Sarvagna Biography in Kannada Language: In this article, we are providing ಸರ್ವಜ್ಞ ಜೀವನ ಚರಿತ್ರೆ for students and teachers. Students can use this Sarvagna Life History in Kannada to complete their homework. ಸರ್ವಜ್ಞನೆಂಬುವನು ಗರ್ವದಿಂದಾದವನೆ ಸರ್ವರೊಳೊಂದೊಂದು ನುಡಿಕಲಿತು ವಿದ್ಯದ ಪರ್ವತವೇ ಆದ ಸರ್ವಜ್ಞ 16-17ನೇ ಶತಮಾನದ ವಚನಕಾರನಾದ ಈತನ ಜೀವನದ ಬಗ್ಗೆ ಖಚಿತವಾದ ಯಾವುದೇ ಸಂಗತಿ ತಿಳಿದುಬಂದಿಲ್ಲ. ಧಾರವಾಡ ಜಿಲ್ಲೆಯ ಅಂಬಲೂರಿನಲ್ಲಿ ಜನನ. ಸರ್ವಜ್ಞನ ರಚನೆಗಳನ್ನು ವಚನಗಳು ಎಂದು ಕರೆಯುವುದು ರೂಢಿಯಲ್ಲಿದ್ದರೂ ಅವು ವಾಸ್ತವವಾಗಿ ತ್ರಿಪದಿಗಳು. ಅವನ ಹೆಸರಿನಲ್ಲಿ 2000ಕ್ಕೂ ಹೆಚ್ಚು ಸಂಖ್ಯೆಯ ತ್ರಿಪದಿಗಳಿವೆ. ಅವುಗಳಲ್ಲಿ ಸಾವಿರದಷ್ಟು ಪ್ರಕ್ಷೇಪ ಎಂದು ಹೇಳಲಾಗಿದೆ. Read also : Basaveshwara Jivan Charitra Kannadak, Purandara Dasa Jivan Charitra in Kannada Language
Sarvagna Biography in Kannada Language: In this article, we are providing ಸರ್ವಜ್ಞ ಜೀವನ ಚರಿತ್ರೆ for students and teachers. Students can use this Sarvagna Life History in Kannada to complete their homework.
ಸರ್ವಜ್ಞ ಜೀವನ ಚರಿತ್ರೆ Sarvagna Biography in Kannada
ಸರ್ವರೊಳೊಂದೊಂದು ನುಡಿಕಲಿತು ವಿದ್ಯದ
ಪರ್ವತವೇ ಆದ ಸರ್ವಜ್ಞ
16-17ನೇ ಶತಮಾನದ ವಚನಕಾರನಾದ ಈತನ ಜೀವನದ ಬಗ್ಗೆ ಖಚಿತವಾದ ಯಾವುದೇ ಸಂಗತಿ ತಿಳಿದುಬಂದಿಲ್ಲ. ಧಾರವಾಡ ಜಿಲ್ಲೆಯ ಅಂಬಲೂರಿನಲ್ಲಿ ಜನನ. ಸರ್ವಜ್ಞನ ರಚನೆಗಳನ್ನು ವಚನಗಳು ಎಂದು ಕರೆಯುವುದು ರೂಢಿಯಲ್ಲಿದ್ದರೂ ಅವು ವಾಸ್ತವವಾಗಿ ತ್ರಿಪದಿಗಳು. ಅವನ ಹೆಸರಿನಲ್ಲಿ 2000ಕ್ಕೂ ಹೆಚ್ಚು ಸಂಖ್ಯೆಯ ತ್ರಿಪದಿಗಳಿವೆ. ಅವುಗಳಲ್ಲಿ ಸಾವಿರದಷ್ಟು ಪ್ರಕ್ಷೇಪ ಎಂದು ಹೇಳಲಾಗಿದೆ.
ಸರ್ವಜ್ಞ ವೀರಶೈವ ಮತದವನು ಎಂದು ತೋರಿದರೂ ಇವನದು ಮತಾತೀತವಾದ ವಿಶಾಲದೃಷ್ಟಿ, ಸರ್ವಜ್ಞನ ಜಾತಿ ಮಾನವ ಜಾತಿ. ಅವನ ಮತ ದೇವಮತ, ಅವನ ಕಾಲ ಸರ್ವಕಾಲ ಎಂದಿದ್ದಾರೆ ಬೇಂದ್ರೆಯವರು. ನಿರ್ಭಿತ ಸತ್ಯನಿಷ್ಠುರವಾದ ವ್ಯಕ್ತಿತ್ವ, ಅಗಾಧ ಪಾಂಡಿತ್ಯ, ಅಪಾರ ಜೀವನಾನುಭವ, ಬಲು ತೀಕ್ಷ್ಮವಾದ ಆದರೆ ಅತಿ ಸರಳವಾದ ಭಾಷೆ, ಜಾನಪದ ಸತ್ವ, ಸಮಾಜದ ಮೂಢನಂಬಿಕೆಗಳನ್ನು ಕಟುವಾಗಿ ಟೀಕಿಸುವ ಪ್ರಾಮಾಣಿಕತೆಯಿರುವ ಸರ್ವಜ್ಞನ ತ್ರಿಪದಿಗಳು ಕನ್ನಡದ ಅತ್ಯಂತ ಜನಪ್ರಿಯ ವಚನಗಳಾಗಿವೆ. ತಮಿಳಿನ ತಿರುವಳ್ಳವರ್, ತೆಲುಗಿನ ವೇಮನರಂತೆ ಕನ್ನಡದಲ್ಲಿ ಸರ್ವಜ್ಞನ ಸ್ಥಾನ ವಿಶಿಷ್ಟವಾದದ್ದು.
ಸಮಾಜದ ರೋಗರುಜಿನಗಳನ್ನು ಬಯಲಿಗೆಳೆದು ಅವಕ್ಕೆ ಚಿಕಿತ್ಸೆ ಮಾಡುತ್ತಾ, ತಿಳಿವನ್ನು ತೋರುತ್ತಾ, ನಾಡಿನಲ್ಲೆಲ್ಲಾ ಸಂಚರಿಸಿದ ಪರಿವ್ರಾಜಕ ಸರ್ವಜ್ಞ ಇವನ ಒಂದೊಂದು ತ್ರಿಪದಿಯೂ ಸ್ವಯಂಪೂರ್ಣವಾದ ಮುಕ್ತ ಅಥವಾ ಸುಭಾಷಿತ. ಈತನ ತ್ರಿಪದಿಯಲ್ಲಿ ಪ್ರಸ್ತಾಪವಾಗದಿರುವ ವಿಷಯವೇ ಇಲ್ಲ. ಅವುಗಳಲ್ಲಿ ನೀತಿಯಿದೆ, ತತ್ವವಿದೆ, ವಿವೇಕವಿದೆ, ವಿಡಂಬನೆಯಿದೆ, ಅನುಭವ ರಸಾಯನವಿದೆ. ಎಲ್ಲವೂ ಸರಳವಾಗಿ ರೂಪಿತವಾಗಿವೆ.
ಸರ್ವಜ್ಞ ಯಾವುದಕ್ಕೂ ಹೆದರಿದವನಲ್ಲ. ತಾನು ಕಂಡ ಸಮಾಜದ ಹುಳುಕುಗಳನ್ನು ನಿರ್ಭಯವಾಗಿ ಟೀಕಿಸಿದ. ಜಾತಿಕುಲಗಳನ್ನು ಖಂಡಿಸಿದ ಕುಲವಿಲ್ಲ ಯೋಗಿಗೆ ಛಲವಿಲ್ಲ ಜ್ಞಾನಿಗೆ, ತೊಲಗಂಬವಿಲ್ಲ ಗಗನಕ್ಕೆ, ಸ್ವರ್ಗದಲ್ಲಿ, ಹೊಲಗೇರಿಯಿಲ್ಲ ಸರ್ವಜ್ಞ ಮೂರ್ಖರ ಲಕ್ಷಣವನ್ನು ಕೇವಲ ಮೂರೇ ಸಾಲಿನಲ್ಲಿ ಸೊಗಸಾಗಿ ವರ್ಣಿಸಿದ್ದಾನೆ. “ಮೂರ್ಖಂಗೆ ಬುದ್ದಿಯನು ನೂರ್ಕಾಲ ಹೇಳಿದರೆ, ಗೋರ್ಕಲ್ಲ ಮೇಲೆ ಮಳೆ ಹುಯಿದರಾ ಕಲ್ಲು ಹೀರ್ಕೊಂಬುದುಂಟೇ ಸರ್ವಜ್ಞ' ಅನುಭವವಿಲ್ಲದೆ ಒಣ ಪಾಂಡಿತ್ಯದಿಂದ ಮರೆಯುತ್ತಿದ್ದವರನ್ನು ಕಂಡು “ವೇದವೇ ಹಿರಿದೆಂದು ವಾದವನು ಮಾಡುವಿರಿ. ವೇದದಲೇನು ಅರಿದಿಹುದು? ಅನುಭವಿಯ, ವೇದವೇ ವೇದ ಸರ್ವಜ್ಞ
ಕನ್ನಡದ ಬಗೆಗೆ ಸರ್ವಜ್ಞನ ಅಭಿಮಾನ ಅಪಾರ, “ತನ್ನ ಸಿರಿಯನು ತಾನು ಕನ್ನಡಿಯು ಕಾಂಬುದೇ ?” ಎನ್ನುತ್ತಾನೆ. ರೈತರ ನಾಡಾದ ಭಾರತದಲ್ಲಿ “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎನ್ನುತ್ತಾನೆ ಸರ್ವಜ್ಞ ಅವನು ಹೇಳದ ವಿಷಯವಿಲ್ಲ. ಹೆಣ್ಣು, ಹೊನ್ನು, ಮಣ್ಣು, ಓದು, ನಕ್ಷತ್ರ ಫಲ, ಭಾಷೆ, ಜಾತಿ, ದೇಶ, ವೈದ್ಯ, ಒಗಟು ಹೀಗೆ ಅವನ ವಸ್ತು ವೈವಿಧ್ಯ ಅಪಾರವಾದದ್ದು.
ಈತನು ಸರಳವಾದ ಸುಲಭ ಶೈಲಿಯಲ್ಲಿ ಉಪಮಾನ, ದೃಷ್ಟಾಂತಗಳ ಮೂಲಕ ಜನಸಾಮಾನ್ಯರ ಮನಸ್ಸಿಗೆ ನಾಟುವಂತೆ ಹೇಳುತ್ತಾನೆ. ಇವನ ತ್ರಿಪದಿಗಳು ಗಾದೆಗಳಂತೆ ನಾಡಿನಲ್ಲಿ ಮನೆಮಾತಾಗಿವೆ. ಹೀಗೆ ಎಲ್ಲ ದೃಷ್ಟಿಯಿಂದಲೂ “ಸರ್ವಜ್ಞ” ಎಂಬ ಹೆಸರನ್ನು ಸಾರ್ಥಕಪಡಿಸಿಕೊಂಡ ಕವಿ ಇವನು.
COMMENTS