Mountaineering Essay in Kannada Language: In this article, we are providing ಪರ್ವತಾರೋಹಣ ಬಗ್ಗೆ ಪ್ರಬಂಧ for students and teachers. Students can use this Mountaineering Essay in Kannada Language to complete their homework. ಪರ್ವತಾರೋಹಣದ ಹವ್ಯಾಸ ಇಂದು ಜನಪ್ರಿಯವಾಗಿದೆ. ಇದು ಅತ್ಯಂತ ಅಪಾಯಕಾರಿ ಹಾಗೂ ಸಾಹಸಮಯ ಹವ್ಯಾಸವೂ ಹೌದು. ಇದಕ್ಕೆ ಒಂದು ವ್ಯವಸ್ಥಿತ ರೂಪು ಬಂದದ್ದು 16ನೇ ಶತಮಾನದಲ್ಲಿ ಸ್ವಿಡ್ಕರ್‌ಲೆಂಡಿನ ಜ್ಯೂರಿಕ್‌ನಲ್ಲಿ ಪರ್ವತಾರೋಹಣ ಸಂಸ್ಥೆ ಉದಯವಾದಾಗ, 1953ರಲ್ಲಿ ತೇನ್ಸಿಂಗ್ ನಾರ್ಕೆ ಮತ್ತು ಎಡ್ಕಂಡ್ ಹಿಲರಿ ಉತ್ತುಂಗ ಹಿಮಾಲಯ ಶಿಖರ ಎವರೆಸ್ಟ್ ಹತ್ತಿದ ಬಳಿಕ ನಮ್ಮ ದೇಶದಲ್ಲಿ ಪರ್ವತಾರೋಹಣ ಸಂಸ್ಥೆಗಳು ಹುಟ್ಟಿಕೊಂಡವು. ಇಂಥ ಸಂಸ್ಥೆಗಳು ಭಾರತದಲ್ಲಿ ಇಂದು ಇಪ್ಪತ್ತಕ್ಕೂ ಹೆಚ್ಚು ಇವೆ.
Mountaineering Essay in Kannada Language: In this article, we are providing ಪರ್ವತಾರೋಹಣ ಬಗ್ಗೆ ಪ್ರಬಂಧ for students and teachers. Students can use this Mountaineering Essay in Kannada Language to complete their homework.
ಪರ್ವತಾರೋಹಣ ಬಗ್ಗೆ ಪ್ರಬಂಧ Mountaineering Essay in Kannada Language
1. ವಿವರಣೆ 2. ಉಗಮ ಮತ್ತು ಬೆಳವಣಿಗೆ 3. ಉಪಯೋಗಿಸುವ ವಸ್ತುಗಳು 4. ಪರ್ವತಾರೋಹಣದ ಸಮಸ್ಯೆ ಮತ್ತು ನಿವಾರಣೆ 5. ಉಪಸಂಹಾರ.
ಪರ್ವತಾರೋಹಣದ ಹವ್ಯಾಸ ಇಂದು ಜನಪ್ರಿಯವಾಗಿದೆ. ಇದು ಅತ್ಯಂತ ಅಪಾಯಕಾರಿ ಹಾಗೂ ಸಾಹಸಮಯ ಹವ್ಯಾಸವೂ ಹೌದು. ಇದಕ್ಕೆ ಒಂದು ವ್ಯವಸ್ಥಿತ ರೂಪು ಬಂದದ್ದು 16ನೇ ಶತಮಾನದಲ್ಲಿ ಸ್ವಿಡ್ಕರ್‌ಲೆಂಡಿನ ಜ್ಯೂರಿಕ್‌ನಲ್ಲಿ ಪರ್ವತಾರೋಹಣ ಸಂಸ್ಥೆ ಉದಯವಾದಾಗ, 1953ರಲ್ಲಿ ತೇನ್ಸಿಂಗ್ ನಾರ್ಕೆ ಮತ್ತು ಎಡ್ಕಂಡ್ ಹಿಲರಿ ಉತ್ತುಂಗ ಹಿಮಾಲಯ ಶಿಖರ ಎವರೆಸ್ಟ್ ಹತ್ತಿದ ಬಳಿಕ ನಮ್ಮ ದೇಶದಲ್ಲಿ ಪರ್ವತಾರೋಹಣ ಸಂಸ್ಥೆಗಳು ಹುಟ್ಟಿಕೊಂಡವು. ಇಂಥ ಸಂಸ್ಥೆಗಳು ಭಾರತದಲ್ಲಿ ಇಂದು ಇಪ್ಪತ್ತಕ್ಕೂ ಹೆಚ್ಚು ಇವೆ.
ಪರ್ವತ ಹತ್ತುವವನು ಮಾನಸಿಕ ಹಾಗೂ ದೈಹಿಕವಾಗಿ ದೃಢವಾಗಿರಬೇಕು. ಒಳ್ಳೆಯ ವ್ಯಾಯಾಮ ಮತ್ತು ಸಾಹಸದ ಬಯಕೆಯನ್ನು ಈ ಹವ್ಯಾಸ ಪೂರೈಸುತ್ತದೆ. ಕೇವಲ ಒಂದು ಚಿಕ್ಕ ತಪ್ಪು ಅವನ ಮತ್ತು ಜೊತೆಗಾರರ ಪ್ರಾಣಕ್ಕೆ ಕುತ್ತಾಗಬಹುದು. ಈ ಹವ್ಯಾಸ ಇಂದು ಕೇವಲ ಸಾಹಸ ಕಾರ್ಯವಾಗಿರದೆ, ಅನುಭವ, ಪ್ರಯೋಗಗಳಿಂದ ಬೆಳೆದ ವಿಜ್ಞಾನವೂ ಆಗಿದೆ. ಪರ್ವತಾರೋಹಿಗಳು ಉಪಯೋಗಿಸುವ 'ಹಿಮ ಬೂಟು' ಮತ್ತು ಮಂಜುಗಡ್ಡೆ ಕಡಿಯುವ ಕೊಡಲಿಗಳಲ್ಲಿ ಸುಧಾರಣೆಯಾಗುತ್ತಲೇ ಇದೆ. - ಪರ್ವತಗಳಲ್ಲಿ ಸ್ಕೂಲವಾಗಿ ಎರಡು ಬಗೆ. ಕಲ್ಲು ಬಂಡೆಗಳಿಂದ ತುಂಬಿರುವುದು ಮತ್ತು ಮಂಜಿನಿಂದ ಆವೃತ್ತವಾಗಿರುವುದು. ಇವುಗಳನ್ನು ಹತ್ತುವಾಗ ಎದುರಾಗುವ ಸಮಸ್ಯೆಗಳೂ ಬೇರೆ ಬೇರೆ. ಬಂಡೆ ತುಂಬಿರುವ ಪರ್ವತ ಹತ್ತಲು ಹೆಚ್ಚು ಸಲಕರಣೆ ಬೇಡ. ಬಂಡೆಯ ಮೇಲೆ ಕಾಲಿಟ್ಟಾಗ ಜಾರದಂತೆ ವಿಶಿಷ್ಟ ರೀತಿಯ ಮೊಳೆಗಳ ತಳವಿರುವ ಬೂಟು ಮತ್ತು ಸಾಮಾನ್ಯ ಸರಳ ಪೋಷಾಕು ಸಾಕು.
ಮಂಜುಗಡ್ಡ ತುಂಬಿರುವ ಪರ್ವತ ಹತ್ತಲು ವಿಶೇಷ ತಯಾರಿ ಮತ್ತು ಸಲಕರಣೆ ಬೇಕು. ಉತ್ತಮ ತರಬೇತಿ ಆವಶ್ಯಕ. ಒಮ್ಮೊಮ್ಮೆ ಕಣ್ಣು ಕುರುಡಾಗಿಸುವಂಥ ಹಿಮಗಾಳಿ ಬೀಸುವುದುಂಟು. ಕೊರೆಯುವ ಚಳಿ ಇರುತ್ತದೆ. ಇದರಿಂದ ರಕ್ಷಣೆ ಪಡೆಯಲು ಕಣ್ಣಿಗೆ ಕನ್ನಡಕ, ಬೆಚ್ಚಗಿನ ಉಡುಪು ಧರಿಸಬೇಕು. ಒಮ್ಮೊಮ್ಮೆ ಹಿಮ ಮುಚ್ಚಿದ ಪರ್ವತದ ದೊಡ್ಡ ಭಾಗ ಜರಿದು ಎಲ್ಲರನ್ನೂ ಮುಚ್ಚಿಬಿಡುವುದುಂಟು. ಇಂಥ ಹಿಮಪಾತ, ಕೊರೆಯುವ ಬಿರುಸು ಹಿಮಗಾಳಿಯ ಜೊತೆಗೆ ಹಿಮ ನದಿಯೂ ಪರ್ವತಾರೋಹಿಗಳ ಪ್ರಾಣಕ್ಕೆ ಸಂಚಕಾರ ತರಬಲ್ಲದು. ಇವುಗಳಿಗಿಂತ ಹೆಚ್ಚು ಅಪಾಯಕಾರಿ ಎಂದರೆ ಮೇಲಕ್ಕೆ ಹೋದಂತ ಆಮ್ಲಜನಕದ ಆಭಾವ. ಉಸಿರಾಡಲು ತೊಂದರೆಯಾಗದಂತೆ 30ಪೌಂಡ್ ಭಾರದ ಆಮ್ಲಜನಕ ಸಿಲೆಂಡರನ್ನು ಪರ್ವತಾರೋಹಿಗಳು ತಮ್ಮೊಡನೆ ಕೊಂಡೊಯ್ಯುವರು.
ಹಿಮಕೂಡಲಿ ಒಂದು ಉಪಯುಕ್ತ ಸಾಧನ. ಒಂದು ಬದಿಯ ಚೂಪಾದ ಮನೆಯಿಂದ ಗಟ್ಟಿಯಾದ ಮಂಜುಗಡ್ಡ ಕಡಿಯಲು ಇನ್ನೊಂದು ಬದಿಯ ಅಗಲವಾದ ಬಾಚಿಯಂಥ ಭಾಗದಿಂದ ಮದುಹಿಮದಲ್ಲಿ ಮಟ್ಟಿಲು ನಿರ್ಮಿಸಲು ಅನುಕೂಲ. ಮೂರಡಿ ಉದ್ದದ ಕೊಡಲಿಯ ಹಿಡಿಯನ್ನು ನಡಗೋಲಾಗಿ ಬಳಸಲು ಅನುಕೂಲ.
ಇಳಿಜಾರು 55 ಡಿಗ್ರಿಗಿಂತ ಹೆಚ್ಚಿದ್ದರೆ ನೇರವಾಗಿ ಹತ್ತುವುದು ಕಷ್ಟ. ಈ ನೆಲದಲ್ಲಿ ಓರೆಕೋರೆಯಾಗಿ ದಾರಿ ಮಾಡಿ ಮೇಲಕ್ಕೇರುತ್ತಾರೆ. ಜಾರದಂತ ಪಾದರಕ್ಷೆಗಳ ಅಡಿಭಾಗಕ್ಕೆ ಕಟ್ಟಿಕೊಳ್ಳುವರು. ಪಾದಗಳನ್ನು ಮೇಲಕ್ಕೆ ಬಗ್ಗಿಸುವುದಕ್ಕಿಂತ ಕೆಳಕ್ಕೆ ಬಗ್ಗಿಸುವುದು ಸುಲಭ. ಆದ್ದರಿಂದ ಹಿಂದುಹಿಂದಕ್ಕೆ ನಡೆದು ಮೇಲೇರುವುದುಂಟು. ಪಾದರಕ್ಷೆ ಅಡಿಯ ಮೊಳೆ ಬಲವಾಗಿ ಕಚ್ಚಿಕೊಳ್ಳುತ್ತದೆ. ಹಿಮ ನೆಲ 64ಡಿಗ್ರಿಗಿಂತ ಹೆಚ್ಚು ಇಳಿಜಾರಾಗಿದ್ದರೆ ಮಟ್ಟಲು ನಿರ್ಮಿಸುವುದು ಅನಿವಾರ್ಯ. ಮೇಲಕ್ಕೆ ಹೋದಂತೆ ಇಳಿಜಾರು ಹೆಚ್ಚು. ಪರ್ವತಾರೋಹಿಗಳು ಉದ್ದವಾದ, ಬಲವಾದ ಹಗ್ಗಗಳನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಅದೇ ಹಗ್ಗದಿಂದ ತಂಡದ ಇತರ ಸದಸ್ಯರ ಸಂಪರ್ಕ ಪಡೆದಿರುತ್ತಾರೆ.
ಪರ್ವತ ಶಿಖರ ಏರುವವರು ಇಬ್ಬರು-ಮೂವರಾದರೂ ಆಹಾರ ಸಾಮಗ್ರಿ, ಡೇರ ನಿರ್ಮಾಣ ಸಲಕರಣೆ, ವೈಜ್ಞಾನಿಕ ಉಪಕರಣ ಇತ್ಯಾದಿ ಹೊರಲು ಅನೇಕರು ಸಹಾಯಕರಾಗಿ ಹೋಗುತ್ತಾರೆ. ತಂಡದ ಸ್ವಾಭಿಮಾನ ಮತ್ತು ಸಾಂಘಿಕ ಮನೋಭಾವ ಪರ್ವತಾರೋಹಣಕ್ಕೆ ಅತಿಮುಖ್ಯ.
ದಾರಿಯುದ್ದಕ್ಕೆ ಅಲ್ಲಲ್ಲಿ ಶಿಬಿರ ನಿರ್ಮಿಸಿಕೊಳ್ಳುತ್ತಾರೆ. ಸುಮಾರು 21,000 ಅಡಿ ಎತ್ತರ ತಲುಪಿದ ಪರ್ವತಾರೋಹಿಗಳ ಶಕ್ತಿ ಕುಂದುತ್ತದೆ. ಏರುವ ವೇಗ ಕಡಿಮೆಯಾಗುತ್ತದೆ. ಶಿಬಿರಗಳಲ್ಲಿ ವಿಶ್ರಾಂತಿ ಪಡೆದು ಶಿಖರವನ್ನು ಬೇಗ ಬೇಗ ಏರಲು ಸಿದ್ಧರಾಗುತ್ತಾರೆ. ಎತ್ತರದಲ್ಲಿ ನಿರ್ಮಿಸಿದ ಶಿಬಿರದವರು ಶೀಘ್ರ ಶಿಖರ ಹತ್ತಿ ಬೇಗನೆ ಹಿಂದೆ ಬರಲು ಪ್ರಯತ್ನಿಸುವರು.
ಷಿಯಿಂಗ್ ಗೊತ್ತಿದ್ದವರು ಅಧಿಕ ಶ್ರಮವಿಲ್ಲದ 23,000 ಅಡಿಗಳವರೆಗೆ ಮಂಜುಗಡ್ಡ ಪ್ರದೇಶವನ್ನು ದಾಟಬಹುದು. ಪರ್ವತದಲ್ಲಿರುವ ಉದ್ದ ಕಣಿವೆಯಲ್ಲಿ ಷಿಯಿಂಗ್ ಆಡಲೆಂದೇ ಪರ್ವತ ಹತ್ತುವವರೂ ಉಂಟು.
ಬೇಸಗೆಯ ಕೆಲವು ತಿಂಗಳು ಹಿಮಾಲಯ ಆರೋಹಣಕ್ಕೆ ಅನುಕೂಲ. ದಕ್ಷಿಣ ಭಾರತದ ಇತರ ಪರ್ವತ ಶ್ರೇಣಿಗಳನ್ನು ವರ್ಷದ ಯಾವ ತಿಂಗಳಲ್ಲಿ ಬೇಕಾದರೂ ಹತ್ತಬಹುದು.
COMMENTS