Information about Volcano in Kannada Language: In this article, we are providing ಜ್ವಾಲಾಮುಖಿ ಬಗ್ಗೆ ಮಾಹಿತಿ for students and teachers. Students can use this YInformation about Volcano in Kannada Language to complete their homework.
Information about Volcano in Kannada Language: In this article, we are providing ಜ್ವಾಲಾಮುಖಿ ಬಗ್ಗೆ ಮಾಹಿತಿ for students and teachers. Students can use this Information about Volcano in Kannada Language to complete their homework.
Information about "Volcano in Kannada Language", "ಜ್ವಾಲಾಮುಖಿ ಬಗ್ಗೆ ಮಾಹಿತಿ"
ಜ್ವಾಲಾಮುಖಿ ಎಂದರೇನು What is a volcano?
ಭೂಮಿಯ ಅಂತರಾಳದಿಂದ ಕುದಿಯುತ್ತಿರುವ ಲಾವಾರಸವನ್ನು ಹೊರಕ್ಕೆ ಉಗುಳುವ ಪರ್ವಗಳಿಗೆ ಈ ಹೆಸರಿದೆ. ಇವನ್ನು ಜ್ವಾಲಾಮುಖಿಗಳೆಂದೂ ವಿನೋಗಳೆಂದೂ ಕರೆಯುತ್ತಾರೆ. ವಿನೂ ಎಂಬ ಹೆಸರು ಬಂದದ್ದು. ಸಿಸಿಲಿ ದ್ವೀಪದ ಉತ್ತರಕ್ಕಿರುವ ವಲ್ಕೆನೋ ಎಂಬ ದ್ವೀಪದಿಂದ. ಪ್ಲೇಟೊ, ಅರಿಸ್ಟಾಟಲ್, ಸ್ಟಾಬೊ ಮೊದಲಾದವರು ಇವುಗಳ ಚಟುವಟಿಕೆಗಳನ್ನು ವರ್ಣಿಸಿದ್ದಾರೆ. ಆದರೆ ಮೊಟ್ಟಮೊದಲ ವೈಜ್ಞಾನಿಕವರ್ಣನೆ ಸಿಕ್ಕುವುದು. ಕ್ರಿ.ಶ. 79ರಲ್ಲಿದ್ದ ಇಟಲಿಯ ಕಿರಿಯ ಫಿನಿಯ ಗ್ರಂಥದಲ್ಲಿ, ಆತ ಪ್ರಕೃತಿಯ ಉಪಾಸಕ, ಇಟಲಿ ದೇಶದ ಹರ್‌ಕುಲೇನಿಂಯ ಮತ್ತು ಪಾಂಪ ನಗರಗಳನ್ನು ನೆಲಸಮಮಾಡಿದ ವಸೂವಿಯಸ್ ಅಗ್ನಿಪರ್ವತ ಕಾದ ಪದಾರ್ಥಗಳನ್ನು ಕಾರುತ್ತಿರುವಾಗ ಬಹು ಸಮೀಪದ ದೃಶ್ಯವನ್ನು ನೋಡಲು ಹೋಗಿದ್ದರಿಂದ ಹೊರಹೊರಟ ವಿಷವಾಯುವಿನಿಂದ ಮೃತಪಟ್ಟು, ವಸೂವಿಯಸ್ ಪರ್ವತದ ಚಟುವಟಿಕೆ, ಹೊರಬಂದ ಪದಾರ್ಥಗಳ ವಿವರ ಇತ್ಯಾದಿಗಳನ್ನು ಈತ ಶಾಸ್ತ್ರೀಯವಾಗಿ ವರ್ಣಿಸಿದ್ದಾನೆ.
ಭೂಗೋಳದ ಮೂರರಲ್ಲೊಂದು ಪಾಲು ಭೂಭಾಗ, ಮಿಕ್ಕಪಾಲು ಜಲಭಾಗ. ಸಾಮಾನ್ಯವಾಗಿ ಭೂಭಾಗವೆಲ್ಲ ಮಣ್ಣುಕಲ್ಲುಗಳಿಂದ ಕೂಡಿ ಶಿಲಾಮಂಡಲವೆಂದು ಹೆಸರು ಪಡೆದಿದೆ. ಇದರ ಮೇಲುಭಾಗದಿಂದ ತಳಭಾಗಕ್ಕೆ ಹೋದಂತೆಲ್ಲ ಉಷ್ಣಾಂಶ ಸಾಧಾರಣವಾಗಿ 60 ಅಡಿಗೆ 1 ರಂತ ಹಚ್ಚುತ್ತ ಹೋಗಿ, ತಳಭಾಗದಲ್ಲಿ ಹೆಚ್ಚು ಉಷ್ಣತೆ ಕಂಡುಬರುತ್ತದೆ. ಹೀಗೆ ಹಚ್ಚುವ ಉಷ್ಣತೆಗೆ ಎರಡು ಕಾರಣಗಳುಂಟು. ಭೂಮಿ ಅನಿಲ ರೂಪದಿಂದ ದ್ರವರೂಪಕ್ಕೆ ಕುಗ್ಗಿ, ಅನಂತರ ಘನೀಭೂತವಾಗಿ, ಗೋಲವಾಗಿರುವುದರಿಂದ ವಿಶೇಷವಾದ ಉಷ್ಣ ಅದರ ಅಂತರಾಳದಲ್ಲಿ ಅಡಗಿದೆ. ಇದೇ ಮೂಲೋಷ್ಠ. ಜೊತಗೆ ಅಂತರಾಳದಲ್ಲಿ ಹುದುಗಿರುವ ವಿಶೇಷವಾದ ಉಷ್ಣತೆಗೆ ಪೂರಕವಾಗುತ್ತದೆ. ಘನೀಭೂತವಾದ ಶಿಲಾಸಮೂಹ. ಸಂಗ್ರಹವಾದ ಉಷ್ಣತೆಯಿಂದ ದ್ರವರೂಪಕ್ಕೆ ಪರಿವರ್ತನೆಯಾಗಿ, ಒತ್ತಡ ಮಿತಿಮೀರಿದಾಗ ಭೂಮಿಯನ್ನು ಭೇದಿಸಿಕೊಂಡು ಹೊರಗೆ ಬರುತ್ತದೆ. ಇದೇ ಶಿಲಾರಸ (ಲಾವಾ), ಜೊತೆಗೆ ಕಲ್ಲು, ಮಣ್ಣು, ಅನಿಲಗಳು ಸಹ ಹೊರಬರುತ್ತವೆ. ಹೀಗೆ ಭೂಮಿಯ ತಳಭಾಗದಿಂದ ದೊಡ್ಡ - ಬಿರುಕುಗಳ ಮೂಲಕ, ಕಾದು ಕರಗಿರುವ ಪದಾರ್ಥಗಳನ್ನು ಉಗುಳುವ ಪರ್ವತಗಳೇ ಅಗ್ನಿಪರ್ವತಗಳು.
ಅಗ್ನಿಪರ್ವತ ಕೇವಲ ಕೆಲವು ಅಡಿಗಳ ಅಡ್ಡಳತೆಯುಳ್ಳ ಒಂದು ಸಣ್ಣ ದಿಬ್ಬವಾಗಿರಬಹುದು ಅಥವಾ ಸಮುದ್ರಮಟ್ಟಕ್ಕೆ 20,000 ಮೇಲ್ಮಟ್ಟದಲ್ಲಿರುವ ದೊಡ್ಡ ಪರ್ವತವಾಗಿರಬಹುದು (ಆಫ್ರಿಕದ ಕಿಲಿಮಂಜಾರೊ), ಸಾಮಾನ್ಯವಾಗಿ ಇದು ಬುಗುರಿಯಾಕೃತಿಯಾಗಿರುತ್ತದೆ. ಶಿಖರದಲ್ಲಿ ಕಂಡುಬರುವ ಹಳ್ಳ ಪ್ರದೇಶವೇ ಅಗ್ನಿಪರ್ವತದ ಬಾಯಿ ಅಥವಾ ಕುಂಡ (ಕ್ರೇಟರ್), ಭೂಗರ್ಭದಿಂದ ಪದಾರ್ಥಗಳೆಲ್ಲವೂ ಹೊರಬರುವುದು ಮುಖ್ಯವಾಗಿ ಈ ಕುಂಡದ ಮೂಲಕವೇ. ಒತ್ತಡ ಬಲು ಹೆಚ್ಚಾದಾಗ, ದ್ರವಪದಾರ್ಥಗಳು ಪ್ರಧಾನದ್ವಾರದಿಂದ ಹೊರಬರುತ್ತವೆ. ಇದಲ್ಲದೆ ಶಿಲಾರಸ ಅಂತಸ್ಸರವಾಗಿ ನೇರವಾಗಿಯೋ (ಡೈಕ್), ಸಮತಲವಾಗಿಯೋ (ಸಿಲ್) ಮರದ ಕೊಂಬೆಗಳೋಪಾದಿಯಲ್ಲಿ ಅನೇಕ ಬೀಳುಬಿರುಕುಗಳಲ್ಲಿ ಹರಡಿಕೊಳ್ಳುತ್ತದೆ.
ಜ್ವಾಲಾಮುಖಿ ವಿಧಗಳು (Types of Volcano)
ಚಟುವಟಿಕೆಯ ದೃಷ್ಟಿಯಿಂದ ಅಗ್ನಿಪರ್ವತಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಶಿಲಾರಸಾದಿಗಳನ್ನು ಉಗುಳಿ, ಹಾವಳಿ ಮಾಡುತ್ತ ಸದಾ ಚಟುವಟಿಕೆಯಿಂದಿರುವುವು ಜಾಗೃತ ಜ್ವಾಲಾಮುಖಿಗಳು, ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುವು ಸುಪ್ತಜ್ವಾಲಾಮುಖಿಗಳು (ಡೋರ್‌ಮೆಂಟ್). ಚಟುವಟಿಕೆಗಳೆಲ್ಲವನ್ನೂ ಮುಗಿಸಿಕೊಂಡು, ಪೂರ್ಣವಾಗಿ ನಿಶ್ಯಬ್ದವಾಗಿರುವುವು ಲುಪ್ತ ಜ್ವಾಲಾಮುಖಿಗಳು, (ಎಕ್ಸ್ಟಿಂಗ್ಸ್). ಸಾಮಾನ್ಯವಾಗಿ ಅಗ್ನಿಪರ್ವತಗಳು ಕೇವಲ ಶಿಲಾರಸಾದಿಗಳನ್ನೇ ಹೊರಸೂಸದ, ಬಿಸಿನೀರನ್ನೋ ಅಥರಾ ಕಾದ ನುಣುಪಾದ ಬರಿಯ ಮಣ್ಣನ್ನೂ ಹೊರಚಿಮ್ಮಬಹುದು. ಅಂಥವನ್ನು ಬಿಸಿನೀರಿನ ಊಟೆ (ರೈಸರ್)ಗಳಂದೂ ಮೃತ್ತಿಕಾಗ್ನಿಪರ್ವತಗಳೆಂದೂ ಕರೆಯುತ್ತಾರೆ. ಪರ್ವತಗಳು ಆವಿ, ಇಂಗಾಲಾಮ್ಲ, ಜಲಜನಕ ಮುಂತಾದ ಬರಿಯ ಅನಿಲಗಳನ್ನು ಹೊರಸೂಸುವುದುಂಟು. ಅಂಥವು ಅನಿಲರೂಪದ ಅಗ್ನಿಪರ್ವತಗಳು, ಬಿಸಿನೀರಿನ ಊಟೆಗಳಿಗೂ ಅನಿಲರೂಪದ ಅಗ್ನಿಪರ್ವತಗಳಿಗೂ ನಿಕಟವೂ ಸಹಜವೂ ಆದ ಸಂಬಂಧವಿರುತ್ತದೆ. ಬೇಸಗೆ ಕಾಲದಲ್ಲಿ ಜಾಲಾಂಶ ಕಡಿಮೆಯಾಗುವುದರಿಂದ, ಬಿಸಿನೀರಿನ ಊಟೆಗಳು ಅನಿಲರೂಪದ ಅಗ್ನಿಪರ್ವತಗಳಾಗಿಯೂ ಚಳಿಗಾಲ ಅಥವಾ ಮಳೆಗಾಲಗಳಲ್ಲಿ ಜಲಾಂಶ ಹೆಚ್ಚಾಗುವುದರಿಂದ ಅನಿಲರೂಪದ ಅಗ್ನಿಪರ್ವತಗಳು ಬಿಸಿನೀರಿನ ಊಟೆಗಳಾಗಿಯೂ ಪರಿವರ್ತನೆ ಹೊಂದುತ್ತವೆ.
ಅಗ್ನಿಪರ್ವತಗಳಿಂದ ಹೊರಬೀಳುವ ವಸ್ತುಗಳನ್ನು ಅನಿಲಾಂಶ, ಜಲಾಂಶ, ಘನಾಂಶಗಳಂದು ಮೂರು ಭಾಗಗಳಾಗಿ ಪ್ರತ್ಯೇಕಿಸಬಹುದು. ಇವು ಸಾಮಾನ್ಯವಾಗಿ ಒಂದಾದ ಮೇಲೊಂದು ಕ್ರಮವಾಗಿ ಹೊರಹೊಮ್ಮುತ್ತವೆ. ಅನಿಲಗಳಲ್ಲಿ ನೀರಿನ ಆವಿಯೇ ಹೆಚ್ಚು. ಈ ಆವಿ ಕೆಲವು ಕಡೆ ಮಳೆಯ ರೂಪದಲ್ಲಿ ಬೀಳುತ್ತದೆ. ಅನಿಲಗಳ ಜೊತೆಗೆ ಕಾರ್ಬನ್ ಮಾನಾಕೈಡ್, ಕ್ಲೋರಿನ್, ಸಾರಜನಕ, ಅಮೋನಿಯ ಮತ್ತು ಗಂಧಕದ ವಿವಿಧ ಸಂಯುಕ್ತ ಅನಿಲಗಳು ಇರುತ್ತವೆ.
ಅಗ್ನಿಪರ್ವತದಿಂದ ಹೊರಬರುವ ಘನಾಂಶವನ್ನು ಅಗ್ನಿಶಿಲಾಛಿದ್ರಗಳೆಂದು ಕರೆಯುತ್ತಾರೆ. ಇವುಗಳ ಗಾತ್ರ ಸಣ್ಣ ಕಣಗಳಿಂದ ಹಿಡಿದು ದೊಡ್ಡ ಬಂಡೆಗಳವರೆಗೂ ಇರುತ್ತದೆ: ಧೂಳು ಅಥವಾ ಬೂದಿ, ಶಿಲಾರಸದಗಟ್ಟಿ ಶಿಲಾರಸದ ಮುದ್ದೆ ಮತ್ತು ಶಿಲಾರಸದ ಗುಂಡು ಎಂದು ಇವನ್ನು ವಿಭಾಗಿಸಬಹುದು.
ಅಗ್ನಿಪರ್ವತಗಳು ನಿದ್ರಾವಸ್ಥೆಗೆ ಮಾರ್ಪಡುವ ಮುನ್ನ ಕೆಲವು ಸೂಚನೆಗಳು ತೋರಿಬರುತ್ತವೆ. ಸಾಮಾನ್ಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಖ ಹೆಚ್ಚಾಗುತ್ತದೆ. ಹತ್ತಿರದಲ್ಲಿ ಹಿಮಗಡ್ಡೆಗಳಿದ್ದರೆ ಕರಗಿ ನೀರಾಗುತ್ತವೆ. ಬಾವಿಗಳಲ್ಲಿ ಕುಂಡದಲ್ಲಿನ ನೀರು ಇಂಗಿಹೋಗುತ್ತದೆ. ಇವುಗಳೆಲ್ಲದರ ಜೊತೆಗೆ ಕೆಲವು ಕಡೆ ಭೂಮಿ ಹಠಾತ್ತನೆ ನಡುಗಲು ಪ್ರಾರಂಭವಾಗುತ್ತದೆ.
COMMENTS