Kanakadasa Jivan Charitra in Kannada Language: In this article, we are providing ಕನಕದಾಸರ ಇತಿಹಾಸ for students and teachers. Students can use this Kanakadasa Jivan Charitra Kannada to complete their homework. ಕನಕದಾಸರ ಕಾಲ ಸುಮಾರು 1507 ರಿಂದ 1609 ಎನ್ನಲಾಗಿದೆ. ಧಾರವಾಡ ಜಿಲ್ಲೆಯ ಬಾಡ (ಈಗಿನ ಹಾವೇರಿ ಜಿಲ್ಲೆ) ಎಂಬ ಗ್ರಾಮದಲ್ಲಿ ಜನನ. ತಂದೆ ಬೀರೇಗೌಡ, ತಾಯಿ ಬಚ್ಚಮ್ಮ ತಂದೆ ಬಾಡದಲ್ಲಿ ಪಾಳೆಯ ಪಟ್ಟಿನ ಅಧಿಕಾರಿಯಾಗಿದ್ದರು. ತಂದೆಯ ಮರಣದ ನಂತರ ವಿಜಯನಗರದ ಅರಸರ ಸೇನೆಯನ್ನು ಸೇರಿಕೊಂಡರು. ಹಲವು ಸಮರಗಳಲ್ಲಿ ಭಾಗವಹಿಸಿ ವೀರಯೋಧ ಎಂಬ ಪ್ರಶಸ್ತಿಗೆ ಪಾತ್ರರಾದರು. ತಮಗಾದ ಅಪಾರ ಗಾಯಗಳ ನೋವನ್ನು ನಿವಾರಿಸಿದ ಭಗವಂತನ ಹಿರಿಮೆಯನ್ನು ಕಂಡುಕೊಂಡ ಕನಕದಾಸರು ವೈರಾಗ್ಯ ತಳೆದರು. ವೀರಯೋಧ ದೈವಭಕ್ತನಾಗಿ ಮಾರ್ಪಟ್ಟರೂ ಮುಂದೆ ಅವರು ವಿಜಯನಗರದಲ್ಲಿದ್ದ ರಾಜಗುರು ತಿರುಮಲೆ ತಾತಾಚಾರ್ಯ ಎಂಬುವರಲ್ಲಿ ಶ್ರೀವೈಷ್ಣವ ದೀಕ್ಷೆ ಪಡೆದರು. Read also : Purandara Dasa Jivan Charitra in Kannada Language, ಬಸವೇಶ್ವರ ಚರಿತ್ರೆ Basaveshwara Jivan Charitra Kannada, Essay on Lal Bahadur Shastri in Kannada language
Kanakadasa Jivan Charitra in Kannada Language: In this article, we are providing ಕನಕದಾಸರ ಇತಿಹಾಸ for students and teachers. Students can use this Kanakadasa Jivan Charitra Kannada to complete their homework.
ಕನಕದಾಸರ ಕಾಲ ಸುಮಾರು 1507 ರಿಂದ 1609 ಎನ್ನಲಾಗಿದೆ. ಧಾರವಾಡ ಜಿಲ್ಲೆಯ ಬಾಡ (ಈಗಿನ ಹಾವೇರಿ ಜಿಲ್ಲೆ) ಎಂಬ ಗ್ರಾಮದಲ್ಲಿ ಜನನ. ತಂದೆ ಬೀರೇಗೌಡ, ತಾಯಿ ಬಚ್ಚಮ್ಮ ತಂದೆ ಬಾಡದಲ್ಲಿ ಪಾಳೆಯ ಪಟ್ಟಿನ ಅಧಿಕಾರಿಯಾಗಿದ್ದರು. ತಂದೆಯ ಮರಣದ ನಂತರ ವಿಜಯನಗರದ ಅರಸರ ಸೇನೆಯನ್ನು ಸೇರಿಕೊಂಡರು. ಹಲವು ಸಮರಗಳಲ್ಲಿ ಭಾಗವಹಿಸಿ ವೀರಯೋಧ ಎಂಬ ಪ್ರಶಸ್ತಿಗೆ ಪಾತ್ರರಾದರು. ತಮಗಾದ ಅಪಾರ ಗಾಯಗಳ ನೋವನ್ನು ನಿವಾರಿಸಿದ ಭಗವಂತನ ಹಿರಿಮೆಯನ್ನು ಕಂಡುಕೊಂಡ ಕನಕದಾಸರು ವೈರಾಗ್ಯ ತಳೆದರು. ವೀರಯೋಧ ದೈವಭಕ್ತನಾಗಿ ಮಾರ್ಪಟ್ಟರೂ ಮುಂದೆ ಅವರು ವಿಜಯನಗರದಲ್ಲಿದ್ದ ರಾಜಗುರು ತಿರುಮಲೆ ತಾತಾಚಾರ್ಯ ಎಂಬುವರಲ್ಲಿ ಶ್ರೀವೈಷ್ಣವ ದೀಕ್ಷೆ ಪಡೆದರು. ಅನಂತರ ಜ್ಞಾನಿಗಳಾದ ವ್ಯಾಸರಾಯ ಸ್ವಾಮಿಗಳ ಶಿಷ್ಯರಾಗಿ ವೇದಾಂತ ರಹಸ್ಯಗಳನ್ನು ತಿಳಿದುಕೊಂಡರು. ಅವರಿಂದ ದಾಸದೀಕ್ಷೆಯನ್ನು ಪಡೆದು ಹರಿದಾಸರಾದರು. ಅವರ ಬಳಿಯೇ ಇದ್ದು ನೂರಾರು ದೇವರ ನಾಮಗಳನ್ನು ರಚಿಸಿದರು.
ಮಾಧ್ವ ಪ್ರಭಾವಕ್ಕೆ ಒಳಗಾದ ಭಾಗವತ ದೃಷ್ಟಿಯ ಕವಿ, ಕೀರ್ತನಕಾರ, ಕನಕದಾಸರು ಸಾಮಾಜಿಕ ಕಳವರ್ಗದಿಂದ ಬಂದು ದಾಸದೀಕ್ಷೆ ಪಡೆದು ಉತ್ತಮ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟರು. ಆದಿಕೇಶವ' ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು, ತತ್ವಗರ್ಭಿತವಾದ ಮುಂಡಿಗೆಗಳನ್ನು ರಚಿಸಿದ್ದಲ್ಲದೆ ಅನೇಕ ಕೃತಿಗಳನ್ನು ರಚಿಸಿದರು. ಇವರ ಕೃತಿಗಳಲ್ಲಿ ಜನತೆಯ ಮೌಡ್ಯ, ಕಂದಾಚಾರ, ಪೊಳ್ಳು ನಂಬಿಕೆ, ವರ್ಣ ವ್ಯವಸ್ಥೆಯನ್ನು ಖಂಡಿಸಿರುವುದಲ್ಲದೆ ದೈವಭಕ್ತಿ, ಜೀವನ ದರ್ಶನ, ಸಮಾಜ ವಿಮರ್ಶೆ, ಲೋಕಾನುಭವಗಳು ಕಾವ್ಯಾತ್ಮಕವಾಗಿ ಹೊರಹೊಮ್ಮಿವೆ. ಅನೇಕ ಕೃತಿಗಳನ್ನು ರಚಿಸಿದರು.
ಕನಕದಾಸರ ಕಾವ್ಯಗಳಲ್ಲಿ “ಮೋಹನ ತರಂಗಿಣಿ” ಸಾಂಗತ್ಯ ಗ್ರಂಥ. ಭಾರತ, ಭಾಗವತಗಳಲ್ಲಿ ಬರುವ ಕಾಮದಹನ, ಉಷಾ-ಅನಿರುದ್ಧ ಪ್ರಸಂಗ, ಕೃಷ್ಣ-ಬಾಣಾಸುರ ಯುದ್ಧ, ಶಂಬರಾಸುರವಧೆ, ಇವು ಕಾವ್ಯದ ವಸ್ತು, ವಸ್ತು ಪೌರಾಣಿಕವಾದರೂ ಕಾವ್ಯದಲ್ಲಿ ಅಲ್ಲಲ್ಲಿ ಸಮಕಾಲೀನ ಜೀವನದ ವರ್ಣನೆ ಇದೆ. ಈ ಕಾವ್ಯವನ್ನು “ಕೃಷ್ಣ ಚರಿತ್ರ” ಎಂದೂ ಕರೆಯಲಾಗಿದೆ.
“ನಳಚರಿತ್ರೆ” ಅತ್ಯಂತ ರಮ್ಯವಾದ ಒಂದು ಕಥನ ಕಾವ್ಯವಾಗಿ ಮಹಾಭಾರತದ ಕಥೆಯನ್ನು ಮೂಲವಾಗಿ ಹೊಂದಿರುವ 'ಭಾಮಿನಿ ಷಟ್ನಧಿ”ಯಲ್ಲಿ ಬರೆದಿರುವ ಕೃತಿಯ ಪಾತ್ರ ರಚನೆ ಸ್ಪಷ್ಟ. ರಸಪೋಷಣೆ ಚೆನ್ನಾಗಿದೆ. ಕನ್ನಡ ಸಂಸ್ಕೃತಗಳ ರಮ್ಯ ಮಿಶ್ರಣವುಳ್ಳ ಭಾಷೆ ಸರಳವಾಗಿದೆ, ಮೋಹಕವಾಗಿದೆ.
“ಹರಿಭಕ್ತ ಸಾರ” ಕೃತಿಯೂ ಭಾಮಿನಿ ಷಟ್ಟದಿಯಲ್ಲಿದೆ. ನೀತಿ ತತ್ವಗಳು ಬೆರೆತಿರುವುದಾದರೂ ಇದು ಪ್ರಧಾನವಾಗಿ ಭಕ್ತಿಕಾವ್ಯ.
ರಾಮಧ್ಯಾನ ಚರಿತ್ರೆ' ಒಂದು ಖಂಡಕಾವ್ಯ. ಇದರಲ್ಲಿ ಭಕ್ತ ಮತ್ತು ರಾಗಿ ನಡುವೆ ತಮ್ಮಲ್ಲಿ ಯಾರು ಹೆಚ್ಚು ಎಂಬ ವಿವಾದವುಂಟಾಗಿ ಶ್ರೀರಾಮನೆದುರು ಮತ್ತು ರಾಗಿಯೇ ವಿಜಯಿಯಾಯಿತು. ಶ್ರೀರಾಮ ಅದಕ್ಕೆ 'ರಾಘವ' ಎಂದು ಹೆಸರು ಕೊಟ್ಟನಂತ, ಹೀಗಾಗಿ ರಾಮಧ್ಯಾನವಾಯಿತು ಎನ್ನಲಾಗಿದೆ. ದೇವರು ಬಡವರ, ಭಕ್ತರ ಪಕ್ಷಪಾತಿಯಂಬ ಮನೋಭಾವ ಈ ಕಾವ್ಯದಲ್ಲಿದೆ.
ಕನಕದಾಸರ ಕವಿತಾಶಕ್ತಿ ಸಂಪೂರ್ಣವಾಗಿ ಅರಳಿರುವುದು ಅವರ ಕೀರ್ತನೆಗಳಲ್ಲಿ, ವಿಚಾರ ಸ್ವಾತಂತ್ರದಲ್ಲಿ, ಕವಿತಾಶಕ್ತಿಯಲ್ಲಿ. ಇವರ ಪ್ರತಿಭಾಶಾಲಿ ಅಂತರಂಗದ ಆಳವನ್ನೂ, ಭಕ್ತಿಯನ್ನು ತಿಳಿಸುವ ಕೀರ್ತನೆಗಳು ನುಡಿಗೆ ಮರುಗುನೀಡುವ ಹಿರಿಯ ಭಾವಗೀತೆಗಳಾಗಿವೆ. ಸಂಗೀತದ ಪರಿಚಯ, ಪ್ರಪಂಚಾನುಭವ ಅವರ ರಚನೆಗಳಲ್ಲಿ ಎದ್ದು ಕಾಣುವ ಅಂಶಗಳು, ಸಹಜ ಪ್ರತಿಭೆ, ಭವ್ಯ ಕಲ್ಪನೆ, ಭಾಷೆ ಪ್ರಭುತ್ವಗಳಿಂದ ಕನಕದಾಸರು ಶ್ರೇಷ್ಠ ಕವಿಯಾಗಿ ಬೆಳಗಿದ್ದಾರೆ. ಅವರ ಕೃತಿಗಳು ಉದಾತ್ತವಾದವು. ಸತ್ವ ಹಾಗೂ ರಚನೆಯ ದೃಷ್ಟಿಯಿಂದ ಅದು ಕನ್ನಡ ಸಾರಸ್ವತ ಸಂಪತ್ತನ್ನು ಹೆಚ್ಚಿಸಿವೆ.
Admin

100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS