Waterfalls of Karnataka Information in Kannada: In this article, we are providing ಕರ್ನಾಟಕದ ಜಲಪಾತಗಳು for students and teachers. Students can use this Waterfalls of Karnataka Information in Kannada to complete their homework.
Waterfalls of Karnataka Information in Kannada: In this article, we are providing ಕರ್ನಾಟಕದ ಜಲಪಾತಗಳು for students and teachers. Students can use this Waterfalls of Karnataka Information in Kannada to complete their homework.
ಕರ್ನಾಟಕದ ಜಲಪಾತಗಳು Waterfalls of Karnataka Information in Kannada
ನದೀಪಾತ್ರ ಬಲು ಕಡಿದೂ ಆಳವೂ ಆಗಿರುವೆಡೆಯಲ್ಲಿ ನೀರಿನ ಧುಮುಕಾಟ (ವಾಟರ್ ಫಾಲ್), ಅಂಚು ಬಲು ಕಡಿದಾಗಿದ್ದರೆ ಅಲ್ಲಿ ನೀರು ಅತಿ ರಭಸದಿಂದ ನೆಗೆಯುವಾಗ, ನೆಲಸಂಪರ್ಕವೇ ಇಲ್ಲದೆ, ಹಲವಾರು ಅಡಿಗಳ ಆಳದಲ್ಲಿನ ತಳಕ್ಕೆ ಬೀಳಬಹುದು. ಜಲಪಾತಗಳು ಹಲವು ಅಡಿಗಳಿಂದ ನೂರಾರು ಅಡಿಗಳಷ್ಟು ಆಳದವರೆಗೆ ಧುಮುಕುವುವು. ಅವುಗಳ ಠೀವಿ, ಸಿಡಿಯುವ ತುಷಾರಗಳ ಚೆಲುವು, ಬಿಸಿಲಿನಲ್ಲಿ ಚೆಲ್ಲಾಡುವ ಬಣ್ಣಗಳ ಬೆಡಗು, ಭೋರ್ಗರೆಯುವ ಶಬ್ದಗಾಂಭೀರ್ಯ ಮತ್ತು ಪರಿಸದ ಸೃಷ್ಟಿಸೌಂದರ್ಯ ವೀಕ್ಷಕರ ಕಿವಿ ಕಣ್ಮನಗಳನ್ನು ಸೂರೆಗೊಳ್ಳುತ್ತವೆ. ಜಲಪಾತಗಳ ಚಲನಶಕ್ತಿಯನ್ನು ಉಪಯುಕ್ತವಾಗಿ ಪರಿವರ್ತಿಸಿಕೊಳ್ಳುವುದು ಕೂಡ ಸಾಧ್ಯ.
- ಜೋಗ್ ಜಲಪಾತ
- ವನಸಮುದ್ರ
- ಅಬ್ಬಿ ಜಲಪಾತ
- ಗೋಕಾಕ ಜಲಪಾತ
- ಕಲ್ಲತಗಿರಿ ಫಾಲ್ಸ್
- ಮಾಗೋಡು ಜಲಪಾತ
- ಸಾತೋಡಿ ಜಲಪಾತ
- ಬೆಣ್ಣೆಹೊಳೆ ಜಲಪಾತ
ಜೋಗ್ ಜಲಪಾತ: ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲಿ ಕರ್ನಾಟಕದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿ ಹರಿಯುವ ಶರಾವತಿ ನದಿಯಜಲಪಾತ (ಗೇರುಸೊಪ್ಪ; ಜೋಗ್) ಅತ್ಯಂತ ರಮಣೀಯವಾದುದು. ಶರಾವತಿ ಇಲ್ಲಿ ರಾಜಾ, ರೋರರ್, ರಾಕೆಟ್ ಮತ್ತು ಲೇಡಿ (ರಾಣಿ) ಎಂಬ ನಾಲ್ಕು ಭಾಗಗಳಾಗಿ 830 ಅಡಿ ಎತ್ತರದಿಂದ ಭೋರ್ಗರೆಯುತ್ತ ಕಳಕ್ಕೆ ರಭಸವಾಗಿ ಧುಮುಕುತ್ತದೆ. ಹಾಲಿನ ರಾಶಿಯಂತೆ ನೂರಗೂಡಿದ ನೀರಿನ ಪ್ರವಾಹವೂ ಅಂತರಾಳದಲ್ಲಿ ಶೋಭಿಸುವ ವಿವಿಧ ವರ್ಣಗಳ ಸಾವಿರಾರು ಕಾಮನಬಿಲ್ಲುಗಳ ದೃಶ್ಯವೂ ಉಪಮಾತೀತವಾಗಿವೆ. ಇಲ್ಲಿನ ಜಲಸಾಮರ್ಥ್ಯದ ಸಹಾಯದಿಂದ ಜೋಗ್ (ಮಹಾತ್ಮಾಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ್ರ) ಮತ್ತು ಶರಾವತಿ ಕಣಿವೆಯ ಹೊಸ ಜಲವಿದ್ಯುಚ್ಛಕ್ತಿ ಯಂತ್ರಾಗಾರಗಳು ನಡೆಯುತ್ತಿವೆ. ಇಲ್ಲಿ ಏಷ್ಯದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಜಲವಿದ್ಯುಚ್ಛಕ್ತಿ ನಿರ್ಮಾಣವಾಗುತ್ತಿದೆ.
ವನಸಮುದ್ರ: ಮಂಡ್ಯ ಜಿಲ್ಲೆಯಲ್ಲಿದೆ. ಭಾರತದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಇದನ್ನು 1902ರಲ್ಲಿ ಸ್ಥಾಪಿಸಲಾಯಿತು. ಕಾವೇರಿ ನದಿ ಎರಡು ಕವಲುಳಾಗಿ 91 ಮೀಟರ್ ಎತ್ತರದಿಂದ ಧುಮ್ಮಿಕ್ಕಿ ಜಲಪಾತ ಸೃಷ್ಟಿಯಾಗಿದೆ. ಇಲ್ಲಿ ಧುಮುಕುವ ಕಾವೇರಿ ನದಿಯ ಪಶ್ಚಿಮ ಕವಲಿಗೆ ಗಗನಚುಕ್ಕಿ ಎಂದೂ ಅಲ್ಲಿಗೆ ಸುಮಾರು ಒಂದುವರೆ ಕಿ.ಮೀ. ದೂರದಲ್ಲಿ ಧುಮುಕುವ ಪೂರ್ವದ ಕವಲಿಗೆ ಭರಚುಕ್ಕಿ ಎಂದೂ ಹೆಸರು. ಶಿವನಸಮುದ್ರ ನೀರನ್ನು ಬಳಸಿಕೊಂಡು ಹತ್ತಿರದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರವಿರುವ ಪ್ರದೇಶದಲ್ಲಿ ಬ್ಲಫ್ ಇದೆ. ಇವು ನೋಡುಗರಿಗೆ ತುಂಬಾ ಆಕರ್ಷಣೀಯವಾಗಿದೆ.
ಅಬ್ಬಿ ಜಲಪಾತ: ಮಡಿಕೇರಿಯಿಂದ 8 ಕಿ.ಮೀ. ದೂರವಿರುವ ಸುಮಾರು 70 ಅಡಿ ಎತ್ತರದಿಂದ ಧುಮುಕುವ ಜಲಪಾತ, ಅಬ್ಬಿ ಜಲಪಾತ ಮಳೆಗಾಲದಲ್ಲಿ ತುಂಬಿರುತ್ತದೆ.
ಗೋಕಾಕ ಜಲಪಾತ: ಬೆಳಗಾವಿ ಜಿಲ್ಲೆಯ ಗೋಕಾಕ ಬಳಿಯ ಜಲಪಾತವನ್ನು ಜಗತ್ತಿನ ಪ್ರಸಿದ್ಧ ನಯಾಗರಾ ಜಲಪಾತಕ್ಕೆ ಹೋಲಿಸಲಾಗುತ್ತದೆ. ಬೆಳಗಾವಿಯಿಂದ 58 ಕಿ.ಮೀ. ದೂರವಿದೆ. ಇಲ್ಲಿ ಘಟಪ್ರಭಾ ನದಿಯು 52 ಮೀಟರ್ ಎತ್ತರದಿಂದ ಧುಮ್ಮಿಕ್ಕಿ ಆಳವಾದ ಕಣಿವೆಗೆ ಬೀಳುತ್ತದೆ. ಜಲಪಾತಕ್ಕಿಂತ ಸ್ವಲ್ಪ ಮುಂಚೆಯೇ ನದಿ ದಡಗಳ ನಡುವೆ ಜನಸಂಚಾರಕ್ಕೆ ಅನುಕೂಲ ಕಲ್ಪಿಸಲು 20 ಮೀಟರ್ ಉದ್ದದ ತೂಗುಸೇತುವೆ - ನಿರ್ಮಿಸಿದ್ದು ಇದರ ಮೇಲೆ ನಡೆದಾಡುವುದು ಬಹಳ ರೋಮಾಂಚಕಾರಿಯಾಗಿದೆ.
ಹೊಗೇನಕಲ್ ಜಲಪಾತ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದೆ. ಇದರ ಆಕರ್ಷಣೆ 400 ಎಕರೆ ಪ್ರದೇಶದ ದ್ವೀಪ, ಜಲಪಾತವನ್ನು ನೋಡಲು ವೀಕ್ಷಣಾ ಗೋಪುರ, ತೂಗುಸೇತುವೆ, ತಪ್ಪ ಸೌಲಭ್ಯಗಳಿವೆ. ಇಲ್ಲಿ ಕಾವೇರಿ ನದಿ ಧುಮ್ಮಿಕ್ಕಿ ಹರಿಯುತ್ತದೆ. ಬೆಂಗಳೂರಿನಿಂದ ಧರ್ಮಪುರಿ ಮಾರ್ಗವಾಗಿ ಸುಮಾರು 180 ಕಿ.ಮೀ. ದೂರವಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿದೆ.
ಕಲ್ಲತಗಿರಿ ಫಾಲ್ಸ್: ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ 10 ಕಿ.ಮೀ. ದೂರದಲ್ಲಿರುವ ಕಲ್ಲತ್ತಗಿರಿ ಫಾಲ್ಸ್ ಹೆಚ್ಚು ಜನಪ್ರಿಯ ಸ್ಥಳ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಹರಿದುಬರುವ ನೀರು ಸುಮಾರು 122 ಮೀಟರ್ ಎತ್ತರದಿಂದ ಇಲ್ಲಿಗೆ ಧುಮುಕುತ್ತದೆ. ವೀರಭದ್ರೇಶ್ವರ ದೇವಾಲಯದ ಅಂಗಳದಲ್ಲಿರುವ ಕಲ್ಲತ್ತಿ ಜಲಪಾತ ಧಾರ್ಮಿಕ ಸ್ಥಳವೂ ಆಗಿದೆ.
ಮಾಗೋಡು ಜಲಪಾತ: ಜಲಪಾತಗಳ ಆಗರ ಎಂದೇ ಹೆಸರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನಲ್ಲಿ ಮಾಗೋಡು ಫಾಲ್ಸ್ ಅತೀ ರಮಣೀಯ ಆಗಿದೆ. ಘಟ್ಟದ ಮೇಲೆ ಬೇಡ್ತಿ ನದಿ ಮತ್ತು ಘಟ್ಟದ ಕೆಳಗೆ ಹಂಗಾವಳಿ ಎಂಬ ಹೆಸರು ಪಡೆದಿರುವ ಈ ನದಿಯು ಮಾಗೋಡು ಎಂಬಲ್ಲಿ ಸುಮಾರು 640 ಅಡಿ ಎತ್ತರದಿಂದ ಧುಮ್ಮಿಕ್ಕಿ ಮನಮೋಹಕ ಜಲಪಾತವನ್ನುಂಟು ಮಾಡಿದೆ.
ಸಾತೋಡಿ ಜಲಪಾತ: ಸಾತೋಡು ಜಲಪಾತವನ್ನು ಜನ ನಯಾಗರ ಜಲಪಾತ ಎಂದು ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ 32 ಕಿ.ಮೀ. ದೂರ ಇದೆ. ಗಣೇಶಗುಡಿಯಿಂದ ಕಚ್ಚಾ ರಸ್ತೆಯಲ್ಲಿ ಹೋಗುತ್ತಿದ್ದರೆ ಜುಳುಜುಳು ಸಾಥೋಡು ಜಲಪಾತ ತೆರೆದುಕೊಳ್ಳುತ್ತದೆ. ಇದು ಸುಮಾರು 50 ಅಡಿಗಳ ಎತ್ತರದಿಂದ ಕೆಳಕ್ಕೆ ಬೀಳುವ ಜಲಪಾತ.
ಬೆಣ್ಣೆಹೊಳೆ ಜಲಪಾತ: ಜಲಪಾತಗಳ ಆಗರ ಉತ್ತರ ಕರ್ನಾಟಕ ಜಿಲ್ಲೆಯ ಶಿರಸಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿದೆ. ಅಘನಾಶಿನಿ ನದಿಯು ಪಶ್ಚಿಮಘಟ್ಟದ ದೇವಿಮನೆ ಅರಣ್ಯಘಟ್ಟದಲ್ಲಿದೆ. ಸುಮಾರು 200 ಅಡಿ ಎತ್ತರದಿಂದ ಹಾಲಿನ ನೊರೆಯಂತೆ ಕೆಳಕ್ಕೆ ಬೀಳುವ ಈ ಜಲಪಾತ ನೋಡಲು ಸುಂದರವಾಗಿದೆ.
COMMENTS