ನಗರ ನೈರ್ಮಲ್ಯ ವ್ಯವಸ್ಥೆ ಪ್ರಬಂಧ Urban Sanitation System Essay in Kannada Language 1.ನಗರವನ್ನು ಚೊಕ್ಕಟವಾಗಿಡಿ. 2.ರಾಶಿ ರಾಶಿ ಬೀಳುವ ಕಸಕಡ್ಡಿ 3.ಕೊಳಚೆಯ ಸದುಪಯೋಗ 4.ರೋಗ ಹರಡುವುದು 5 ಪೌರಪ್ರಜ್ಞೆ ನೀವು ನಿಮ್ಮನಗರದ ಬೀದಿಗಳಲ್ಲಿ ಕೊಳಚೆ ಸಾಗಿಸುವ ವಾಹನಗಳ ಮೇಲೆ ನಿಮ್ಮ ನಗರವನ್ನು ಚೊಕ್ಕಟವಾಗಿಡಿ' ಎಂದು ಬರೆದಿರುವುದನ್ನು ನೋಡಿದ್ದೀರಿ. ಇದು ನಗರವಾಸಿಗಳ ಪೌರಪ್ರಜ್ಞೆಗೆ ಕರೆ. ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ವಾಸಿಸುವ ನಗರದ ನೈರ್ಮಲ್ಯದ ಹೊಣೆ ಕೇವಲ ಸ್ಥಳೀಯ ಸಂಸ್ಥೆಗಳದ್ದು ಮಾತ್ರವಲ್ಲ, ಪ್ರತಿಯೊಬ್ಬ ನಗರವಾಸಿಯದೂ ಹೌದು.
ನಗರ ನೈರ್ಮಲ್ಯ ವ್ಯವಸ್ಥೆ ಪ್ರಬಂಧ: In this article, we are providing ನಗರ ನೈರ್ಮಲ್ಯ ವ್ಯವಸ್ಥೆ ಪ್ರಬಂಧ for students and teachers. Students can use this Urban Sanitation System Essay in Kannada Language to complete their homework.
ನಗರ ನೈರ್ಮಲ್ಯ ವ್ಯವಸ್ಥೆ ಪ್ರಬಂಧ Urban Sanitation System Essay in Kannada Language
1.ನಗರವನ್ನು ಚೊಕ್ಕಟವಾಗಿಡಿ. 2.ರಾಶಿ ರಾಶಿ ಬೀಳುವ ಕಸಕಡ್ಡಿ 3.ಕೊಳಚೆಯ ಸದುಪಯೋಗ 4.ರೋಗ ಹರಡುವುದು 5 ಪೌರಪ್ರಜ್ಞೆ
ನೀವು ನಿಮ್ಮನಗರದ ಬೀದಿಗಳಲ್ಲಿ ಕೊಳಚೆ ಸಾಗಿಸುವ ವಾಹನಗಳ ಮೇಲೆ ನಿಮ್ಮ ನಗರವನ್ನು ಚೊಕ್ಕಟವಾಗಿಡಿ' ಎಂದು ಬರೆದಿರುವುದನ್ನು ನೋಡಿದ್ದೀರಿ. ಇದು ನಗರವಾಸಿಗಳ ಪೌರಪ್ರಜ್ಞೆಗೆ ಕರೆ. ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ವಾಸಿಸುವ ನಗರದ ನೈರ್ಮಲ್ಯದ ಹೊಣೆ ಕೇವಲ ಸ್ಥಳೀಯ ಸಂಸ್ಥೆಗಳದ್ದು ಮಾತ್ರವಲ್ಲ, ಪ್ರತಿಯೊಬ್ಬ ನಗರವಾಸಿಯದೂ ಹೌದು.
ಕ್ರಿ.ಪೂ. 4000 ರಿಂದ 2500ರಲ್ಲಿನ ಹರಪ್ಪಾ-ಮೊಹೆಂಜದಾರೋಗಳಲ್ಲಿನ ಜನರು ನಗರ ನಿರ್ಮಾಣ ಮತ್ತು ಅದರ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದು ಪ್ರಶಂಸಪಡುವಂತಹದು. ಅವರು ರಚಿಸಿದ ಚರಂಡಿ ವ್ಯವಸ್ಥೆ, ಗೃಹರಚನೆ ಮತ್ತು ರಸ್ತೆ ನಿರ್ಮಾಣ ಎಲ್ಲವೂ ಸೋಜಿಗ ಪಡುವಂಥದು.
ಪ್ರತಿದಿನ ಕೊಳಚೆ ಬೇರೆ ಬೇರೆ ಕಡೆಗಳಿಂದ ಸೇರುತ್ತದೆ. ಮನೆ, ಕೊಟ್ಟಿಗೆ, ಬೀದಿ, ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಕೈಗಾರಿಕೆಗಳಿಂದ ಕಸಕಡ್ಡಿ ವ್ಯರ್ಥವಾಗಿ ರಾಶಿ ರಾಶಿ ಬೀಳುತ್ತವೆ. ಹಣ್ಣು, ತರಕಾರಿ, ಮಾಂಸ, ಹಸಿರೆಲೆಗಳನ್ನು ಹಾಗೆಯೇ ಬಿಟ್ಟರೆ ಅವು ಕೊಳೆತು ನಾರುತ್ತವೆ. ಚಿಂದಿ ಬಟ್ಟೆ, ಕಾಗದದ ಚೂರು, ಒಡೆದ ಗಾಜು, ಮರಮುಟ್ಟು, ಪ್ಲಾಸ್ಟಿಕ್, ನೈಲಾನ್ ತುಂಡುಗಳು ಬೀದಿಯಲ್ಲಿನ ಸ್ವಚ್ಛತೆಗೆ ಅಡ್ಡಿ ತರುತ್ತದೆ. ಗಮನಿಸದೆ ಉರಿಸುವ ಇಂಧನಗಳ ಬೂದಿ ಸಹ ಇದರಲ್ಲಿ ಸೇರುತ್ತದೆ. ಇಂಥ ನಿರರ್ಥಕ ವಸ್ತುಗಳಿಂದ ನಗರ ಜೀವನ ಅಸಹನೀಯವಾಗುತ್ತದೆ.
ಪುರಸಭೆ, ಪಂಚಾಯಿತಿಯವರಿಂದ ನೇಮಿಸಲ್ಪಡುವ ಜಾಡಮಾಲಿಗಳು ಬೀದಿಗಳನ್ನು ಗುಡಿಸುತ್ತಾರೆ. ನೌಕರರು ಸೊಳ್ಳೆ ಕಾಟ ತಪ್ಪಿಸಲು ಮನೆಗಳಿಗೆ ಡಿ.ಡಿ.ಟಿ. ಸಿಂಪಡಿಸುವ, ಚರಂಡಿಗಳಿಗೆ ಪೆನಾಯಿಲ್ ಹಾಕುವ ಕೆಲಸ ಮಾಡುತ್ತಾರೆ. ಇಲಿ ನಾಶಕಗಳಿಂದ ಇಲಿ ಬಿಲಗಳನ್ನು ಮುಚ್ಚುತ್ತಾರೆ. ತಿಗಣಿ ಔಷಧ ಹೊಡೆಸುತ್ತಾರೆ. ಬೀದಿ ನಾಯಿಗಳಿಂದ ಹೆಚ್ಚಾಗಿ ನಾಗರಿಕರಿಗೆ ತೊಂದರೆಯುಂಟಾದರೆ ಅವುಗಳಿಗೆ ವಿಷ ಹಾಕುತ್ತಾರೆ. ಚರಂಡಿ ವ್ಯವಸ್ಥೆ, ನೀರು ಒಂದೆಡೆ ನಿಲ್ಲದಂತೆ ಕ್ರಮಕೈಗೊಳ್ಳುವುದು ಮತ್ತಿತರ ನಾಗರಿಕ ಸೌಲಭ್ಯವನ್ನು ಒದಗಿಸುತ್ತಾರೆ. ಸುಲಭ ಶೌಚಾಲಯವನ್ನು ನಿರ್ಮಿಸಿ ನಗರ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುತ್ತಾರ.
ಕೊಳ, ಕಸ-ಕಡ್ಡಿ ಇತ್ಯಾದಿಗಳು ಹೆಚ್ಚು ಶೇಖರವಾದಾಗ ಅದನ್ನು ಸದುಪಯೋಗಪಡಿಸಿಕೊಳ್ಳಬಹುದು. ದೊಡ್ಡ ಗುಂಡಿ ತೆಗೆದು ಕಸಕಡ್ಡಿ ತುಂಬಿ ಅದಕ್ಕೆ ಸಮನಾಗಿ ಮಣ್ಣು ಸುರಿದು ಮುಚ್ಚಿ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು. ಸಾವಯವ ಪದಾರ್ಥಗಳನ್ನು ಶೇಖರಿಸಿ ಹಸಿರು ಗೊಬ್ಬರ ಅಥವಾ ನಾಟಿ ಗೊಬ್ಬರವಾಗಿ ಪರಿವರ್ತಿಸಿ ವ್ಯವಸಾಯಕ್ಕೆ ಬಳಸಲು ಸಾಧ್ಯ. ದ್ರವರೂಪದ ಕೊಳಚೆಯನ್ನು ತೋಟಗಳಿಗೆ ಹಾಯಿಸಬಹುದು. ಚಿಂದಿ ಬಟ್ಟೆ, ಹರಕು ಕಾಗದಗಳನ್ನು ಕಾಗದ ತಯಾರಿಕೆಗೆ, ಮುರುಕು ಗಾಜನ್ನು ಕಡಿಮ ದರ್ಜೆಯ ಬಾಟಲಿ ತಯಾರಿಕೆಗೆ ಬಳಸಬಹುದು. ಕೊಳಚೆಯನ್ನು ಗುಣಿಯಲ್ಲಿ ತುಂಬಿ ಮಣ್ಣು ಮುಚ್ಚುವುದು ಕೂಳಚಿ ನಿವಾರಣೆಯ ಒಂದು ಸುಲಭ ಕ್ರಮ. ಕೂಳ ಕಸವನ್ನು ಸುಟ್ಟು ಬೂದಿಯನ್ನು ಕೃಷಿಗೆ ಬಳಸಿಕೊಳ್ಳಬಹುದು.
ಸ್ಥಳೀಯ ಸಂಸ್ಥೆಗಳಾದ ಪಂಚಾಯಿತಿ, ಪುರಸಭೆ, ಕಾರ್ಪೊರೇಷನ್‌ಗಳು ನಗರ ಮತ್ತು ಪೇಟೆಗಳ ನೈರ್ಮಲ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಹೊರುತ್ತವೆ. ನಗರದ ಜನರ ಒಳಿತಿಗಾಗಿ ನಗರವನ್ನು ಚೊಕ್ಕಟವಾಗಿಡಬೇಕು.
ನಗರ ನೈರ್ಮಲ್ಯದಲ್ಲಿ ಪುರಜನರ ಪಾತ್ರ ದೊಡ್ಡದು. ಮನೆಯ ಒಳಗೆ, ಹೊರಗೆ ಅವರು ನೈರ್ಮಲ್ಯದ ಕಡೆ ಸದಾ ಜಾಗೃತರಾಗಿರಬೇಕು.
Read also :
Read also :
COMMENTS