M Govinda Pai Kavi Parichay in Kannada Language: In this article, we are providing ರಾಷ್ಟ್ರಕವಿ ಎಂ. ಗೋವಿಂದ ಪೈ ಮಾಹಿತಿ for students and teachers. ರಾಷ್ಟ್ರಕವಿ ಎಂ. ಗೋವಿಂದ ಪೈ ಕುರಿತು ಭಾಷಣ Students can use this M Govinda Pai Information in Kannada Language to complete their homework. ಗೋವಿಂದ ಪೈ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೆಸರಾದ ಬಾಪ್ಪೆ ಮನತನಕ್ಕೆ ಸೇರಿದವರು. ಜನನ 1883 ಮಾರ್ಚ್ 23, ಮಂಗಳೂರು, ಮದರಾಸುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪರೀಕ್ಷೆಯಲ್ಲಿ ಇಂಗ್ಲೀಷಿನಲ್ಲಿ ಪ್ರಥಮ ಸ್ಥಾನ ಪಡೆದರು. ಸಂಸ್ಕೃತ, ಪಾಳಿ, ಪ್ರಾಕೃತ, ಮರಾಠಿ, ಕೊಂಕಣಿ, ಕನ್ನಡ, ತಮಿಳು, ಮಲೆಯಾಳ, ತುಳು, ಬಂಗಾಳಿ, ಜರ್ಮನ್, ಗ್ರೀಕ್, ಲ್ಯಾಟಿನ್ ಮುಂತಾದ ಹಲವು ಭಾಷೆಗಳನ್ನು ಅಭ್ಯಾಸ ಮಾಡಿದರು. Read also : Panje Mangesh Rao Information in Kannada, Essay on Sardar Vallabhbhai Patel in Kannada, Essay on Lal Bahadur Shastri in Kannada.
M Govinda Pai Kavi Parichay in Kannada Language: In this article, we are providing ರಾಷ್ಟ್ರಕವಿ ಎಂ. ಗೋವಿಂದ ಪೈ ಮಾಹಿತಿ for students and teachers. ರಾಷ್ಟ್ರಕವಿ ಎಂ. ಗೋವಿಂದ ಪೈ ಕುರಿತು ಭಾಷಣ Students can use this M Govinda Pai Information in Kannada Language to complete their homework.
ರಾಷ್ಟ್ರಕವಿ ಎಂ. ಗೋವಿಂದ ಪೈ M Govinda Pai Kavi Parichay in Kannada Language
ಗೋವಿಂದ ಪೈ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೆಸರಾದ ಬಾಪ್ಪೆ ಮನತನಕ್ಕೆ ಸೇರಿದವರು. ಜನನ 1883 ಮಾರ್ಚ್ 23, ಮಂಗಳೂರು, ಮದರಾಸುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪರೀಕ್ಷೆಯಲ್ಲಿ ಇಂಗ್ಲೀಷಿನಲ್ಲಿ ಪ್ರಥಮ ಸ್ಥಾನ ಪಡೆದರು. ಸಂಸ್ಕೃತ, ಪಾಳಿ, ಪ್ರಾಕೃತ, ಮರಾಠಿ, ಕೊಂಕಣಿ, ಕನ್ನಡ, ತಮಿಳು, ಮಲೆಯಾಳ, ತುಳು, ಬಂಗಾಳಿ, ಜರ್ಮನ್, ಗ್ರೀಕ್, ಲ್ಯಾಟಿನ್ ಮುಂತಾದ ಹಲವು ಭಾಷೆಗಳನ್ನು ಅಭ್ಯಾಸ ಮಾಡಿದರು.
ಗೋವಿಂದ ಪೈಗಳದು ತುಂಬ ಕ್ರಮಬದ್ದವಾದ ಜೀವನ, ದಿನಪತ್ರಿಕೆಯನ್ನು ಓದುವಾಗಲು ಅಚ್ಚಿನ ತಪ್ಪಿದ್ದಲ್ಲಿ, ವ್ಯಾಕರಣ ದೋಷವಿದ್ದಲ್ಲಿ, ಪದಪ್ರಯೋಗ ಅಸಮರ್ಪಕವಾಗಿದ್ದಲ್ಲಿ ಪೆನ್ನಿನಿಂದ ಗುರುತು ಮಾಡುತ್ತಿದ್ದರು. ಯಾವುದಾದರೂ ಅಪೂರ್ವವೆನಿಸಿದ ವಿಷಯ, ಘಟನೆ, ಮನಸೆಳೆಯಿತೆಂದರೆ ಅದನ್ನು ಗುರುತಿಸಿ ಜೋಪಾನವಾಗಿ ತೆಗೆದಿಡುತ್ತಿದ್ದರು. ಸುವ್ಯವಸ್ಥಿತವಾದ ಪತ್ರವ್ಯವಹಾರ ಅವರ ವೈಶಿಷ್ಟಗಳಲ್ಲಿ ಒಂದು. ಪತ್ರಕ್ಕೆ ಕೂಡಲೇ ಉತ್ತರಿಸುವುದು ಅವರ ಸ್ವಭಾವ. ಅವರು ಬರೆಯುತ್ತಿದ್ದ ಮಸಿಯ ಬಣ್ಣ ಯಾವಾಗಲೂ ನೇರಳೆ.
ಗೋವಿಂದ ಪೈಗಳ ಪ್ರತಿಭೆ ಬಹುಮುಖ್ಯವಾದದ್ದು. ಅಪ್ರತಿಮ ಸಂಶೋಧಕರಾಗಿದ್ದರು. ಉತ್ತಮವಾದ ಕವಿತೆ, ನಾಟಕಗಳನ್ನು ಬರೆದಿದ್ದಾರೆ. ಅವರದು ಸೂಕ್ಷ್ಮ ವಿಮರ್ಶಾತ್ಮಕ ದೃಷ್ಟಿ, ಇತಿಹಾಸ ಸಂಬಂಧದ ಕಾಲನಿರ್ಣಯಗಳಲ್ಲಿ ಅವರು ಅಪ್ರತಿಮರು. ಅನೇಕ ಆಧಾರಾಂಶಗಳನ್ನು ಹುಡುಕಿ ತೆಗೆದು ಅವನ್ನು ಪರೀಕ್ಷಿಸಿ ತಮ್ಮದೇ ಆದ ಸಿದ್ದಾಂತವನ್ನು ಅತ್ಯಂತ ತರ್ಕಬದ್ಧವಾಗಿ ಪ್ರತಿಪಾದಿಸುತ್ತಿದ್ದರು.
ಗೋವಿಂದಪೈಗಳ ಸಾಹಿತ್ಯ ಸೇವೆ ಆರಂಭವಾದದ್ದು 1900ರಲ್ಲಿ. 1902-11ರೊಳಗೆ ಅವರು ಪ್ರಾಸಬದ್ಧವೂ, ಪ್ರಾಸರಹಿತವೂ ಆದ ಅನೇಕ ಕವನಗಳನ್ನು ಬರದರು. 'ಸ್ವದೇಶಾಭಿಮಾನಿ' ಪತ್ರಿಕೆಯಲ್ಲಿ ಅವು ಪ್ರಕಟವಾದವು. ರವೀಂದ್ರನಾಥ ಠಾಕೂರರ ಮತ್ತು ಇಕ್ವಾಲರ ಕವಿತೆಗಳನ್ನು ಪ್ರಾಸರಹಿತವಾಗಿ ಪದ್ಯರೂಪದಲ್ಲಿ ಅನುವಾದಿಸಿದರು. ಅವರ ಈ ಸಾಹಸ ಕನ್ನಡ ವಿದ್ವತ್ ಪ್ರಪಂಚದಲ್ಲಿ ಕ್ರಾಂತಿ ಎಬ್ಬಿಸಿತು. ಅನಂತರ ಇಂಗ್ಲಿಷ್ ಕಾವ್ಯದ 'ಸಾನೆಟ್' ಕವನ ರೂಪಕ್ಕೆ 'ಚತುರ್ದಶಪದಿ' ಎಂಬ ಹೆಸರು ಕೊಟ್ಟು ಅಂಥ ಕವನಗಳನ್ನು ಕನ್ನಡದಲ್ಲಿ ರಚಿಸಿದರು. ಶೆಲ್ಲಿ ಕವಿಯ 'ಓಡ್ ಟು ಸ್ಮಲಾರ್ಕ್' ಕವನವನ್ನು ಅನುವಾದಿಸಿದರು. ತಮ್ಮ ಪತ್ನಿ ತೀರಿಕೊಂಡಾಗ ಆಕೆಯ ನನಪಿಗಾಗಿ 'ಗೊಮ್ಮಟ ಜಿನಸ್ತುತಿ' ಎಂಬ ಪ್ರಗಾಥವನ್ನು ರಚಿಸಿದರು.
ಗೋವಿಂದಪೈ ಅವರ ಕಾವ್ಯಸೃಷ್ಟಿಯನ್ನು ಸಮದೃಷ್ಟಿಯಿಂದ ನೋಡಿದಾಗ ಅಲ್ಲಿ ಪ್ರಧಾನವಾಗಿ ಸ್ನೇಹ-ಸೌಹಾರ್ದ, ದೇಶಭಕ್ತಿ, ದೈವಭಕ್ತಿ, ಜೀವನ ವಿವೇಕ, ಮಾನವೀಯತೆ ಮತ್ತು ಪ್ರಕೃತಿ ಪ್ರೇಮಗಳ ಪ್ರೇರಣೆಗಳನ್ನು ಗುರುತಿಸಬಹುದು. ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತಂತೆ ಅವರು ಮಾಡಿರುವ ಕೆಲಸ ಬೆರಗುಂಟುಮಾಡುವಂಥದು. ಸುಮಾರು 62 ವರ್ಷ ಸತತವಾಗಿ ಸಾಹಿತ್ಯ, ಸಂಶೋಧನೆಯಲ್ಲಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಬರೆದದ್ದು ಸ್ವಲ್ಪವೇ ಆದರೂ ಬರವಣಿಗೆ ಪ್ರೌಢವೂ, ವಿದ್ವತ್ಪೂರ್ಣವೂ ಆಗಿದೆ.
ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದ ಇವರ ಸೃಜನಶೀಲ ಸಾಹಿತ್ಯ ಅದ್ಭುತವಾದದ್ದು. ಏಕಲವ್ಯನನ್ನು ಕುರಿತ ಪದ್ಯಾತ್ಮಕ ಏಕಾಂಕ ನಾಟಕ 'ಹೆಬ್ಬೆರಳು', 1942ರ ಚಳವಳಿಯನ್ನಾಧರಿಸಿದ 'ಚಿತ್ರಭಾನು' ಗದ್ಯನಾಟಕ, 'ತಾಯಿ' ಸಾಮಾಜಿಕ ನಾಟಕ. ಇವರು ರಚಿಸಿದ ಚಿಕ್ಕ, ದೊಡ್ಡ ಕವನಗಳ ಒಟ್ಟು ಸಂಖ್ಯೆ ಸುಮಾರು 180. ಇವರ 'ಗಿಳಿವಿಂಡು', 'ನಂದಾದೀಪ' ಕವನ ಸಂಕಲನಗಳು, ಯೇಸುವಿನ ಅಂತ್ಯವನ್ನು ಚಿತ್ರಿಸುವ 'ಗೋಲ್ಗೊಥಾ' ಮತ್ತು ಬುದ್ಧನ ಕಡೆಯ ದಿನಗಳನ್ನು ಚಿತ್ರಿಸುವ 'ವೈಶಾಖಿ' ಎಂಬ ಎರಡು ನೀಳವನಗಳು ಮುಖ್ಯವಾಗಿವೆ. ಅಸಂದಿಗ್ಧ ಭಾಷೆ, ಅಚ್ಚಗನ್ನಡ ಪದಪ್ರಯೋಗ, ಹೊಸಪದ ಸೃಷ್ಟಿ, ಭಾಷೆಯಲ್ಲಿನ ಪ್ರಾದೇಶಿಕತೆ ಇವುಗಳಿಂದಾಗಿ ಇವರ ಸಾಹಿತ್ಯ ಗಮನಾರ್ಹ.
ಇವರಿಗೆ ಹಿಂದಿನ ಮದರಾಸು ಸರ್ಕಾರ 1949ರಲ್ಲಿ 'ರಾಷ್ಟ್ರಕವಿ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1950ರಲ್ಲಿ ಮುಂಬಯಿಯಲ್ಲಿ ನಡೆದ 34ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉತ್ಕಟ ಕನ್ನಡಾಭಿಮಾನಿಗಳಾದ ಪೈಯವರು 'ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ' ಎಂದು ಹಾಡಿ ಕನ್ನಡತನವನ್ನು ಮೆರೆದಿದ್ದಾರೆ.
ಸಾಹಿತ್ಯ ಸೇವೆಯ ಜೊತೆಯೇ ಕನ್ನಡ ನಾಡು ನುಡಿಗಳ ಏಳಿಗೆಗೆ, ಏಕೀಕರಣಕ್ಕೆ ಕೆಲಸ ಮಾಡಿದ ಗೋವಿಂದ ಪೈ ತುಂಬು ಬಾಳನ್ನು ಬಾಳಿ ತಮ್ಮ 81ನೇ ವಯಸ್ಸಿನಲ್ಲಿ 1963ನೇ ಸಪ್ಟೆಂಬರ್ 6 ರಂದು ನಿಧನರಾದರು. ಇತ್ತೀಚೆಗೆ ಇವರ ಸಮಗ್ರ ಸಾಹಿತ್ಯವನ್ನೊಳಗೊಂಡ ಬೃಹತ್ ಸಂಪುಟವನ್ನು ಪ್ರೊ| ಕು.ಶಿ. ಹರಿದಾಸಭಟ್ಟರು ಗೋವಿಂದಪ್ಪ ಪ್ರತಿಷ್ಠಾನದ ವತಿಯಿಂದ ಸಂಪಾದಿಸಿ ಕನ್ನಡಕ್ಕೆ ಅಮೂಲ್ಯ ನಿಧಿಯೊಂದನ್ನು ನೀಡಿದ್ದಾರೆ.
ಗೋವಿಂದಪೈ ಅವರ ಮಾತೃಭಾಷೆ ಕೊಂಕಣಿಯಾದರೂ ಅವರ ಕೈಂಕರ್ಯವೆಲ್ಲಾ ಕನ್ನಡಕ್ಕೆ ಮೀಸಲಾಗಿತ್ತು. ಈ ಬಗ್ಗೆ ಅವರೇ ಹೇಳಿಕೊಂಡಿರುವ ಮಾತು ಮನನೀಯವಾಗಿವೆ - 'ನಾನು ಎರಡು ತಾಯಂದಿರ ಕೂಸು, ಕೊಂಕಣಿ ನಾನು ಹೆತ್ತ ತಾಯಿ, ಕನ್ನಡ ಸಾಕು ತಾಯಿ, ನನ್ನನ್ನು ಸಾಕಿದ ತಾಯಿ.... ಆದರೆ ತಾಯಿಯ ಮೊಲೆಯಲ್ಲಿ ಹಾಲಿಲ್ಲ: ಕೊಂಕಣಿಯಲ್ಲಿ ಸಾಹಿತ್ಯವಿಲ್ಲ. ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ ಹಾಕಿದಳು. ಈ ತಾಯಿಯಾದರೆ ಪಯಸ್ವಿನಿ. ಎಷ್ಟು ಕಾಲದಿಂದ, ಎಷ್ಟೋ ಕವಿಗಳನ್ನು ಉಡಿಸಿಯೂ ಮತ್ತು ಬತ್ತದ, ದೇವರ ದಯೆಯಿಂದ ಸರ್ವದಾ ಬತ್ತಬಾರದ ಸದಾ ಸುಹಿ, ತನ್ನ ಮೊಲೆಯನ್ನು ಆಕೆ ತಾಯಿಗೂ ಮಿಕ್ಕ ಅಳಿಯಿಂದ ನನಗೆ ಉಣಿಸಿದಳು. ಆಕೆಯ ಅಕ್ಕರೆಯ ಸಾಲನ್ನು ಏಳೇಳು ಜನ್ಮಕ್ಕೂ ತತ್ತು ತೀರಿಸಲಾರೆ.”
(ಕನ್ನಡದ ಮೊರೆ ಪು. 64-65)
COMMENTS