Essay on Mysore in Kannada Language: In this article, we are providing ಮೈಸೂರು ಬಗ್ಗೆ ಪ್ರಬಂಧ for students and teachers. ಮೈಸೂರು ಇತಿಹಾಸ Students can use this History of Mysore in Kannada Language to complete their homework. ಹಿಂದೆ ದುಷ್ಟರಾಕ್ಷಸ ಮಹಿಷಾಸುರ ಇಲ್ಲಿ ಆಳುತ್ತಿದ್ದನೆಂದೂ, ಅವನ ಉಪಟಳದಿಂದ ಬೆಂದ ಜನರು ಚಾಮುಂಡೇಶ್ವರಿಯ ಮೊರೆ ಹೊಕ್ಕರೆಂದೂ, ಆಕೆ ಸಿಂಹವಾಹನವನ್ನೇರಿ ಬಂದು ಆ ರಾಕ್ಷಸನನ್ನು ಸಂಹರಿಸಿದಳೆಂದೂ ಕಥೆ ಪ್ರಚಲಿತವಿದೆ. ಮಹಿಷಾಸುರನ ಊರು 'ಮಹಿಷರು' ಆಗಿ ಮೈಸೂರು ಆಯಿತು ಎಂದು ನಂಬಿಕೆಯಿದೆ. Read also : Essay on Bijapur in Kannada, Essay on Srirangapatna in Kannada, Essay on Bengaluru in Kannada.
Essay on Mysore in Kannada Language: In this article, we are providing ಮೈಸೂರು ಬಗ್ಗೆ ಪ್ರಬಂಧ for students and teachers. ಮೈಸೂರು ಇತಿಹಾಸ Students can use this History of Mysore in Kannada Language to complete their homework.
ಮೈಸೂರು ಬಗ್ಗೆ ಪ್ರಬಂಧ Essay on Mysore in Kannada Language
ಹಿಂದೆ ದುಷ್ಟರಾಕ್ಷಸ ಮಹಿಷಾಸುರ ಇಲ್ಲಿ ಆಳುತ್ತಿದ್ದನೆಂದೂ, ಅವನ ಉಪಟಳದಿಂದ ಬೆಂದ ಜನರು ಚಾಮುಂಡೇಶ್ವರಿಯ ಮೊರೆ ಹೊಕ್ಕರೆಂದೂ, ಆಕೆ ಸಿಂಹವಾಹನವನ್ನೇರಿ ಬಂದು ಆ ರಾಕ್ಷಸನನ್ನು ಸಂಹರಿಸಿದಳೆಂದೂ ಕಥೆ ಪ್ರಚಲಿತವಿದೆ. ಮಹಿಷಾಸುರನ ಊರು 'ಮಹಿಷರು' ಆಗಿ ಮೈಸೂರು ಆಯಿತು ಎಂದು ನಂಬಿಕೆಯಿದೆ.
ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು ಹಾಗೂ ಕನ್ನಡ ನಾಡಿನ ಇತಿಹಾಸದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಜಮನೆತನದ ಒಡೆಯರು ಸುಮಾರು 500 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ಆಳಿದರು.
ಒಡೆಯರ ಕಾಲದ ನವರಾತ್ರಿ ಒಂದು ಸಂಭ್ರಮ ಕಾಲ, ವಿಜಯನಗರದ ಜಂಬೂಸವಾರಿ ಅದಕ್ಕೆ ಕಳಶವಿಟ್ಟಂತೆ. ಇಂದಿಗೂ ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತುಬರುವ ಜಂಬೂಸವಾರಿಯ ಸಂಭ್ರಮ ಅವರ್ಣನೀಯ. ಚಾಮುಂಡೇಶ್ವರಿ ದೇವಾಲಯವಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ. ಮೈಸೂರು ಬೆಟ್ಟದ ಮೇಲೆ ರಾಜೇಂದ್ರ ವಿಲಾಸ ಅರಮನೆಯಿದೆ. ಬೆಟ್ಟದ ಬೃಹತ್ ಗಾತ್ರದ ನಂದಿಗೆ ಸಾಟಿಯಾದ ನಂದಿ ತುಂಬ ಅಪರೂಪ. ಇದು ಅಖಂಡ ಶಿಲೆಯ ಕೃತಿ.
ಕೋಟೆ ಗೋಡೆಯುಳ್ಳ ಸುಂದರ ಅರಮನೆ ಆಧುನಿಕ ಶೈಲಿಯ ಚೆಲುವಿನ ನಿರ್ಮಾಣ. ವಿಶಾಲವಾದ ಈ ಅರಮನೆಗೆ ಅಂತಸ್ತುಗಳಿವೆ. ದರ್ಬಾರು ಹಾಲಿನಲ್ಲಿರುವ ದಂತ ಹಾಗೂ ಚಿನ್ನದ ಸಿಂಹಾಸನ, ಉನ್ನತ ಅಲಂಕೃತ ಕಂಬಗಳು, ಗೊಂಬೆ ತೊಟ್ಟಿ. ಆಯುಧಶಾಲೆ-ಇವು ಅರಮನಯ ಬೆಡಗಿನ ಸ್ಥಳಗಳು.
ಕರ್ಜನ್ ಪಾರ್ಕ್, ನಿಷತ್ ಬಾಗ್, ಥಂಡಿಸಡಕ್ - ಆಹ್ಲಾದಕರ ಉದ್ಯಾನಗಳು. ಲಲಿತ ಮಹಲ್‌ಗೆ ಹೋಗುವ ದಾರಿಯಲ್ಲಿ ವಿಶಾಲವಾದ ಉದ್ಯಾನವುಳ್ಳ ಮೃಗಾಲಯವಿದೆ. ಜಯಲಕ್ಷ್ಮೀ ವಿಲಾಸ ಅರಮನೆ, ಸಂತ ಫಿಲೋಮಿನಾ ಚರ್ಚು, ಚೆಲುವಾಂಬಾ ಅರಮನೆ, ಹಾಗೂ ಜಗನ್ನೋಹನ ಅರಮನೆ ಆಕರ್ಷಕ ಕಟ್ಟಡಗಳು. ಜಗಹನ ಅರಮನೆಯಲ್ಲಿ ಸುಂದರ ಕಲಾಕೃತಿಗಳು, ಹಳೆಯ ಕುಶಲ ಕಲಾವಸ್ತುಗಳ ದೊಡ್ಡ ಸಂಗ್ರಹವಿದೆ. ಲಲಿತಮಹಲ್ ಅರಮನೆಯನ್ನು ಈಗ ಪಂಚತಾರಾ ಹೋಟೆಲ್ ಆಗಿ ಮಾಡಲಾಗಿದೆ.
ಅರಮನೆಯ ಉತ್ತರ ದ್ವಾರದ ಎದುರು ಚಾಮರಾಜ ಒಡೆಯರ, ವಾಯುವ್ಯ ಮೂಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗಳಿವೆ. ವಿಶ್ವವಿದ್ಯಾಲಯದ ಕಾರ್ಯಾಲಯವಿರುವ ಕ್ರಾಫರ್ಡ್ಹಾಲ್, ಮಹಾರಾಜಾ ಕಾಲೇಜು-ಇನ್ನೂ ಕೆಲವು ಗಮನಾರ್ಹ ಕಟ್ಟಡಗಳು, ಮೈಸೂರು ವಿಶ್ವವಿದ್ಯಾನಿಲಯದ ಕೇಂದ್ರ ಮಾನಸ ಗಂಗೋತ್ರಿ ಪ್ರಮುಖವಾದದ್ದು. ಈ ವಿಶ್ವವಿದ್ಯಾನಿಲಯ 1961ರಲ್ಲಿ ಆರಂಭವಾಯಿತು. ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್‌ನಲ್ಲಿ ವಿವಿಧ ಕುಶಲ ಕಲಾ ವಸ್ತುಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿಯೂ ದೊರೆಯುತ್ತದೆ.
ದಂತ, ಶ್ರೀಗಂಧ, ಶಿಲೆ, ಲೋಹದ ಸುಂದರ ಕುಶಲ ಕಲಾ ವಸ್ತುಗಳು, ತೇಗ, ಕರೀಮರ, ಬೆತ್ತದ ಪೀಠೋಪಕರಣಗಳು, ಮೈಸೂರು ರೇಷ್ಮೆ ಶ್ರೀ ಗಂಧದ ಎಣ್ಣೆ ವಿಶ್ವವಿಖ್ಯಾತ ವಸ್ತುಗಳು, ವಸ್ರೋದ್ಯಮ, ಭತ್ತದ ಗಿರಣಿ, ಎಣ್ಣೆ ತಯಾರಿಕೆ, ರಾಸಾಯನಿಕಗಳು, ತೊಗಲು ಸಂಸ್ಕರಣೆ ಮುಂತಾದ ಕೈಗಾರಿಕೆಗಳಿವೆ. ಶ್ರೀಕೃಷ್ಣ ರಾಜೇಂದ್ರ ಮಾರುಕಟ್ಟೆ ಜನಪ್ರಿಯತೆ ಪಡೆದಿದೆ.
ಮೈಸೂರಿನ ಸುತ್ತಮುತ್ತ ಬೃಂದಾವನ, ನಂಜನಗೂಡು, ಮೇಲುಕೋಟೆ, ಸೋಮನಾಥಪುರ, ತಲಕಾಡು, ಬಂಡೀಪುರ, ಶ್ರೀರಂಗಪಟ್ಟಣ ರಂಗನತಿಟ್ಟು, ಬಿಳಿಗಿರರಂಗನ ಬೆಟ್ಟ ಮೊದಲಾದ ಪ್ರೇಕ್ಷಣೀಯ ಜಾಗಗಳಿವೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ReplyDelete