Aihole Temple Information in Kannada Language: In this article, we are providing ಐಹೊಳೆ ಶಾಸನದ ಮಹತ್ವ for students and teachers. ಇದು ಬಾಗಲಕೋಟೆ ಜಿಲ್ಲೆ ಹುನುಗುಂದ ತಾಲ್ಲೂಕಿನಲ್ಲಿದೆ. ಎಲ್ಲೆಲ್ಲಿ ನೋಡಿದರೂ ಇಲ್ಲಿ ದೇವಾಲಯಗಳೇ. ಸುಮಾರು 125 ದೇವಾಲಯಗಳನ್ನು ಇಲ್ಲಿ ಗುರುತಿಸಲಾಗಿದೆ. ಪ್ರಾರಂಭದಲ್ಲಿ ಇದು ಚಾಲುಕ್ಯರ ರಾಜಧಾನಿಯಾಗಿತ್ತು. ಒಂದನೆಯ ಪುಲಿಕೇಶಿ ತನ್ನ ರಾಜಧಾನಿಯನ್ನು ಬಾದಾಮಿಗೆ ಬದಲಾಯಿಸಿದ ಮೇಲೂ ಐಹೊಳೆ ದಕ್ಷಿಣದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬಹುಕಾಲ ಮುಂದುವರಿಯಿತು. ಅಂತೆಯೇ ಐಹೊಳೆ ವಾಸ್ತುಶಿಲ್ಪದ ಪ್ರಯೋಗಕ್ಕೆ ಮುಂಚೂಣಿಯಲ್ಲಿತ್ತು. ಇಲ್ಲಿ ಪ್ರಮುಖವಾಗಿ ಐದು ದೇವಾಲಯಗಳನ್ನು ಗಮನಿಸಬಹುದಾಗಿದೆ.
Aihole Temple Information in Kannada Language: In this article, we are providing ಐಹೊಳೆ ಶಾಸನದ ಮಹತ್ವ for students and teachers. Students can use this Aihole Temple Information in Kannada to complete their homework.
ಐಹೊಳೆ ಶಾಸನದ ಮಹತ್ವ Aihole Temple Information in Kannada
ಇದು ಬಾಗಲಕೋಟೆ ಜಿಲ್ಲೆ ಹುನುಗುಂದ ತಾಲ್ಲೂಕಿನಲ್ಲಿದೆ. ಎಲ್ಲೆಲ್ಲಿ ನೋಡಿದರೂ ಇಲ್ಲಿ ದೇವಾಲಯಗಳೇ. ಸುಮಾರು 125 ದೇವಾಲಯಗಳನ್ನು ಇಲ್ಲಿ ಗುರುತಿಸಲಾಗಿದೆ. ಪ್ರಾರಂಭದಲ್ಲಿ ಇದು ಚಾಲುಕ್ಯರ ರಾಜಧಾನಿಯಾಗಿತ್ತು. ಒಂದನೆಯ ಪುಲಿಕೇಶಿ ತನ್ನ ರಾಜಧಾನಿಯನ್ನು ಬಾದಾಮಿಗೆ ಬದಲಾಯಿಸಿದ ಮೇಲೂ ಐಹೊಳೆ ದಕ್ಷಿಣದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬಹುಕಾಲ ಮುಂದುವರಿಯಿತು. ಅಂತೆಯೇ ಐಹೊಳೆ ವಾಸ್ತುಶಿಲ್ಪದ ಪ್ರಯೋಗಕ್ಕೆ ಮುಂಚೂಣಿಯಲ್ಲಿತ್ತು. ಇಲ್ಲಿ ಪ್ರಮುಖವಾಗಿ ಐದು ದೇವಾಲಯಗಳನ್ನು ಗಮನಿಸಬಹುದಾಗಿದೆ.
Read also : Shravanabelagola Information in Kannada Language
ಲಾಡಖಾನ್ ದೇವಾಲಯ: ಐಹೊಳೆಯ ಪ್ರಾಚೀನ ದೇವಾಲಯದ ಎತ್ತರವಲ್ಲದ ಸಮತಟ್ಟಾದ ಮೇಲ್ಯಾವಣಿಯನ್ನು ಹೊಂದಿದ್ದು ಇದರ ಆಕಾರ ಗುಹಾಂತರ ದೇವಾಲಯಗಳನ್ನು ನೆನಪಿಗೆ ತರುತ್ತದೆ. ಸುಮಾರು 50 ಅಡಿ ಚೌಕಾಕಾರದ ಕೋಣೆಯೇ ಇದರ ಮುಖ್ಯ ಭಾಗ. ಪೂರ್ವ ದಿಕ್ಕಿಗಿರುವ ಈ ದೇವಾಲಯದ ಮುಂಭಾಗದಲ್ಲಿ 4 ಕಂಬಗಳಿಂದ ಕೂಡಿರುವ ಒಂದು ಮುಖ ಮಂಟಪವಿದೆ. ಮತ್ತೆ ರಂಗಮಂಟಪದಲ್ಲಿ 4 ಕಂಬಗಳ 4ಸಾಲುಗಳ ಒಟ್ಟು 16 ಕಂಬಗಳಿವೆ. ಪೂರ್ವ, ದಕ್ಷಿಣ, ಉತ್ತರ ಗೋಡೆಗಳಲ್ಲಿ ಸುಂದರವಾಗಿ ಕೆತ್ತಿದ ಜಾಲಂಧ್ರಗಳಿವೆ. ಒಳ ಹಜಾರದಲ್ಲಿ ಪಶ್ಚಿಮದ ಗೋಡೆಗೆ ಸೇರಿದಂತ ಚಿಕ್ಕ ಆಯತಾಕಾರದ ಗರ್ಭಗೃಹವಿದೆ. ಇದರ ದ್ವಾರದ ಮೇಲೆ ಗರುಡನ ವಿಗ್ರಹವಿದೆ. ಇದು ಶಿವದೇವಾಲಯ, ಕಂಬದಲ್ಲಿ ರತಿ, ಮನ್ಮಥರ ಶಿಲ್ಪವಿದೆ. ಗರ್ಭಗುಡಿಯ ಮೇಲೆ ಇನ್ನೊಂದು ಗರ್ಭಗೃಹ, ಅದೇ ದೇವಾಲಯದ ಶಿಖರದಂತಿರುವುದು ಗಮನಾರ್ಹ, ಪಶ್ಚಿಮದ ಗೋಡೆಯ ಮೇಲೆ ಸೂರ್ಯ ವಿಗ್ರಹವಿದೆ. ಲಾಡಖಾನ್ ಹೆಸರಿನ ಒಬ್ಬ ಮುಸ್ಲಿಂಸಾಧು ಈ ದೇವಾಲಯದಲ್ಲಿ ವಾಸ ಮಾಡುತ್ತಿದ್ದುದರಿಂದ ಈ ದೇವಾಲಯಕ್ಕೆ ಲಾಡಖಾನ್ ಎಂಬ ಹೆಸರಿನಿಂದ ಕರೆಯಲಾಯಿತು ಎಂದು ಹೇಳಲಾಗುತ್ತದೆ.
Read also : Somanathapura Information in Kannada Language
ದುರ್ಗಾ ದೇವಾಲಯ: ಕೋಟೆಯ ಬಾಗಿಲ ಬಳಿ ಈ ದೇವಾಲಯ ವಿರುವುದರಿಂದ ಇದನ್ನು ದುರ್ಗ ದೇವಾಲಯ ಎನ್ನಲಾಗುತ್ತಿದೆ. ವಾಸ್ತುಶೈಲಿಯಿಂದ ಇದು ಅಪೂರ್ವವಾದ ಹಿಂದೂ ದೇವಾಲಯ. ಈ ದೇವಾಲಯಕ್ಕೆ ಕುದುರೆಯ ಲಾಳಾಕಾರದ ವಿನ್ಯಾಸವನ್ನು ಅಳವಡಿಸಲಾಗಿದೆ. ಇಲ್ಲಿಯ ಗರ್ಭಗೃಹ, ಮುಂದಿನ ಮಂಟಪ, ಅದರ ಸುತ್ತಲೂ ಇರುವ ಪ್ರದಕ್ಷಿಣ ಪಥ, ಹೊರಗೆ ಇದೇ ಆಕಾರದಲ್ಲಿ ಎತ್ತರದ ಜಗಲಿ ಮತ್ತು ಕಂಬಗಳನ್ನು ಒಳಗೊಂಡ ಇನ್ನೊಂದು ಪ್ರಾಕಾರ, ದೇವಾಲಯವನ್ನು ಪ್ರವೇಶಿಸಲು ಮುಂಭಾಗದಲ್ಲಿ ಎಡ ಮತ್ತು ಬಲ ಭಾಗಗಳಲ್ಲಿ ಮೆಟ್ಟಿಲು ಸಾಲು. ಇವು ಈ ದೇವಾಲಯದ ಮುಖ್ಯ ಅಂಗಗಳು. ಅಲ್ಲಲ್ಲಿ ಜಾಲಂಧ್ರಗಳಿವೆ. ಎರಡನೆಯ ಸುತ್ತಿನ ಹೊರಗೋಡೆಯಲ್ಲಿ ಗೂಡುಗಳು ಮತ್ತು ಅವುಗಳಲ್ಲಿ ಸುಂದರ ಶಿಲ್ಪಗಳಿವೆ. ಗರ್ಭಗೃಹದ ಮೇಲೆ ನಾಗಶೈಲಿಗೆ ಸೇರಿದ ಶಿಖರವಿದೆ. ದೇವಾಲಯ ಒಟ್ಟು 84 ಅಡಿ ಉದ್ದ, 36 ಅಡಿ ಅಗಲ ಮತ್ತು ನೆಲದಿಂದ ಸುಮಾರು 12 ಅಡಿ ಎತ್ತರವಾಗಿದೆ. ಹೊರವಲಯದ ಚೌಕನೆಯ ಕಂಬಗಳಲ್ಲಿ ಅನೇಕ ಸ್ತ್ರೀ ಪುರುಷರ ಶಿಲ್ಪಗಳಿವೆ. ಆ ಕಾಲದ ಜನರ ಉಡುಪು, ಆಭರಣ, ಕೇಶ ವಿನ್ಯಾಸಗಳನ್ನು ತಿಳಿಯಲು ಇವು ಸಹಾಯವಾಗಿವೆ. ರಾಮಾಯಣದ ಶಿಲ್ಪಗಳು, ಉಗ್ರನರಸಿಂಹ, ಅರ್ಧನಾರೀಶ್ವರ ಶಿಲ್ಪ, ನಂದಿಯ ಮೇಲೆ ಕುಳಿತಿರುವ ಈಶ್ವರನ ಶಿಲ್ಪ, ಮಹಿಷಾಸುರ ಮರ್ದೀನಿ ಶಿಲ್ಪಗಳು ಆಕರ್ಷಕವಾಗಿದ್ದು ಇಲ್ಲಿಯ ವೈಶಿಷ್ಟವೆನ್ನಬಹುದು.
Read also : Halebeedu History in Kannada Language
ಕೋಂತಿ ಗುಡಿ: ಇಲ್ಲಿನ ಕೋಂತಿ ಗುಡಿಗಳ ಗುಂಪು ಅತ್ಯಂತ ಪ್ರಾಚೀನವಾದದ್ದು. ಇತರ ಗುಡಿಗಳಂತೆ ಇಲ್ಲಿ ಪ್ರದಕ್ಷಿಣಾಪಥವಿಲ್ಲ. ಮುಖಮಂಟಪದಲ್ಲಿನ ಚೌಕನೆಯ ಕಂಬಗಳು ಅದರ ಪ್ರಾಚೀನತೆಯನ್ನು ಸಾರುತ್ತದೆ. ತ್ರಿಮೂರ್ತಿ, ಉಮಾ ಮಹೇಶ್ವರ, ಶೇಷಶಾಯಿ, ಅರ್ಧನಾರೀಶ್ವರ, ಗಜಸಂಹಾರ ಮೂರ್ತಿ ಶಿಲ್ಪಗಳು ಸುಂದರವಾಗಿವೆ.
ಹುಚ್ಚುಮಲ್ಲಿ ಗುಡಿ: ಇಲ್ಲಿ ಗರ್ಭಗುಡಿ, ಪ್ರದಕ್ಷಿಣ ಪಥ, ಅಂತರಾಳ ಮಂಟಪ ಮತ್ತು ಮುಖಮಂಟಪಗಳಿವೆ. ಗರುಡನ ಶಿಲ್ಪವಿದೆ. ಸಮೀಪದಲ್ಲಿ ಗಂಗಾ ಯಮುನೆಯರ ಶಿಲ್ಪ ಇವೆ. ಈ ಗುಡಿಗೆ ನಾಗರಶೈಲಿಯ ಶಿಖರವಿದೆ.
ಮೇಗುತಿ ದೇವಾಲಯ: ಜೈನ ಧರ್ಮಕ್ಕೆ ಸಂಬಂಧಿಸಿದ ಗುಡಿಗಳಲ್ಲಿ ಮುಖ್ಯವಾದದ್ದು ಮೇಗುತಿ ದೇವಾಲಯ ಅಥವಾ ಮೇಲಣಗುಡಿ, ಕ್ರಿ.ಶ. 634 ರಲ್ಲಿ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ರವಿಕೀರ್ತಿಯಿಂದ ಇದು ರಚನೆಗೊಂಡಿತು. ಈ ದೇವಾಲಯದಲ್ಲಿನ ಇತಿಹಾಸ ಪ್ರಸಿದ್ದ ಶಾಸನದಿಂದ ಸಂಸ್ಕೃತ ಕವಿಗಳಾದ ಕಾಳಿದಾಸ, ಭಾರವಿ ಕ್ರಿ.ಶ. 634ಕ್ಕಿಂತ ಹಿಂದೆಯೇ ಇದ್ದರೆಂದು ತಿಳಿದುಬರುತ್ತದೆ. ಇಡೀ ಐಹೊಳೆಯಲ್ಲಿ ಇದು ಬಹುದೊಡ್ಡ ದೇವಾಲಯ ಗರ್ಭಗುಡಿಯ ಮೇಲೆ ಶಿಖರವಿಲ್ಲದಿದ್ದರೂ ಎರಡನೇ ಅಂತಸ್ತಿನಲ್ಲಿ ಇನ್ನೊಂದು ಗರ್ಭಗೃಹವಿದೆ.
ಐಹೊಳೆಯಲ್ಲಿನ ಇತರ ಹಿಂದೂ ಗುಡಿಗಳೆಂದರೆ ಜ್ಯೋತಿರ್ಲಿಂಗ, ಗಳಗನಾಥ, ರಾಮಲಿಂಗ, ದೇಣಿ, ಅಂಬಿಗೇರ, ಚಿಕ್ಕಿ ಮುಂತಾದವು, ಇದಲ್ಲದೆ ಮೇಗುತಿಗುಡ್ಡದ ದಕ್ಷಿಣದ ಕೊನೆಯಲ್ಲಿ ಒಂದು ಜೈನ ಗುಹಯಿದೆ. ಶೈವಗುಹೆಗಿಂತ ಹೆಚ್ಚು ಆಳವಾಗಿ ಕೊರೆದು ಮಾಡಿದ ಈ ಗುಹ ಕೆತ್ತನೆಯ ಕೆಲಸದಲ್ಲಿ ಶೈವಗುಹೆಯನ್ನೇ ಹೋಲುತ್ತದೆ.
COMMENTS