Purandara Dasa Jivan Charitra in Kannada Language: In this article, we are providing ಪುರಂದರದಾಸರು ಇತಿಹಾಸ for students and teachers. Students can use this Purandara Dasa Jivan Charitra Kannada to complete their homework. ದಾಸರ ನಿಜನಾಮ ಶೀನಪ್ಪನಾಯಕ, ಪುಣೆಯ ಬಳಿ ಪುರಂದರಗಢದಲ್ಲಿ 1484ರಲ್ಲಿ ಜನನ. ತಂದೆಯ ಹೆಸರು ವರದಪ್ಪನಾಯಕ. ವೃತ್ತಿ ಚಿನ್ನದ ವ್ಯಾಪಾರ. ಪರಮಲೋಭಿ, ಹೆಂಡತಿ ಸರಸ್ವತಿ ಮಹಾಸಾದ್ವಿ. ಉದಾರಿ, ದೈವಭಕ್ತಿ, ವ್ರತ-ನೇಮಗಳೆಂದರೆ ಅತೀವ ಶ್ರದ್ದೆ. ಒಮ್ಮೆ ನಡೆದ ವಿಚಿತ್ರ ಸಂಗತಿಯಿಂದ ತನ್ನನ್ನು ಮೀರಿದ ಶಕ್ತಿಯ ಕೈವಾಡವಿದೆ ಎಂದು ಅರಿವು ಮೂಡಿತು. ಇದರಿಂದ ಕಡುಲೋಭಿ ಶೀನಪ್ಪನಾಯಕ ಪರಮ ವೈರಾಗ್ಯ ಮೂರ್ತಿಯಾದ. ತನ್ನ ಐಶ್ವರ್ಯವನ್ನೆಲ್ಲಾ ದಾನ ಮಾಡಿದ. ತನಗೆ ಸನ್ಮಾರ್ಗ ತೋರಿದ ಪತ್ನಿಯನ್ನು ಕೊಂಡಾಡಿದ. Read also : ಬಸವೇಶ್ವರ ಚರಿತ್ರೆ Basaveshwara Jivan Charitra Kannada, Essay on Rajendra Prasad in Kannada Language, Essay on Lal Bahadur Shastri in Kannada language
Purandara Dasa Jivan Charitra in Kannada Language: In this article, we are providing ಪುರಂದರದಾಸರು ಇತಿಹಾಸ for students and teachers. Students can use this Purandara Dasa Jivan Charitra Kannada to complete their homework.
ದಾಸರ ನಿಜನಾಮ ಶೀನಪ್ಪನಾಯಕ, ಪುಣೆಯ ಬಳಿ ಪುರಂದರಗಢದಲ್ಲಿ 1484ರಲ್ಲಿ ಜನನ. ತಂದೆಯ ಹೆಸರು ವರದಪ್ಪನಾಯಕ. ವೃತ್ತಿ ಚಿನ್ನದ ವ್ಯಾಪಾರ. ಪರಮಲೋಭಿ, ಹೆಂಡತಿ ಸರಸ್ವತಿ ಮಹಾಸಾದ್ವಿ. ಉದಾರಿ, ದೈವಭಕ್ತಿ, ವ್ರತ-ನೇಮಗಳೆಂದರೆ ಅತೀವ ಶ್ರದ್ದೆ. ಒಮ್ಮೆ ನಡೆದ ವಿಚಿತ್ರ ಸಂಗತಿಯಿಂದ ತನ್ನನ್ನು ಮೀರಿದ ಶಕ್ತಿಯ ಕೈವಾಡವಿದೆ ಎಂದು ಅರಿವು ಮೂಡಿತು. ಇದರಿಂದ ಕಡುಲೋಭಿ ಶೀನಪ್ಪನಾಯಕ ಪರಮ ವೈರಾಗ್ಯ ಮೂರ್ತಿಯಾದ. ತನ್ನ ಐಶ್ವರ್ಯವನ್ನೆಲ್ಲಾ ದಾನ ಮಾಡಿದ. ತನಗೆ ಸನ್ಮಾರ್ಗ ತೋರಿದ ಪತ್ನಿಯನ್ನು ಕೊಂಡಾಡಿದ.
ಹರಿದಾಸ ದೀಕ್ಷೆ ಪಡೆಯಲು ಹಂಪೆಯಲ್ಲಿದ್ದ ವ್ಯಾಸತೀರ್ಥರಲ್ಲಿಗೆ ತೆರಳಿದ. ಮುಂದೆ ಅವರು ಪುರಂದರದಾಸರೆಂದು ಪ್ರಖ್ಯಾತರಾದರು. ನಿರರ್ಗಳವಾಗಿ, ಸುಲಲಿತವಾಗಿ ಭಗವನ್ನಾಮ ಕೀರ್ತನೆಗಳು ಅವರ ಬಾಯಿಂದ ಹೊರಹೊಮ್ಮಿತು. ಪುರಂದರದಾಸರು ಪ್ರಸಿದ್ಧ ವಾಗ್ಗೇಯಕಾರರಾದರು. ಭಾರತದ ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು. ಅಲ್ಲಿಯ ದೇವರುಗಳನ್ನು ಕುರಿತು ಹಾಡಿದರು. ಕೈಯಲ್ಲಿ ತಂಬೂರಿ, ಕಾಲಿಗೆ ಗೆಜ್ಜೆ ಕಟ್ಟಿ ಮನದ ಮಾಲಿನ್ಯ ಕಳೆಯುವ ಬಗೆಗೆ ಜನತೆಗೆ ಸಂದೇಶಿಸಿದರು. ಅನುಭವ ಮತ್ತು ಅನುಭಾವಗಳು ಅವರ ಹಾಡಿನಲ್ಲಿ ಅಣಿಮುತ್ತುಗಳಾಗಿ ಹೊರಬಿದ್ದವು. ಹಾಡಿದ್ದೆಲ್ಲಾ ಗೀತೆಯಾಯಿತು. ಅವರ ನುಡಿಗಳು ಇಂದಿಗೂ ನಾಣ್ಣುಡಿ ಜಾಣ್ಣುಡಿಗಳಾಗಿವೆ.
ದಾಸ ಸಾಹಿತ್ಯಕ್ಕೆ ಮತ್ತು ಕರ್ನಾಟಕ ಸಂಸ್ಕೃತಿಗೆ ಇವರ ಕೊಡುಗೆ ಅಪಾರವಾದದ್ದು. 'ಪುರಂದರೋಪನಿಷತ್ತು' ಎಂದು ಹೆಸರಿರುವ ಇವರ ಸಾಹಿತ್ಯ, ಸತ್ವವೂ, ಮಹತ್ವವೂ ಆಗಿ ಜನಮನದಲ್ಲಿ ಅಚ್ಚಳಿಯದೆ ಸ್ತುತಿಸಲ್ಪಟ್ಟಿದೆ, ಹರಿಗುರುಗಳ ಸ್ಮರಣೆ, ಸ್ತುತಿ, ಅಂತರಂಗ ವೇದನೆ, ಕೃಷ್ಣಲೀಲೆ, ಸಮಾಜ ವಿಮರ್ಶ, ಸಮಾಜ ಬೋಧನೆಗಳು ಇವರ ಹಾಡುಗಳಲ್ಲಿ ಕಾಣಬಹುದು,
ಪುರಂದರದಾಸರು ರಚಿಸಿದ ಪದಗಳು ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ಎಂದು ಪ್ರತೀತ. ಆದರೆ ನಮಗೆ ದೊರೆತಿರುವುದು ಅತ್ಯಲ್ಪ. ಕೀರ್ತನೆಗಳಲ್ಲದೆ ಪುರಂದರದಾಸರು ಸುಳಾದಿಗಳನ್ನು, ಉಗಾಭೋಗಗಳನ್ನು ರಚಿಸಿದ್ದಾರೆ. ಸುಳಾದಿಗಳು ತಾಳ ಪ್ರಧಾನ ರಚನೆಗಳು, ಉಗಾಭೋಗಗಳಂದರೆ ಬೇರೆ ಬೇರೆ ರಾಗ, ತಾಳಗಳಲ್ಲಿ ಹಾಡಬಹುದಾದ ಪಲ್ಲವಿ, ಚರಣಗಳೆಂಬ ವಿಭಾಗಗಳಿಲ್ಲದ ರಚನೆಗಳು, ಅವರ ರಚನೆಗಳಲ್ಲಿ ಹಲವಾರು ಸಂಗೀತ ವಾದ್ಯಗಳ ಅನೇಕ ರಾಗಗಳ ಉಲ್ಲೇಖವಿದೆ. ವಿದ್ವಾಂಸರ, ಪಂಡಿತರ ಸ್ವತ್ತಾಗಿದ್ದ ಕರ್ನಾಟಕ ಸಂಗೀತವನ್ನು ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಿದರು. ನೂರೆಂಟು ತಾಳಗಳಲ್ಲಿ ಏಳನ್ನು ಮಾತ್ರ ಉಳಿಸಿಕೊಂಡು ಸಂಗೀತಾಭ್ಯಾಸವನ್ನು ಸರಳಗೊಳಿಸಿದರು. ಸಂಗೀತಾಭ್ಯಾಸಿಗಳಿಗೆ ಉಪಯುಕ್ತವಾದ ಅಲಂಕಾರಗಳನ್ನೂ ಹಾಡುಗಳನ್ನು ರಚಿಸಿದರು. ಸಹಜ ಪ್ರಾಸ, ಒಳ್ಳೆಯ ಚಿತ್ರಣಗಳಿಂದ ತುಂಬಿದ ಇವರ ರಚನೆಗಳು ಮನೋಜ್ಞವಾಗಿದ್ದು ತಮ್ಮ ಗುರುಗಳಿಂದಲೇ 'ದಾಸರೆಂದರೆ ಪುರಂದರ ದಾಸರಯ್ಯ” ಎಂದು ಪ್ರಶಂಸೆಗೆ ಪಾತ್ರರಾದರು. ಸಂಗೀತ ದೃಷ್ಟಿಯಿಂದಲ್ಲದೆ, ತತ್ವಪ್ರತಿಪಾದನೆ ದೃಷ್ಟಿಯಿಂದಲೂ ಪುರಂದರದಾಸರ ಕೀರ್ತನೆಗಳು ಅಮೂಲ್ಯವಾದವು.
ಇವರು ಮುಖ್ಯವಾಗಿ ಭಕ್ತಿಗೀತೆಗಳನ್ನು ರಚಿಸಿ ಜನಸಾಮಾನ್ಯರಿಗೂ, ಕನ್ನಡ ಸಾಹಿತ್ಯಕ್ಕೂ ಬೆಸುಗೆಯನ್ನುಂಟು ಮಾಡಿದ ದಾಸವರೇಣ್ಯರು; 'ಪುರಂದರದಾಸರು 1564ರಲ್ಲಿ ರಕ್ತಾಕ್ಷಿ ಸಂವತ್ಸರದ ಪುಷ್ಯ ಬಹುಳ ಅಮಾವಾಸ್ಯೆಯಂದು ಹಂಪೆಯಲ್ಲಿ ದೈವಾಧೀನರಾದರು. ಹಂಪೆಯಲ್ಲಿ ಅವರು ತುಂಗಭದ್ರಾತೀರದಲ್ಲಿ ವಾಸಿಸುತ್ತಿದ್ದ ಸ್ಥಳ “ಪುರಂದರ ಮಂಟಪ' ಎಂದು ಈಗಲೂ ಪ್ರಸಿದ್ಧವಾಗಿದೆ
Admin


100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS