೂ ಕೂಡಾ ಅಲಹಾಬಾದಿನವರೇ.
ನಾವುಗಳು ಅವರ ಮನೆಗೆ ಭೇಟಿ ನೀಡಬೇಕೆಂಬುದು ಪ್ರೊ, ಲಕ್ಷ್ಮೀಧರ ಮಾಳವೀಯರ ಆಗ್ರಹವಾಗಿತ್ತು ಆದರೆ ಸಮಯದ ಅಭಾವದಿಂದ ಹೋಗಲಾಗಲಿಲ್ಲ. ಆದರೂ ಅವರ ಮಕ್ಕಳಾದ ಅಮಿತ್, ತಾರಾರವರನ್ನು ನೋಡುವ ಬಯಕೆಯಿದೆ. ಆಗ ತಿಳೀತು, ಅಮಿತ್ ಈಗ ಪತ್ರಕಾರರಾಗಿದ್ದಾರೆ ಮತ್ತು ತಾರಾ ಅಕ್ಯೂಪ್ರೆಶರಿಸ್ಟ್ ಆಗಿದ್ದಾರೆಂದು.
ತಾಕಾಹಾಶಿಸಾನ್‌ರವರು ಒಂದು ಸ್ಥಳದಲ್ಲಿ ಗಾಡಿಯನ್ನು ನಿಲ್ಲಿಸಿ ನಮ್ಮನ್ನು ರಾಂಪ್ ಮೇಲೆ ಒಯ್ಯುತ್ತಾರೆ. ಇಲ್ಲಿ ಒಂದು ಜಲಪ್ರಪಾತವಿದೆ. ರವೀಂದ್ರ ಮತ್ತು ಅಜಯ್ ಗುಪ್ತಾ ಸ್ವಲ್ಪ ದೂರ ನಡೆದು ವಾಪಸ್ಸು ಬಂದು ಗಾಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಇಲ್ಲಿ ಒಂದು ಸಣ್ಣ ಬಾಜಾರ್ ಕೂಡಾ ಇದೆ. ತಾಕಾಹಾಶಿಸಾನ್‌ರವರು ನಮಗೆಲ್ಲರಿಗಾಗಿ ಮಿಠಾಯಿಗಳನ್ನು ಖರೀದಿಸುತ್ತಾರೆ.
ರೈಲ್ ಮೂಲಕ 'ನಾರಾ' ತಲುಪುವಲ್ಲಿ ಹೊತ್ತೇನೂ ಹಿಡಿಯಲಿಲ್ಲ. ಇಲ್ಲಿಯ ಪ್ರಸಿದ್ಧ ಮಂದಿರ 743ನೇ ಇಸವಿಯಲ್ಲಿ ಕಟ್ಟಿದ್ದ 'ತೋದಾಯಜೀ' ಮಂದಿರ. ಈ ಮಂದಿರದ ಅಧಿದೇವತೆ ಗೌತಮ ಬುದ್ಧ. ಇವನನ್ನು ಜಪಾನಿನಲ್ಲಿ ದಾಯಬುತ್ಸು ಎನ್ನುತ್ತಾರೆ. ವಿಶಾಲವಾದ ಪರಿಸರದಲ್ಲಿ ಕಪ್ಪು ಮರದಲ್ಲಿನ ಕೆತ್ತನೆಯನ್ನು ನೋಡಿ ವಿಸ್ಮಯವಾಗುತ್ತದೆ. ದೊಡ್ಡ ಅಂಗಳದ ಮಧ್ಯದಲ್ಲಿ ಗೋಲಾಕಾರದ ವೃತ್ತದಲ್ಲಿ ಬೆಂಕಿ ಉರಿತಾ ಇರುತ್ತೆ. ಇಲ್ಲಿಗೆ ಬಂದ ಶ್ರದ್ಧಾಳುಗಳು ಆರತಿ ಪಡೆದು ಇದರ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ದಾನ ಪತ್ರವಿದೆ, ಆದರೆ ದಾನದ ಬಾಧ್ಯತೆ ಇಲ್ಲಿ ಇಲ್ಲ. ಮಂದಿರದ ಗರ್ಭಗುಡಿಯಲ್ಲಿ 55 ಅಡಿ ಎತ್ತರ 500 ಟನ್ ತೂಕದ ಬುದ್ಧನ ಕಂಚಿನ ವಿಗ್ರಹವಿದೆ. ಗರ್ಭಗೃಹವನ್ನು 'ದಾಯ್ ಬುತ್ತುದೇನ್' ಎಂದು ಕರೆಯಲಾಗುತ್ತೆ. ಬೌದ್ಧ ಪ್ರತಿಮೆಯ ಕೆಳಗೆ ಒಂದು ಸಣ್ಣ ಮಾರ್ಗವಿದೆ. ಎಷ್ಟು ಸಣ್ಣದು ಎಂದರೆ ಅದರಿಂದ ಮನುಷ್ಯ ತೂರಿಹೋಗುವುದು ಕಠಿಣ. ಹಾಗಾಗಿಯೇ ಇಲ್ಲಿ ಒಂದು ಮಾನ್ಯತೆಯಿದೆ ಮತ್ತು ಅದೆಂದರೆ, ಯಾರು ಈ ಸಣ್ಣ ಮಾರ್ಗದಿಂದ ದಾಟಿ ಹೋಗುತ್ತಾರೋ ಅವರಿಗೆ ಮೋಕ್ಷಪ್ರಾಪ್ತಿಯಾಗುವುದು ಎಂದು, ನಾವುಗಳು ಬೇಡ ಬೇಡವೆಂದರೂ ಹರಜೇಂದ್ರ ಚೌಧರಿಯವರು ಮಾತ್ರ ಅದನ್ನು ದಾಟಿಯೇ ಬಿಟ್ಟರು. ತೋದಾಯಜೀ ಇರುವ ಸ್ಥಳದಲ್ಲಿಯೇ ಇನ್ನೊಂದು ಮೂರ್ತಿ 'ಭಾರದ್ವಾಜ' ಹೆಸರಿನಿಂದ ಪ್ರಖ್ಯಾತವಾಗಿದೆ. ಬುದ್ಧನ ಮುದ್ರಾಭಂಗಿಯಲ್ಲಿಯೇ ಕುಳಿತಿರುವ ಈ ಮೂರ್ತಿಯ ವಿಶೇಷವೆಂದರೆ ಇದರ ಯಾವ ಅಂಗದಲ್ಲಿ ಸ್ಪರ್ಶ ಮಾಡಿದರೆ ಸ್ಪರ್ಶ ಮಾಡಿದ ವ್ಯಕ್ತಿಯ ಆ ಅಂಗದ ನೋವು ನಿವಾರಣೆಯಾಗುತ್ತದೆ. ಮಮತಾಜೀಯವರು ಇದರ ಮೊಣಕಾಲುಗಳನ್ನು ಸ್ಪರ್ಶ ಮಾಡಿದರು ಏಕೆಂದರೆ ಅವರಿಗೆ ಯಾವಾಗಲೂ ಮೊಣಕಾಲುಗಳಲ್ಲಿ ನೋವು ಇರುತ್ತೆ ಆದರೆ ಅಂತಹ ಪವಾಡ ಏನೂ ನಡೆಯಲಿಲ್ಲ.
ಮಂದಿರಕ್ಕೆ ಅಂಟಿಕೊಂಡಂತಿದ್ದ ಬಾಜಾರಿನಲ್ಲಿ ಅನೇಕ ವಸ್ತುಗಳನ್ನು ಮಾರಲಾಗುತ್ತಿತ್ತು. ನಾವೂ ಕೂಡಾ ನೆನಪಿಗಾಗಿ ಕೆಲವು ವಸ್ತುಗಳನ್ನು ಕೊಂಡುಕೊಂಡೆವು. ಚೀನಾದ ಸಾಮಾನುಗಳು ಸ್ವಲ್ಪ ಸಸ್ತಾ ಆದರೂ ಜಪಾನಿನ ಹಸ್ತಶಿಲ್ಪದ ಮುಂದೆ ಇಲ್ಲ. ತೋದಾಯಜೀ ಮಂದಿರಕ್ಕೆ ಸೇರಿದ ಹಿರಣ್ಯವನವೊಂದಿದೆ. ಇಲ್ಲಿನ ಹಿರಣಗಳು ನಮ್ಮಲ್ಲಿನ ಕರುಗಳಂತಿವೆ. ಏಕೆಂದರೆ ಇಲ್ಲಿ ಹಿರಣಗಳಿಗೆ ಸೈಲಾನಿ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಕೊಂಡು ತಿನ್ನಿಸ್ತಾರೆ. ಪ್ರೊ. ತಾಕಾಹಾಶಿಸಾನ್‌ರವರು ಮಾತ್ರ ಹಿರಣಗಳಿಗೆ ಬಿಸ್ಕೆಟ್ ತಿನ್ನಿಸದೆ ಬಾಳೆಯ ಹಣ್ಣುಗಳನ್ನು ತಿನ್ನಿಸುತ್ತಾರೆ. ಜಿಂಕೆಗಳು ಎಷ್ಟು ಜೋರಿವೆಯೆಂದರೆ, ಒಂದು ಜಿಂಕೆಯಂತೂ ನನ್ನ ಕೈನಿಂದ ಬಾಳೆಯಹಣ್ಣನ್ನು ಕಿತ್ತುಕೊಂಡುಬಿಟ್ಟಿತು.
ಒಂದು ಕಾಲದಲ್ಲಿ ನಾರಾ ಜಪಾನಿನ ರಾಜಧಾನಿಯಾಗಿದ್ದಿತು. ಇಲ್ಲಿ ಯೂನಾನಿ, ತುರ್ಕಿ, ಚೀನಾಗಳ ಪ್ರಾಚೀನ ಅವಶೇಷಗಳು ಈಗಲೂ ಸಿಗುತ್ತವೆ. ಬೌದ್ಧ ಮಂದಿರಗಳಲ್ಲಿ ಪ್ರಾಚೀನ ವಿಚಾರಧಾರೆ ಮತ್ತು ಆಕೃತಿಗಳಿವೆ. ಇಲ್ಲಿ ಅಂಧ ವಿಶ್ವಾಸವಿಲ್ಲ. ಒಸಾಕಾದಲ್ಲಿನ 100 ಯೆನ್ ಅಂಗಡಿಯಲ್ಲಿ ಒಂದು ಸಣ್ಣ ಗಿಡ ಮತ್ತು ಪರ್ಸ್ ಖರೀದಿ ಮಾಡಿದ್ವಿ, ನಂತರ ತಿಳೀತು, ಗಿಡವನ್ನು ವಿಮಾನದೊಳಗೆ ಬಿಡೋಲ್ಲ ಅಂತ. ಅದನ್ನು ಕಾಗದದ ಸುರುಳಿಯಲ್ಲಿ ಸುತ್ತಿ ಅಟ್ಯಾಚಿಯ ಒಂದು ಬದಿಯಲ್ಲಿ ಇಡಲು ಒಬ್ಬರು ಮಿತ್ರರು ಸಲಹೆಯೊಂದನ್ನು ನೀಡಿದರು. ಎಂಟು-ಹತ್ತು ಗಂಟೆಗಳ ಕಾಲ ಅದು ಹಾಗೆಯೇ ಜೀವಂತವಿರುತ್ತೆ. ನಾನು ಹಾಗೆಯೇ ಮಾಡಿದೆ. ನಮ್ಮ ಸಾಮಾನುಗಳು ಕಾರ್ಗೋ ತಲುಪಿತು. ಎಲ್ಲಕ್ಕಿಂತ ಮೊದಲು ನಾನು ಕಾಗದದಲ್ಲಿ ಸುರುಳಿ ಸುತ್ತಿದ್ದ ಗಿಡವನ್ನು ಹೊರತೆಗೆದೆ. ಅದು ಜೀವಂತವಾಗಿತ್ತು! ಜಪಾನಿನ ನೆನಪುಗಳ ತರಹ!
COMMENTS