B M srikantaiah Kavi Parichay in Kannada Language: In this article, we are providing ಬಿ. ಎಂ. ಶ್ರೀಕಂಠಯ್ಯ ಮಾಹಿತಿ for students and teachers. ಬಿ. ಎಂ. ಶ್ರೀಕಂಠಯ್ಯ ಕುರಿತು ಭಾಷಣ Students can use this B M srikantaiah Information in Kannada Language to complete their homework. ಬಿ.ಎಂ.ಶ್ರೀ ಅವರ ಮೂಲಸ್ಥಳ ಇಂದಿನ ಮಂಡ್ಯ ಜಿಲ್ಲೆಯಲ್ಲಿರುವ ಬೆಳ್ಳೂರು, ತಂದ ಮೈಲಾರಯ್ಯ, ತಾಯಿ ಭಾಗೀರಥಮ್ಮ ಬಿ.ಎಂ. ಶ್ರೀಕಂಠಯ್ಯನವರು 1884 ಜನವರಿ 3 ರಂದು ಅವರ ತಾಯಿಯ ತೌರೂರು ತುಮಕೂರು ಜಿಲ್ಲೆ ಸಂಪಿಗೆಯಲ್ಲಿ ಜನಿಸಿದರು. ಶ್ರೀಯವರ ಮೊದಲ ವಿದ್ಯಾಭ್ಯಾಸ ಶ್ರೀರಂಗಪಟ್ಟಣದಲ್ಲಿ. ಅನಂತರ ಎಂ.ಎ., ಬಿ.ಎಲ್. ಪದವೀಧರರಾದರು. ಅಧ್ಯಾಪಕ ವೃತ್ತಿಯನ್ನು ಕೈಗೊಂಡರು. 1909 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಅಧ್ಯಾಪಕರಾದರು. ಶ್ರೇಷ್ಠ ಅಧ್ಯಾಪಕರೆಂದು ಕೀರ್ತಿ ಪಡೆದರು.
B M srikantaiah Kavi Parichay in Kannada Language: In this article, we are providing ಬಿ. ಎಂ. ಶ್ರೀಕಂಠಯ್ಯ ಮಾಹಿತಿ for students and teachers. ಬಿ. ಎಂ. ಶ್ರೀಕಂಠಯ್ಯ ಕುರಿತು ಭಾಷಣ Students can use this B M srikantaiah Information in Kannada Language to complete their homework.
ಬಿ. ಎಂ. ಶ್ರೀಕಂಠಯ್ಯ ಮಾಹಿತಿ B M srikantaiah Information in Kannada Language
ಬಿ.ಎಂ.ಶ್ರೀ ಅವರ ಮೂಲಸ್ಥಳ ಇಂದಿನ ಮಂಡ್ಯ ಜಿಲ್ಲೆಯಲ್ಲಿರುವ ಬೆಳ್ಳೂರು, ತಂದ ಮೈಲಾರಯ್ಯ, ತಾಯಿ ಭಾಗೀರಥಮ್ಮ ಬಿ.ಎಂ. ಶ್ರೀಕಂಠಯ್ಯನವರು 1884 ಜನವರಿ 3 ರಂದು ಅವರ ತಾಯಿಯ ತೌರೂರು ತುಮಕೂರು ಜಿಲ್ಲೆ ಸಂಪಿಗೆಯಲ್ಲಿ ಜನಿಸಿದರು. ಶ್ರೀಯವರ ಮೊದಲ ವಿದ್ಯಾಭ್ಯಾಸ ಶ್ರೀರಂಗಪಟ್ಟಣದಲ್ಲಿ. ಅನಂತರ ಎಂ.ಎ., ಬಿ.ಎಲ್. ಪದವೀಧರರಾದರು. ಅಧ್ಯಾಪಕ ವೃತ್ತಿಯನ್ನು ಕೈಗೊಂಡರು. 1909 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಅಧ್ಯಾಪಕರಾದರು. ಶ್ರೇಷ್ಠ ಅಧ್ಯಾಪಕರೆಂದು ಕೀರ್ತಿ ಪಡೆದರು. ಇಂಗ್ಲಿಷ್, ಕನ್ನಡ, ತಮಿಳು, ಸಂಸ್ಕೃತ ಭಾಷಾ ಸಾಹಿತ್ಯಗಳಲ್ಲಿ ಅಪಾರ ಪಾಂಡಿತ್ಯವಿದ್ದ ಶ್ರೀಯವರು ಸಾಹಿತ್ಯರಂಗದಲ್ಲಿ ತುಲನಾತ್ಮಕ ಸೃಷ್ಟಿಯನ್ನೂ, ವಿಮರ್ಶನ ಶಕ್ತಿಯನ್ನು ಬೆಳೆಸಿಕೊಂಡರು. ಸಂಸ್ಕೃತ, ದ್ರಾವಿಡ ಹಾಗೂ ಇಂಗ್ಲಿಷ್ ಭಾಷೆಗಳ ಛಂದೋ ಪ್ರಕಾರದ ಗಾಢ ಪರಿಚಯವಿದ್ದ ಬಿ.ಎಂ.ಶ್ರೀ ಕನ್ನಡ ಜಾಯಮಾನಕ್ಕೆ ಹೊಂದಿಕೊಳ್ಳುವಂಥ ಆಧುನಿಕ ಭಾವನೆಗಳ ಪ್ರಕಾಶನಕ್ಕೆ ಸಹಾಯಕವಾಗುವಂಥ ಹೊಸ ಛಂದೋರೂಪಗಳನ್ನು ಕಲ್ಪಿಸಿದರು. ನವೋದಯ ಕವಿಗಳು ವೇಗವಾಗಿ ಮುಂದುವರಿಯಲು ರಾಜಮಾರ್ಗವನ್ನು ನಿರ್ಮಿಸಿದರು.
'ಶ್ರೀ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಇವರು ಪ್ರತಿಭಾವಂತ ಅಧ್ಯಾಪಕರು, ಉನ್ನತ ಆಡಳಿತಾಧಿಕಾರಿಗಳು, ಕವಿಗಳು, ವಿದ್ವಾಂಸರು ಆಗಿದ್ದರು. ಹಿರಿಯ ಮರ್ಯಾದೆ, ಮನ್ನಣೆಗಳಿಗೆ ಪಾತ್ರರಾಗಿದ್ದು, ಕನ್ನಡನಾಡಿನ ಚರಿತ್ರೆಯಲ್ಲಿ ಸ್ಮರಣೀಯರು. ಕನ್ನಡ ನವೋದಯ ಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಆಚಾರ್ಯಪುರುಷ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು ಕನ್ನಡದ ಪುರೋಭಿವೃದ್ಧಿಯ ಬಗೆಗೆ ಗಾಢವಾದ ಚಿಂತನೆಯನ್ನು ಹೊಂದಿದ್ದರು.
ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮೊತ್ತಮೊದಲಿಗೆ 'ಶ್ರೀ' ಕಾವ್ಯನಾಮದಿಂದ ಬಿ.ಎಂ.ಶ್ರೀ ಅವರ 'ಇಂಗ್ಲಿಷ್ ಗೀತಗಳು' ಸಂಕಲನವನ್ನು ಪ್ರಕಟಿಸಿದಾಗ (1926) 'ಮೂಡಿದನು ರವಿ ಮೂಡಿದನು' - ಹೊಸಗನ್ನಡ ಕವಿ ರವಿ ಮೂಡಿದನು' ಎಂದು ಕನ್ನಡಿಗರು ಉದ್ಗಾರ ತೆಗೆದರು. ಇದೊಂದು ಯುಗಪ್ರವರ್ತಕ ಕೃತಿ, ಭಾಷ, ಕಾವ್ಯಶೈಲಿ, ಛಂದಸ್ಸು, ಕಾವ್ಯದ ವಸ್ತು-ಹೀಗೆ ಎಲ್ಲ ದೃಷ್ಟಿಯಿಂದ ಕನ್ನಡ ಕಾವ್ಯ ಪರಂಪರೆಯಲ್ಲಿ ಹೊಸತನದ ಛಾಪು ಎದ್ದು ಕಾಣುವಂಥದು. ಕಥಾವಸ್ತುವಿನ ಆಯ್ಕೆ ವಿಷಯದಲ್ಲಿ 'ಶ್ರೀ'ಯವರು ಕ್ರಾಂತಿಕಾರಿಗಳು, ಕವಿ ಸಮಯ, ಅರ್ಥಾಲಂಕಾರ, ಸಂಸ್ಕೃತಭೂಯಿಷ್ಟವಾದ ಶೈಲಿ, ಆ ಶೈಲಿಗೆ ಬಣ್ಣ ಬಂದ ವರ್ಣವೃತ್ತ, ಕಂದಗಳ ಬಳಕೆ - ಈ ಎಲ್ಲ ಸಾಂಪ್ರದಾಯಿಕ ಸಂಕೋಲೆಗಳನ್ನು ಕಡಿದು ಹಾಕಿ, ಅಚ್ಚಗನ್ನಡ ನುಡಿಯಲ್ಲಿ ಕನ್ನಡ ಛಂದಸ್ಸಿನ ಹೊಸ ಹೊಸ ಮಟ್ಟುಗಳಲ್ಲಿ ಸ್ವಾನುಭಾವ ನಿಷ್ಠ ಭಾವಗೀತೆಗಳನ್ನು ಸಮೃದ್ಧವಾಗಿ ರಚಿಸಬಲ್ಲ ಕನ್ನಡ ಕವಿಗಳ ಹೊಸ ಪೀಳಿಗೆಯೊಂದು ಹುಟ್ಟಲು ಕಾರಣಪುರುಷರಾದರು.
ಕನ್ನಡ ಸಾಹಿತ್ಯಕ್ಕೆ ಶ್ರೀಯವರು ಕೊಟ್ಟ ಇನ್ನೊಂದು ಅಪೂರ್ವ ಕೊಡುಗೆಯೆಂದರೆ ಸಂಸ್ಕೃತ ಕಾವ್ಯ ಪ್ರಪಂಚದಲ್ಲಿ ಇಲ್ಲದ ದುರಂತ ನಾಟಕ. ಶ್ರೀಯವರು ಷೇಕ್ಸ್ಪಿಯರ್ ನಾಟಕಗಳನ್ನು, ಗ್ರೀಕ್ ರುದ್ರ ನಾಟಕಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಕನ್ನಡದಲ್ಲಿ ನಾಟಕ ರಚನೆ ವಿಫುಲವಾಗಿಲ್ಲದಿದ್ದರೂ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಎಷ್ಟು ಸುಂದರವಾದ, ಪ್ರಭಾವಶಾಲಿಯಾದ ನಾಟಕೀಯಾಂಶಗಳು ಇವೆ ಎಂಬುದನ್ನು ತೋರಿಸಲು ಅವರು ರನ್ನನ 'ಸಾಹಸಭೀಮ ವಿಜಯ'ವನ್ನು 'ಗದಾಯುದ್ಧ ನಾಟಕವನ್ನಾಗಿ ರೂಪಿಸಿದರು. ಗ್ರೀಕ್ ನಾಟಕಕಾರ ಸಾಫೋಕ್ಲೀಸನ ಸುಪ್ರಸಿದ್ದ ಟ್ರಾಜಿಡಿ “ಅಜೆಕ್ಟ್' ನಾಟಕವನ್ನು ಮಹಾಭಾರತದ ಅಶ್ವತ್ಥಾಮನ ಜೀವನ ಘಟನೆಗಳಿಗೆ ಹೊಂದಿಸಿಕೊಂಡು “ಅಶ್ವತ್ಥಾಮನ್' ನಾಟಕವನ್ನು ರಚಿಸಿದರು. ನಮ್ಮ ಪ್ರಾಚೀನ ಸಾಹಿತ್ಯದ ವಸ್ತುಗಳನ್ನು ಆರಿಸಿಕೊಂಡು ಎಂಥ ಒಳ್ಳೆಯ ನಾಟಕಗಳನ್ನು ರೂಪಿಸಬಹುದು ಎಂಬುದನ್ನು ತೋರಿಸಿದರು. 'ಪಾರಸಿಕರು' ಶ್ರೀಯವರ ಇನ್ನೊಂದು ಮೌಲಿಕ ಕೃತಿ. ಇದು ಗ್ರೀಕ್ ನಾಟಕಕಾರ ಎಸ್ಕಲಸ್‌ನ ನಾಟಕದ ಭಾಷಾಂತರ.
ಕನ್ನಡ ಕೈಪಿಡಿಯ ಮೊದಲ ಸಂಪುಟದಲ್ಲಿ ಪ್ರಕಟವಾಗಿರುವ 'ಕನ್ನಡ ಛಂದಸ್ಸಿನ ಚರಿತ್ರೆ', ಎರಡನೆಯ ಸಂಪುಟದಲ್ಲಿನ 'ಕನ್ನಡ ಸಾಹಿತ್ಯ ಚರಿತ್ರೆ', 'ಕನ್ನಡ ಭಾಷೆಯ ಚರಿತ್ರೆ', ಶ್ರೀಯವರ ವಿದ್ವತ್ತಿಗೆ ಕನ್ನಡಿಯಾಗಿದೆ. ಕೇಶಿರಾಜನ 'ಶಬ್ದಮಣಿ ದರ್ಪಣ'ವನ್ನು ಅವರು ಕರತಲಾಮಲಕ ಮಾಡಿಕೊಂಡಿದ್ದರು.
'ಕೃಷ್ಣರಾಜ ರಜತಮಹೋತ್ಸವ ಪ್ರಗಾಥ', 'ಇಸ್ಲಾಂ ಸಂಸ್ಕೃತಿ' ಅನುವಾದ ಇವರ ಮುಖ್ಯ ಕೃತಿಗಳು. ಶ್ರೀಯವರು ಕನ್ನಡ ನಾಡುನುಡಿಗಳ ಪುನರುಜೀವನಕ್ಕೆ ಸಲ್ಲಿಸಿರುವ ಕಾಣಿಕೆ ಅಪಾರ. ಹೊಸಗನ್ನಡ ಕವಿತೆಯ ಕಣ್ಣು ತೆರೆಯುವಂತೆ ಮಾಡಿದರು. ಕನ್ನಡದ ಅಭಿವೃದ್ಧಿಗಾಗಿ ಹಲವಾರು ಉಪನ್ಯಾಸಗಳು, ಗ್ರಂಥ ಪ್ರಕಟಣೆ, ಸಾಹಿತ್ಯ ಪರೀಕ್ಷೆಗಳ ವ್ಯವಸ್ಥೆ, ಅಚ್ಚುಕೂಟದ ಸ್ಥಾಪನೆ, ಹಳಗನ್ನಡ, ನಡುಗನ್ನಡಗಳ ಗಣ್ಯ ಕೃತಿಗಳ ಸಂಗ್ರಹ, ಐದು ಭಾಗಗಳಲ್ಲಿ ಕನ್ನಡ ಕೈಪಿಡಿಯನ್ನು ರಚಿಸುವ ಯೋಜನೆ, ಹೀಗೆ ಇನ್ನೂ ಹಲವು ಕಾರ್ಯಗಳನ್ನು ಮಾಡಿರುವ 'ಶ್ರೀ' ಕನ್ನಡ ವಿದ್ವತ್ತಿಗೆ ಸಂಬಂಧಿಸಿದಂತೆ ನೀಡಿದ ಕಾಣಿಕ ಮಹತ್ತರವಾದದ್ದು.
ಕನ್ನಡದಲ್ಲಿ ಪೌರಾಣಿಕ ಮತ್ತು ಅನುವಾದಿತ ರುದ್ರನಾಟಕಗಳ ರಚನೆಗೆ ಮಾರ್ಗ ತೋರಿಸಿದ ಶ್ರೀಯವರು ಕವಿರಾಜಮಾರ್ಗ, ಕಾವ್ಯಾವಲೋಕನಗಳ ಪಾಠ ವಿಮರ್ಶಯ ಮೂಲಕ ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಅಂಕುರಾರ್ಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡನಾಡಿನ ಚರಿತ್ರೆ', 'ಕನ್ನಡ ಕೈಪಿಡಿ', “ಕಾವ್ಯ ಸಂಗ್ರಹಗಳು' ಈ ರೀತಿಯ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಕನ್ನಡ ವಿದ್ವತ್ತಿಗೆ ಅಡಿಪಾಯ ಹಾಕಿದರು.
ಬಿ.ಎಂ.ಶ್ರೀಯವರ ಸೇವೆಯನ್ನು ಕನ್ನಡ ಜನತೆ ಹಲವು ರೀತಿಯಲ್ಲಿ ಗೌರವಿಸಿದೆ. 1928ರಲ್ಲಿ ಗುಲ್ಬರ್ಗದಲ್ಲಿ ನಡೆದ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆರಿಸಿತು. ಆಗಿನ ಮೈಸೂರು ರಾಜರು ಇವರಿಗೆ 1938ರಲ್ಲಿ 'ರಾಜಸೇವಾಸಕ್ತ' ಬಿರುದು ನೀಡಿದರು. 1941ರಲ್ಲಿ ಶಿಷ್ಯರು ಹಾಗೂ ಮಿತ್ರರು 'ಸಂಭಾವನೆ' ಎಂಬ ಅಭಿನಂದನ ಗ್ರಂಥ ಅರ್ಪಿಸಿದರು. ಇದು ಕನ್ನಡದ ಮೊದಲ ಅಭಿನಂದನ ಗ್ರಂಥ.
ಅಧ್ಯಯನ, ವಿದ್ಯಾದಾನ, ಸಾಹಿತ್ಯೋಪಾಸನೆ, ಕನ್ನಡಸೇವೆ, ಕರ್ತವ್ಯಶ್ರದ್ದೆಗೆ ಹೆಸರಾದ ಬಿ.ಎಂ. ಶ್ರೀಕಂಠಯ್ಯನವರು 1946ರ ಜನವರಿ 5ರಂದು ನಿಧನರಾದರು.
COMMENTS