Essay on Puppet Show in Kannada Language ಸೂತ್ರದ ಗೊಂಬೆ ಆಟ ಬಗ್ಗೆ ಪ್ರಬಂಧ: ಸೂತ್ರದ ಗೊಂಬೆ ಆಟ ಜನಪದ ನಾಟಕ ಪ್ರಕಾರಗಳಲ್ಲಿ ಒಂದು. ಈ ಕಲೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಪೌರಾಣಿಕ ಮತ್ತು ಇತರ ಕಥೆಗಳು ಇದರಲ್ಲಿ ಪ್ರದರ್ಶಿತವಾಗುತ್ತವೆ. ಇತ್ತೀಚೆಗೆ ಸಾಮಾಜಿಕ ವಸ್ತುಗಳನ್ನು ಕಥೆಯ ರೂಪದಲ್ಲಿ ಸೂತ್ರದ ಗೊಂಬೆ ಆಟದಲ್ಲಿ ತೋರಿಸುತ್ತಿದ್ದಾರೆ. ಭಾರತದಲ್ಲಿ ಇಂದಿಗೂ ಸೂತ್ರದ ಗೊಂಬೆ ಆಟ ಜೀವಂತವಾಗಿದೆ. ಮನರಂಜನೆ, ಪ್ರಚಾರ, ಶಿಕ್ಷಣ-ಮುಂತಾದವುಗಳಿಗೆ ಉಪಯೋಗಿಸಲಾಗುತ್ತಿದೆ. ಜನಸಾಮಾನ್ಯರಿಗೆ ಬೇರೆ ಬೇರೆ ವಿಷಯಗಳಲ್ಲಿ ತಿಳಿವಳಿಕೆ ಕೊಡುವ ಉದ್ದೇಶದಿಂದಲೂ ಸಹ ಈ ಆಟದ ಪ್ರಯೋಗ ನಡೆಯುತ್ತಿದೆ. ಅಮೆರಿಕ ವಿಶ್ವವಿದ್ಯಾಲಯವೊಂದರಲ್ಲಿ ಗೊಂಬೆ ಆಟವನ್ನು ಅಧ್ಯಯನದ ಒಂದು ಪ್ರಧಾನ ವಿಷಯವನ್ನಾಗಿ ಮಾಡಿದ್ದಾರೆ. ಆಟ ಆಡಿಸುವವರ ಒಂದು ಅಂತರರಾಷ್ಟ್ರೀಯ ಸಂಘವೂ ಇದೆ. ಉತ್ತರ ಅಮೆರಿಕದಲ್ಲಿ ಇದನ್ನು ಕುರಿತು ಒಂದು ಮಾಸಪತ್ರಿಕ ಸಹ ಪ್ರಕಟವಾಗುತ್ತಿದೆ. ಆಟವನ್ನು ಆಡಿಸಲು ಹಲವಾರು ರಾಷ್ಟ್ರಗಳಲ್ಲಿ ರಂಗಮಂದಿರಗಳಿವೆ.
Essay on Puppet Show in Kannada Language: In this article, we are providing ಪರ್ವತಾರೋಹಣ ಬಗ್ಗೆ ಪ್ರಬಂಧ for students and teachers. Students can use this Mountaineering Essay on Puppet Show in Kannada Language to complete their homework.
ಸೂತ್ರದ ಗೊಂಬೆ ಆಟ ಬಗ್ಗೆ ಪ್ರಬಂಧ Essay on Puppet Show in Kannada Language
1.ಪರಿಚಯ 2.ಭಾರತದಲ್ಲಿ ಸೂತ್ರದ ಗೊಂಬೆ 3.ಗೊಂಬೆಯಾಟದ ಸಿದ್ಧತೆ ಮತ್ತು ಅಭಿನಯ. 4. ಉಪಸಂಹಾರ
ಸೂತ್ರದ ಗೊಂಬೆ ಆಟ ಜನಪದ ನಾಟಕ ಪ್ರಕಾರಗಳಲ್ಲಿ ಒಂದು. ಈ ಕಲೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಪೌರಾಣಿಕ ಮತ್ತು ಇತರ ಕಥೆಗಳು ಇದರಲ್ಲಿ ಪ್ರದರ್ಶಿತವಾಗುತ್ತವೆ. ಇತ್ತೀಚೆಗೆ ಸಾಮಾಜಿಕ ವಸ್ತುಗಳನ್ನು ಕಥೆಯ ರೂಪದಲ್ಲಿ ಸೂತ್ರದ ಗೊಂಬೆ ಆಟದಲ್ಲಿ ತೋರಿಸುತ್ತಿದ್ದಾರೆ.
ಭಾರತದಲ್ಲಿ ಇಂದಿಗೂ ಸೂತ್ರದ ಗೊಂಬೆ ಆಟ ಜೀವಂತವಾಗಿದೆ. ಮನರಂಜನೆ, ಪ್ರಚಾರ, ಶಿಕ್ಷಣ-ಮುಂತಾದವುಗಳಿಗೆ ಉಪಯೋಗಿಸಲಾಗುತ್ತಿದೆ. ಜನಸಾಮಾನ್ಯರಿಗೆ ಬೇರೆ ಬೇರೆ ವಿಷಯಗಳಲ್ಲಿ ತಿಳಿವಳಿಕೆ ಕೊಡುವ ಉದ್ದೇಶದಿಂದಲೂ ಸಹ ಈ ಆಟದ ಪ್ರಯೋಗ ನಡೆಯುತ್ತಿದೆ. ಅಮೆರಿಕ ವಿಶ್ವವಿದ್ಯಾಲಯವೊಂದರಲ್ಲಿ ಗೊಂಬೆ ಆಟವನ್ನು ಅಧ್ಯಯನದ ಒಂದು ಪ್ರಧಾನ ವಿಷಯವನ್ನಾಗಿ ಮಾಡಿದ್ದಾರೆ. ಆಟ ಆಡಿಸುವವರ ಒಂದು ಅಂತರರಾಷ್ಟ್ರೀಯ ಸಂಘವೂ ಇದೆ. ಉತ್ತರ ಅಮೆರಿಕದಲ್ಲಿ ಇದನ್ನು ಕುರಿತು ಒಂದು ಮಾಸಪತ್ರಿಕ ಸಹ ಪ್ರಕಟವಾಗುತ್ತಿದೆ. ಆಟವನ್ನು ಆಡಿಸಲು ಹಲವಾರು ರಾಷ್ಟ್ರಗಳಲ್ಲಿ ರಂಗಮಂದಿರಗಳಿವೆ.
ಗೊಂಬೆ ಆಡಿಸುವವರು ಒಂದು ಪರದೆಯ ಹಿಂದೆ ನಿಂತಿರುತ್ತಾರೆ. ಅವರು ಆಡಿಸುವ ಬೊಂಬೆಗಳು ಪರದೆಯ ಮುಂಭಾಗದಲ್ಲಿರುತ್ತವೆ. ಗೊಂಬೆಗಳ ಅಂಗಾಗಗಗಳಿಗೆ ಕಟ್ಟಿದ ದಾರಗಳನ್ನು ಗೊಂಬೆ ಆಡಿಸುವವರು ಹಿಡಿದಿರುತ್ತಾರೆ. ಇವರ ಕರಕೌಶಲ್ಯ ತುಂಬ ಅದ್ಭುತವಾದದ್ದು. ನಾಟಕದಲ್ಲಿ ಮನುಷ್ಯರು ಬೇರೆ ಬೇರೆ ಪಾತ್ರಗಳನ್ನು ವಹಿಸುವಂತೆ ಗೊಂಬೆ ಆಟದಲ್ಲಿ ಗೊಂಬೆಗಳು ಪಾತ್ರ ವಹಿಸುತ್ತವೆ. ಇದು ನಾಟಕದಷ್ಟೇ ಪರಿಣಾಮಕಾರಿಯಾಗಿರುತ್ತದೆ. ಗೊಂಬೆಗಳ ಅಂಗಾಂಗ ಚಲನೆ, ಹಿನ್ನೆಲೆ ಸಂಗೀತ, ಮಾತುಗಾರಿಕೆಯಿಂದ ಸೂತ್ರದ ಗೊಂಬೆಯಾಟದಲ್ಲಿ ಸನ್ನಿವೇಶಕ್ಕೆ ಅನುಗುಣವಾದ ರಸಭಾವಗಳನ್ನು ಸಾಧಿಸಲಾಗುತ್ತದೆ.
ಸೂತ್ರದ ಗೊಂಬೆ ಆಟದಲ್ಲಿ ಸೂತ್ರದಿಂದ ಆಡಿಸುವ ಗೊಂಬೆ, ಸರಳುಗಳಿಂದ ಆಡಿಸುವ ಗೊಂಬೆ, ಕೈಗವಸು ಬೊಂಬೆ ಎಂದು ಹಲವು ಬಗೆಯವು ಇವೆ. ಸೂತ್ರದ ಗೊಂಬೆಯಲ್ಲಿ ಗೊಂಬೆಗಳನ್ನು ದಾರದಿಂದ ಆಡಿಸಲಾಗುತ್ತದೆ. ಗೊಂಬೆಯ ಅಂಗಾಂಗಗಳು ಕೀಲುಗಳಿಂದ ಬಂಧಿಸಲ್ಪಟ್ಟಿರುತ್ತವೆ, ಗೊಂಬೆಯ ಅಂಗಾಂಗಗಳಿಗೂ, ಕಳಗಿನ ದವಡೆಗಳಿಗೂ ಪೊಳ್ಳಾದ ಬೊಂಬೆಯ ಒಳಭಾಗದ ದಾರಗಳನ್ನು ತಗುಲಿಸಿರುತ್ತಾರೆ. ಈ ದಾರಗಳನ್ನು ಬೊಂಬೆಯ ತಲೆಯ ಮೇಲೆ, ಬೆತ್ತ ಅಥವಾ ಲೋಹದಿಂದ ಮಾಡಲ್ಪಟ್ಟ ಚಕ್ರಕ್ಕೆ ಕಟ್ಟಿರುತ್ತಾರೆ. ಸಂಬಂಧಪಟ್ಟ ದಾರಗಳನ್ನು ಎಳೆಯುವುದರ ಮೂಲಕ ಬೊಂಬೆಯನ್ನು ಬೇಕಾದಂತ ಕುಣಿಸುತ್ತಾರೆ. ಬೆತ್ತ, ಲೋಹಗಳಿಗೆ ಬದಲಾಗಿ, ಪದರ ಹಲಗೆಯನ್ನು ಬಳಸುವುದುಂಟು. ಮುಖ್ಯ ನಿಯಂತ್ರಣವನ್ನು ಎಡಗೈಯಲ್ಲಿ ಹಿಡಿದಿರುತ್ತಾರೆ. ಗೊಂಬೆಯ ಕೈಕಾಲು, ತಲೆಯ ಪಾರ್ಶ್ವಗಳು, ಬೆನ್ನು-ಹೀಗೆ ಬೊಂಬೆಯ ಎಲ್ಲ ಭಾಗಗಳಿಗೂ ಬೇರೆ ಬೇರೆ ನಿಯಂತ್ರಕ ದಾರಗಳಿದ್ದು ಅವನ್ನು ಬೇಕಾದಂತೆ ಎಳೆಯಬಹುದು. ಸೂತ್ರದ ಗೊಂಬೆಗಳನ್ನು ಆಡಿಸುವವರು ಪರದೆಯ ಹಿಂದೆ ನಿಂತು ಬೊಂಬೆಗಳನ್ನು ರಂಗಕ್ಕೆ ಇಳಿಸುತ್ತಾರೆ. ಅನಂತರ ಕಥಾಸಂದರ್ಭಕ್ಕೆ ತಕ್ಕಂತೆ ಗೊಂಬೆಗಳು ಚಲಿಸುವಂತೆ ಮಾಡಲು ತಾವು ಹಿಡಿದಿರುವ ದಾರಗಳನ್ನು ಎಳೆಯುತ್ತಾರೆ. ಇದರಿಂದ ಗೊಂಬೆಗಳಲ್ಲಿ ಕೈ, ಕಾಲು, ತಲೆ ಇತ್ಯಾದಿ ಅಂಗಗಳಲ್ಲಿ ಚಲನೆ ಉಂಟಾಗುತ್ತದೆ. ಒಂದೊಂದು ಗೊಂಬೆಗೂ ಸಂಬಂಧಿಸಿದಂತೆ ಹಲವಾರು ದಾರಗಳಿರುವುದರಿಂದ ಆಡಿಸುವವರು ತಮ್ಮ ಎಲ್ಲ ಬೆರಳುಗಳಲ್ಲೂ ಸೂತ್ರವನ್ನು ಹಿಡಿದು ಗೊಂಬೆಯಾಡಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಚಲನೆಗಳು ಯಾವುವೆಂಬ ನೆನಪು, ಏಕಾಗ್ರತೆ ಬೇಕಾಗುತ್ತದೆ.
ಹಿನ್ನೆಲೆ ಸಂಗೀತ, ಹಾಡುಗಾರಿಕೆ ಗೊಂಬೆಗಳ ಅಭಿನಯಕ್ಕೆ ಪೋಷಕವಾಗುತ್ತದೆ. ಮಾತುಗಳ ಭಾವಕ್ಕೆ ಅನುಗುಣವಾಗಿ ಗೊಂಬೆಗಳ ಅಭಿನಯ ನಡೆಯುತ್ತದೆ. ಗೊಂಬೆ ಆಟಕ್ಕೆ ತಗುಲುವ ವೆಚ್ಚ ಕಡಿಮೆಯಿರುತ್ತದೆ. ರಂಗಭೂಮಿ ತುಂಬ ದೊಡ್ಡದಾಗಿರಬೇಕಿಲ್ಲ.
COMMENTS