ರಾಷ್ಟ್ರೀಯ ಭಾವೈಕ್ಯತೆ ಮೇಲೆ ಪ್ರಬಂಧ Rashtriya Bhavaikya Essay in Kannada Language ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಅನೇಕ ತಾಲ್ಲೂಕುಗಳು ಸೇರಿ ಒಂದು ಜಿಲ್ಲೆಯೂ, ಅನೇಕ ಜಿಲ್ಲೆಗಳು ಸೇರಿ ಒಂದು ರಾಜ್ಯವೂ, ಅನೇಕ ರಾಜ್ಯಗಳು ಸೇರಿ ಒಂದು ರಾಷ್ಟ್ರವೂ ಆಗುತ್ತದೆ. ರಾಜ್ಯಗಳ ಆಡಳಿತವು ಕೇಂದ್ರದ ಅಧೀನಕ್ಕೆ ಒಳಪಟ್ಟಿರುತ್ತದೆ. ಭಾರತವು ಒಂದು ರಾಷ್ಟ; ಕರ್ನಾಟಕ, ತಮಿಳ್ಳಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಬೊಂಬಾಯಿ-ಇತ್ಯಾದಿ ಇನ್ನೂ ಅನೇಕ ರಾಜ್ಯಗಳು ಸೇರಿ ಭಾರತ ಒಂದು ರಾಷ್ಟ್ರವಾಗಿದೆ. ಒಂದು ರಾಷ್ಟ್ರವು ಮುಂದುವರಿಯಬೇಕಾದರೆ ಬೇರೆ ಬೇರೆ ರಾಜ್ಯಗಳಿಗೂ ಕೇಂದ್ರಾಡಳಿತಕ್ಕೂ ಸಂಪೂರ್ಣ ಸಂಬಂಧವಿರಬೇಕು. ಎಲ್ಲ ರಾಜ್ಯದ ಜನರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಇರಬೇಕು.ಪ್ರಜೆಗಳು ರಾಷ್ಟ್ರದ ಅಭಿಮಾನಿಗಳೂ, ಸಾಹಸಿಗರೂ, ಕಷ್ಟಪಟ್ಟು ಕೆಲಸ ಮಾಡುವವರೂ ಆಗಿರಬೇಕು. ಇದು ನಮ್ಮ ದೇಶ, ಇದು ನಮ್ಮ ರಾಷ್ಟ್ರ.
Rashtriya Bhavaikya Essay in Kannada Language: In this article, we are providing ರಾಷ್ಟ್ರೀಯ ಭಾವೈಕ್ಯತೆ ಮೇಲೆ ಪ್ರಬಂಧ / ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ for students and teachers. Students can use this Rashtriya Bhavaikya Essay in Kannada Language to complete their homework.
ರಾಷ್ಟ್ರೀಯ ಭಾವೈಕ್ಯತೆ ಮೇಲೆ ಪ್ರಬಂಧ Rashtriya Bhavaikya Essay in Kannada Language
1. ರಾಷ್ಟ್ರಭಕ್ತಿ 2. ಒಳಜಗಳದ ಪರಿಣಾಮ 3. ಭಾಷಾಸಮಸ್ಯೆ 4, ಅನೇಕತೆಯಲ್ಲಿ ಏಕತೆ 5. ಉಪಸಂಹಾರ
ಅನೇಕ ತಾಲ್ಲೂಕುಗಳು ಸೇರಿ ಒಂದು ಜಿಲ್ಲೆಯೂ, ಅನೇಕ ಜಿಲ್ಲೆಗಳು ಸೇರಿ ಒಂದು ರಾಜ್ಯವೂ, ಅನೇಕ ರಾಜ್ಯಗಳು ಸೇರಿ ಒಂದು ರಾಷ್ಟ್ರವೂ ಆಗುತ್ತದೆ. ರಾಜ್ಯಗಳ ಆಡಳಿತವು ಕೇಂದ್ರದ ಅಧೀನಕ್ಕೆ ಒಳಪಟ್ಟಿರುತ್ತದೆ. ಭಾರತವು ಒಂದು ರಾಷ್ಟ; ಕರ್ನಾಟಕ, ತಮಿಳ್ಳಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಬೊಂಬಾಯಿ-ಇತ್ಯಾದಿ ಇನ್ನೂ ಅನೇಕ ರಾಜ್ಯಗಳು ಸೇರಿ ಭಾರತ ಒಂದು ರಾಷ್ಟ್ರವಾಗಿದೆ.
ಒಂದು ರಾಷ್ಟ್ರವು ಮುಂದುವರಿಯಬೇಕಾದರೆ ಬೇರೆ ಬೇರೆ ರಾಜ್ಯಗಳಿಗೂ ಕೇಂದ್ರಾಡಳಿತಕ್ಕೂ ಸಂಪೂರ್ಣ ಸಂಬಂಧವಿರಬೇಕು. ಎಲ್ಲ ರಾಜ್ಯದ ಜನರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಇರಬೇಕು.ಪ್ರಜೆಗಳು ರಾಷ್ಟ್ರದ ಅಭಿಮಾನಿಗಳೂ, ಸಾಹಸಿಗರೂ, ಕಷ್ಟಪಟ್ಟು ಕೆಲಸ ಮಾಡುವವರೂ ಆಗಿರಬೇಕು. ಇದು ನಮ್ಮ ದೇಶ, ಇದು ನಮ್ಮ ರಾಷ್ಟ್ರ. ನಾವು ಈ ದೇಶದ ಮಕ್ಕಳು, ಇದರ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ' ಎಂದು ಹತ್ತೂರ್ವಕ ನಂಬಿದವರೇ ರಾಷ್ಟ್ರಪ್ರೇಮಿಗಳು, ಇಂತಹ ಭಾವನೆಗಳಲ್ಲಿ ಎಲ್ಲ ಪ್ರಜೆಗಳಲ್ಲೂ ಏಕತೆ ಇರುವುದೇ ರಾಷ್ಟ್ರಕ್ಯ. ಭಾವನೆಗಳ ಏಕತೆಯ ಭಾವೈಕ್ಯ, ಭಾವೈಕ್ಯ ಇದ್ದಲ್ಲಿ ರಾಷ್ಟ್ರಕ್ಕೆ ಇದ್ದೇ ಇರುತ್ತದೆ.
ರಾಜ್ಯಗಳನ್ನು ವಿಸ್ತರಿಸಲು, ಪಕ್ಕದ ರಾಜ್ಯಗಳನ್ನು ಕಬಳಿಸಲು ಶತ್ರುಗಳು ಸದಾ ಹೊಂಚುಹಾಕುತ್ತಲೇ ಇರುತ್ತಾರೆ. ಇದಕ್ಕೆ ಜನರಲ್ಲಿ ಭೇದೋಪಾಯವುಂಟು ಮಾಡುವುದು ಒಂದು ಸಾಧನ. ಒಂದು ದೇಶದ ಜನರಲ್ಲಿ ಭಾಷೆ, ಧರ್ಮ, ಜಾತಿ, ಸಿರಿವಂತಿಕೆ ಇತ್ಯಾದಿ ಅನೇಕ ಕಾರಣಗಳನ್ನು ಜನರಲ್ಲಿ ಬಿತ್ತಿ, ಒಗ್ಗಟ್ಟನ್ನು ಹಾಳು ಮಾಡಿ ದೇಶದ ಒಗ್ಗಟ್ಟಿಗೆ ಭಂಗ ತರಲು ಅಕ್ಕಪಕ್ಕದ ರಾಷ್ಟ್ರಗಳವರು ಸದಾ ಪ್ರಯತ್ನಿಸುತ್ತಿರುತ್ತಾರೆ. ಜನರಿಗೆ ಹಣದ ಆಸೆ ಹುಟ್ಟಿಸುತ್ತಾರೆ. ಅವರನ್ನು ತಮ್ಮ ಕಡೆ ಸಳದುಕೊಡು ತಾವು ಹೇಳಿದಂತೆ ಕೇಳುವ ಹಾಗೆ ಮಾಡುತ್ತಾರೆ. ಸ್ವಾರ್ಥಿಗಳೂ, ಆಳುವವರ ಮೇಲೆ ದ್ವೇಷವುಳ್ಳವರೂ ಇಂತಹ ಅಮಿಷಗಳಿಗೆ ಒಳಗಾಗುತ್ತಾರೆ. ದೇಶಕ್ಕೆ ದ್ರೋಹ ಬಗೆಯುತ್ತಾರೆ.
ನಮ್ಮಲ್ಲಿ ರಾಷ್ಟ್ರಪ್ರೇಮ ಇಲ್ಲದ್ದರಿಂದಲೇ ನಾವು ಅನೇಕ ವರ್ಷಗಳು ಮಹಮ್ಮದೀಯರಿಂದ, ಫ್ರೆಂಚರಿಂದ ಮತ್ತು ಇಂಗ್ಲೀಷರಿಂದ ಆಳಿಸಿಕೊಂಡವು. ಈಗಲೂ ಪ್ರತ್ಯೇಕ ಪ್ರಾಂತಗಳಲ್ಲಿ ಹೆಸರಲ್ಲಿ ಧರ್ಮದ ಹೆಸರಲ್ಲಿ ಕಲಹಗಳು ನಡೆದೇ ಇವೆ.
ಒಂದು ರಾಷ್ಟ್ರದ ಪ್ರಜೆಗಳು ಯಾವುದೇ ಕಾರಣಕ್ಕೂ ತಮ್ಮ ತಮ್ಮಲ್ಲಿ ಆಂತರಿಕ ಕಲಹ ಮಾಡಬಾರದು. ಇದನ್ನೇ ಏಕತೆ ಮತ್ತು ಐಕಮತ್ಯ ಎನ್ನುತ್ತೇವೆ. ನಾವು-ನಾವು ಜಗಳವಾಡಿದರೆ ಅದರಿಂದ ಮೂರನೆಯರಿಗೆ ಲಾಭವಾಗುತ್ತದೆ. ಎರಡು ಬೆಕ್ಕುಗಳು ಜಗಳವಾಡಿಕೊಂಡು ನ್ಯಾಯಕ್ಕಾಗಿ ಕೋತಿಯನ್ನು ಬೇಡಿಕೊಂಡು ಕಜ್ಜಾಯವನ್ನೆಲ್ಲಾ ಕೋತಿ ತಿಂದು ಹಾಕಿದ ಕತೆಯಾಗುತ್ತದೆ ಐಕಮತ್ಯ ಇಲ್ಲದಿದ್ದರೆ,
ಭಾರತದಲ್ಲಿ ನೂರಾರು ಭಾಷೆಗಳನ್ನಾಡುವ ಜನರಿದ್ದಾರೆ. ತಮ್ಮ ಭಾಷೆಗಳ ಬಗ್ಗೆ ಅವರಿಗೆ ಪ್ರೀತಿ ಇರುವುದು ಸಹಜ. ತಮ್ಮ ಧರ್ಮದ ಬಗ್ಗೆ ಪ್ರೀತಿ ಇರುವುದೂ ಸಹಜವೇ. ಹಾಗೆಂದು ಬೇರೆ ಭಾಷೆಯವರನ್ನು, ಬೇರೆ ಧರ್ಮದವರನ್ನೂ ಎಂದೂ ದ್ವೇಷಿಸಬಾರದು. ನಮಗೆ ನಮ್ಮ ಭಾಷೆ, ಧರ್ಮ ಮುಖ್ಯವಾಗಿರುವಂತೆ ಅವರಿಗೆ ಅವರ ಧರ್ಮ ಭಾಷೆ ಮುಖ್ಯವಾಗಿರುತ್ತದೆ. ಆದ್ದರಿಂದ ಅವರ ಭಾಷೆ ಮತ್ತು ಧರ್ಮಗಳ ಬಗ್ಗೆ ನಮಗೆ ಸಹನೆ ಇರಬೇಕು. ಅನೇಕತೆಯಲ್ಲಿ ಏಕತೆ' ಸಾಧಿಸುವುದೇ ರಾಷ್ಟ್ರೀಯ ಏಕತೆಯ ಮೂಲ ಸಾಧನ.
ಬಾಲ್ಯದಿಂದಲೇ ನಮ್ಮ ವಿದ್ಯಾರ್ಥಿಗಳು ಅನ್ಯಭಾಷೆ ಅನ್ಯಧರ್ಮಗಳ ದ್ವೇಷಿಗಳಾಗದೆ ಸಮರಸದಿಂದ ಬಾಳಬೇಕು. ಜಾತಿ, ಧರ್ಮ, ಭಾಷೆ ಪ್ರಾಂತ ಭೇಧಗಳಿದ್ದರೂ ಈ ಎಲ್ಲ ಮಣಿಗಳೂ ರಾಷ್ಟ್ರೀಯತೆ ಎಂಬ ದಾರದಿಂದ ಪೋಣಿಸಲ್ಪಟ್ಟಿವೆ ಎಂದರಿಯಬೇಕು. 'ಭಾರತದಲ್ಲಿ ವಾಸಿಸುವವರೆಲ್ಲಾ ಭಾರತಾಂಬೆಯ ಮಕ್ಕಳು, ಸೋದರ ಸೋದರಿಯರು' ಎಂಬ ಏಕತೆಯ ಮಂತ್ರವನ್ನು ಜಪಿಸುತ್ತಾ ರಾಷ್ಟ್ರದ ಪ್ರಗತಿಗೆ ದುಡಿಯಬೇಕು.
COMMENTS