Illiteracy Essay in Kannada Language ಅನಕ್ಷರತೆ ಮೇಲೆ ಪ್ರಬಂಧ Anaksharate in Kannada Language: ಸಾಕ್ಷರತೆ ಎಂದರೆ ಅಕ್ಷರಜ್ಞಾನ, ಶಿಕ್ಷಣ ಅಥವಾ ಅಕ್ಷರಜ್ಞಾನವಿಲ್ಲದ ಅರಿವು ಅಪೂರ್ಣ, ಶಿಕ್ಷಣ ಎಲ್ಲ ನಾಗರಿಕರ ಹಕ್ಕು, ದೇಶದ ಅಭಿವೃದ್ಧಿ ಸಾಕ್ಷರತೆಯನ್ನು ಅವಲಂಬಿಸಿದೆ. ನಮ್ಮ ದೇಶದಲ್ಲಿ ದುಡಿಯುವ ಅನಕ್ಷರಸ್ಥರು ಒಂದು ಕಡೆ, ಸೋಮಾರಿಗಳಾದ ಅನಕ್ಷರಸ್ಥರು ಮತ್ತೊಂದು ಕಡೆ ಇದ್ದಾರೆ. ವಿದ್ಯೆ ಜ್ಞಾನವನ್ನು ನೀಡುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ; ಅವನತಿಯಿಂದ ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ನಮ್ಮ ದೇಶದ ರಾಜ್ಯಾಂಗದಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರುವಂತೆ ಸೂಚಿಸಲಾಗಿದೆ. ಆದರೂ ನಮ್ಮ ದೇಶದಲ್ಲಿ ಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಅನಕ್ಷರಸ್ಥರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.
Illiteracy Essay in Kannada Language: In this article, we are providing ಅನಕ್ಷರತೆ ಮೇಲೆ ಪ್ರಬಂಧ for students and teachers. Students can use this Anaksharate in Kannada Language to complete their homework.
Illiteracy Essay in Kannada Language ಅನಕ್ಷರತೆ ಮೇಲೆ ಪ್ರಬಂಧ Anaksharate in Kannada Language
1. ಸಾಕ್ಷರತೆಯ ಅರ್ಥ 2, ಅನಕ್ಷರತೆಗೆ ಕಾರಣಗಳು 3, ಅನಕ್ಷರತೆಯ ದುಷ್ಪರಿಣಾಮಗಳು 4. ವಯಸ್ಕರ ಶಿಕ್ಷಣ 5. ಸಾಕ್ಷರತಾ ಆಂದೋಲನ.
ಸಾಕ್ಷರತೆ ಎಂದರೆ ಅಕ್ಷರಜ್ಞಾನ, ಶಿಕ್ಷಣ ಅಥವಾ ಅಕ್ಷರಜ್ಞಾನವಿಲ್ಲದ ಅರಿವು ಅಪೂರ್ಣ, ಶಿಕ್ಷಣ ಎಲ್ಲ ನಾಗರಿಕರ ಹಕ್ಕು, ದೇಶದ ಅಭಿವೃದ್ಧಿ ಸಾಕ್ಷರತೆಯನ್ನು ಅವಲಂಬಿಸಿದೆ. ನಮ್ಮ ದೇಶದಲ್ಲಿ ದುಡಿಯುವ ಅನಕ್ಷರಸ್ಥರು ಒಂದು ಕಡೆ, ಸೋಮಾರಿಗಳಾದ ಅನಕ್ಷರಸ್ಥರು ಮತ್ತೊಂದು ಕಡೆ ಇದ್ದಾರೆ.
ವಿದ್ಯೆ ಜ್ಞಾನವನ್ನು ನೀಡುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ; ಅವನತಿಯಿಂದ ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ನಮ್ಮ ದೇಶದ ರಾಜ್ಯಾಂಗದಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರುವಂತೆ ಸೂಚಿಸಲಾಗಿದೆ. ಆದರೂ ನಮ್ಮ ದೇಶದಲ್ಲಿ ಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಅನಕ್ಷರಸ್ಥರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.
ಯಾರಿಗೆ ಯಾವುದೇ ಒಂದು ಭಾಷೆಯಲ್ಲಿ ಓದಲು-ಬರೆಯಲು ಬರುವುದಿಲ್ಲವೋ ಅವರು ಅನಕ್ಷರಸ್ಥರು, ಅನಕ್ಷರತೆಗೆ ಅನೇಕ ಕಾರಣಗಳಿವೆ..ಬಡತನ 2.ಅಜ್ಞಾನ 3. ಮೂಢನಂಬಿಕೆ 4.ಶಿಕ್ಷಣ ಸೌಲಭ್ಯದ ಕೊರತೆ 5.ಕು2೨೦ಬದ ಸಮಸ್ಯೆಗಳು 6. ಕಠಿಣವಾದ ಶಾಸನವಿಲ್ಲದಿರುವುದು 7. ಅನಕ್ಷರಸ್ಥ ಕುಟುಂಬ 8. ಶಿಕ್ಷಣದ ಮಹತ್ವದ ಅರಿವಿಲ್ಲದಿರುವುದು 9. ಅನಾರೋಗ್ಯ 10. ಮಕ್ಕಳ ಅನಾಸಕ್ತಿ 11. ದುಬಾರಿ ವೆಚ್ಚದ ಶಿಕ್ಷಣ. 12. ಪರಿಣಾಮಕಾರಿ ಬೋಧನೆ ಇಲ್ಲದಿರುವುದು ಇತ್ಯಾದಿ.
ಅನಕ್ಷರತೆ ವೈಯಕ್ತಿಕ ಮತ್ತು ಸಾಮೂಹಿಕವಾಗಿ ಆತಂಕವನ್ನುಂಟುಮಾಡುತ್ತದೆ. ಇದು ವ್ಯಕ್ತಿಯ, ದೇಶದ ಹಿತಕ್ಕೆ ಮಾರಕವಾಗುತ್ತದೆ. ಅನಕ್ಷರತೆಯ ದುಷ್ಪರಿಣಾಮ ವೆಂದರೆ 1. ಅಜ್ಞಾನಕ್ಕೆ ಕಾರಣ, 2. ಅಕ್ಷರಸ್ಥರನ್ನು ಓದು, ಬರಹಗಳಿಗಾಗಿ ಆಶ್ರಯಿಸ ಬೇಕು. 3. ಮೋಸ, ವಂಚನೆ, ಶೋಷಣೆಗೆ ತುತ್ತಾಗಬೇಕಾಗುತ್ತದೆ. 4. ವೈಜ್ಞಾನಿಕ ಮನೋಭಾವ ಬೆಳೆಯುವುದಿಲ್ಲ.5. ಅನಕ್ಷರಸ್ಥರ ಅಜ್ಞಾನವನ್ನು ಬೇರೆಯವರು ದುರುಪ ಯೋಗಪಡಿಸಿಕೊಳ್ಳುವ ಸಂಭವವಿದೆ.6. ಪ್ರಜಾಪ್ರಭುತ್ವಕ್ಕೆ ಮಾರಕ.7.ಹೆಬ್ಬೆಟ್ಟಿನ ಸಹಿ ಬಾಳಿಗೆ ಕಹಿ. 8. ಪ್ರತಿಭೆ ಬೆಳಕಿಗೆ ಬರುವುದಿಲ್ಲ. 9. ಕುಟುಂಬ ಯೋಜನೆ ಕುಂಠಿತವಾಗುತ್ತದೆ. 10. ಯಾವುದೇ ಯೋಜನೆ ಫಲಿಸದು. 11. ಗಾಳಿಸುದ್ದಿಯಿಂದ ತಪ್ಪುದಾರಿಗೆ ಎಳೆಯಲಾಗುತ್ತದೆ.
ಕ್ರಮಬದ್ಧ ಶಿಕ್ಷಣದಿಂದ ವಂಚಿತರಾದ ವಯಸ್ಕರಿಗೆ ಅವರ ಬಿಡುವಿನ ವೇಳೆಯಲ್ಲಿ ಶಿಕ್ಷಣಕೊಡುವ ವ್ಯವಸ್ಥೆ ನಮ್ಮ ದೇಶದಲ್ಲಿ 1978ರಿಂದಲೇ ಪ್ರಾರಂಭವಾಯಿತು. ಹಳ್ಳಿ-ನಗರಗಳಲ್ಲಿ 'ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಇದು ಪರಿಣಾಮಕಾರಿಯಾಗದಿರುವುದರಿಂದ ದೇಶದಾದ್ಯಂತ ಈಗ 'ಸಾಕ್ಷರತಾ ಆಂದೋಲನ' ಹಮ್ಮಿಕೊಳ್ಳಲಾಗಿದೆ. ಇದರಿಂದ ಅನಕ್ಷರಸ್ಥರು ಅನುಕೂಲಕರ ಸ್ಥಳ, ಸಮಯದಲ್ಲಿ ಓದು ಬರಹ ಕಲಿಯಬಹುದು. ತುಂಬ ದೂರ ಹೋಗಬೇಕಿಲ್ಲ. ಓದು-ಬರಹದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ತರಬೇತಿ ಪಡೆದ ಸ್ವಯಂಸೇವಕರು ಕಲಿಸುವ ಜವಾಬ್ದಾರಿ ಹೊತ್ತಿದ್ದಾರೆ.
ಸಾಕ್ಷರತಾ ಆಂದೋಲನದ ಉದ್ದೇಶಗಳು ಹಲವಾರು. ಅಕ್ಷರಜ್ಞಾನ ಕೊಡುವುದು. ಕ್ರಿಯಾಶೀಲತೆಯನ್ನು ಬೆಳೆಸುವುದು. ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿ ಶಿಕ್ಷಣದ ಮಹತ್ವವನ್ನು ಮನಗಾಣಿಸುವುದು. ನಾಗರಿಕ ಹಕ್ಕು ಮತ್ತು ಕರ್ತವ್ಯವನ್ನು ತಿಳಿಸುವುದು, ಮೋಸ, ವಂಚನೆ, ಶೋಷಣೆಯಿಂದ ಮುಕ್ತಿಗೊಳಿಸುವುದು. ಆರೋಗ್ಯ, ಕುಟುಂಬ ಕಲ್ಯಾಣ, ಉಳಿತಾಯ ಇತ್ಯಾದಿಗಳ ಬಗ್ಗೆ ವಿವರ ತಿಳಿಸುವುದು. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅಣಿಗೊಳಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸಿ ಮೂಢನಂಬಿಕೆಗಳಿಂದ ದೂರವಿಡುವುದು. ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು. ಸಾಕ್ಷರತಾ ಆಂದೋಲನ ಯಶಸ್ವಿಯಾಗಬೇಕಾದರೆ ಸರ್ವರೂ ಪ್ರಾಮಾಣಿಕವಾಗಿ ಸಹಕರಿಸಬೇಕು.
COMMENTS