Essay on Physical Education in Kannada Language: In this article, we are providing ದೈಹಿಕ ಶಿಕ್ಷಣದ ಮಹತ್ವ ಪ್ರಬಂಧ for students and teachers. Students can use this Essay on Physical Education in Kannada Language to complete their homework. ದೈಹಿಕ ಆರೋಗ್ಯ, ವ್ಯಕ್ತಿತ್ವ ನಿರ್ಮಾಣ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಶಾರೀರಿಕ ಚಟುವಟಿಕೆಗಳ ಮೂಲಕ ಸಾಧಿಸುವುದು ದೈಹಿಕ ಶಿಕ್ಷಣದ ಪ್ರಧಾನ ಉದ್ದೇಶ. ದೈಹಿಕ ಶಿಕ್ಷಣದ ಚಟುವಟಿಕೆಗಳಲ್ಲಿ ಅಂಗಸಾಧನೆ ಒಂದು ಪ್ರಮುಖ ಅಂಶ. ಇದರಲ್ಲಿ ಮೈಕಟ್ಟನ್ನು ಸುಂದರಗೊಳಿಸಿ, ಅಂಗ ಠೀವಿಯನ್ನು ಬೆಳೆಸಿಕೊಳ್ಳುವ ಮತ್ತು ಸಾಮರ್ಥ್ಯವನ್ನು ಸರಿಪಡಿಸಿಕೊಳ್ಳುವ ಗುಣವಿದೆ. ಮೈಯಲ್ಲಿ ಅಥವಾ ಉಪಕರಣ ಬಳಸಿ ಮಾಡಬಹುದಾದ ಅನೇಕ ಅಂಗಸಾಧನೆಯ ಚಟುವಟಿಕೆಗಳಿವೆ. ದೈಹಿಕ ಶಿಕ್ಷಣದ ಇನ್ನೊಂದು ಅಂಗವೆಂದರೆ ಆಟಗಳು, ಓಡುವುದು, ನೆಗೆಯುವುದು, ಹಾರುವುದು, ಹೊಡೆಯುವುದು, ಹಿಡಿಯುವುದು-ಇವೆಲ್ಲವೂ ಬೇರೆ ಬೇರೆ ನೈಸರ್ಗಿಕ ಚಲನೆಗಳನ್ನೊಳಗೊಂಡ ಚಟುವಟಿಕೆಗಳು,
Essay on Physical Education in Kannada Language: In this article, we are providing ದೈಹಿಕ ಶಿಕ್ಷಣದ ಮಹತ್ವ ಪ್ರಬಂಧ for students and teachers. Students can use this Essay on Physical Education in Kannada Language to complete their homework.
ದೈಹಿಕ ಶಿಕ್ಷಣದ ಮಹತ್ವ ಪ್ರಬಂಧ Essay on Physical Education in Kannada Language
1.ದೈಹಿಕ ಶಿಕ್ಷಣದ ಉದ್ದೇಶ 2.ದೈಹಿಕ ಶಿಕ್ಷಣದ ಪ್ರಧಾನ ಅಂಶಗಳು 3.ಮಾನಕ ಆಟಗಳು 4. ಆಟಗಳ ವರ್ಗಿಕರಣ 5. ದೈಹಿಕ ಶಿಕ್ಷಣ ಬೆಳೆದು ಬಂದ ದಾರಿ.
ದೈಹಿಕ ಆರೋಗ್ಯ, ವ್ಯಕ್ತಿತ್ವ ನಿರ್ಮಾಣ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಶಾರೀರಿಕ ಚಟುವಟಿಕೆಗಳ ಮೂಲಕ ಸಾಧಿಸುವುದು ದೈಹಿಕ ಶಿಕ್ಷಣದ ಪ್ರಧಾನ ಉದ್ದೇಶ.
ದೈಹಿಕ ಶಿಕ್ಷಣದ ಚಟುವಟಿಕೆಗಳಲ್ಲಿ ಅಂಗಸಾಧನೆ ಒಂದು ಪ್ರಮುಖ ಅಂಶ. ಇದರಲ್ಲಿ ಮೈಕಟ್ಟನ್ನು ಸುಂದರಗೊಳಿಸಿ, ಅಂಗ ಠೀವಿಯನ್ನು ಬೆಳೆಸಿಕೊಳ್ಳುವ ಮತ್ತು ಸಾಮರ್ಥ್ಯವನ್ನು ಸರಿಪಡಿಸಿಕೊಳ್ಳುವ ಗುಣವಿದೆ. ಮೈಯಲ್ಲಿ ಅಥವಾ ಉಪಕರಣ ಬಳಸಿ ಮಾಡಬಹುದಾದ ಅನೇಕ ಅಂಗಸಾಧನೆಯ ಚಟುವಟಿಕೆಗಳಿವೆ. ದೈಹಿಕ ಶಿಕ್ಷಣದ ಇನ್ನೊಂದು ಅಂಗವೆಂದರೆ ಆಟಗಳು, ಓಡುವುದು, ನೆಗೆಯುವುದು, ಹಾರುವುದು, ಹೊಡೆಯುವುದು, ಹಿಡಿಯುವುದು-ಇವೆಲ್ಲವೂ ಬೇರೆ ಬೇರೆ ನೈಸರ್ಗಿಕ ಚಲನೆಗಳನ್ನೊಳಗೊಂಡ ಚಟುವಟಿಕೆಗಳು,
ಆಟಗಳನ್ನು ಚಿಕ್ಕಪುಟ್ಟ ಆಟಗಳು, ಪೂರಕ ಆಟಗಳು, ರಿಲೇ ಆಟಗಳು ಮತ್ತು ಕ್ರಿಕೆಟ್, ಫುಟ್‌ಬಾಲ್‌ಗಳಂಥ ಮಾನಕ ಆಟಗಳು ಎಂದು ವರ್ಗಿಕರಿಸಬಹುದು. ಇಂಥ ಮಾನಕ ಆಟಗಳಿಂದ ಶಾರೀರಿಕ ಕೌಶಲ್ಯ ಹೆಚ್ಚುತ್ತದೆ. ಮನಸ್ಸಿನ ಉಲ್ಲಾಸದ ಜೊತೆಗೆ ನಾಯಕತ್ವ, ಆಜ್ಞಾಪಾಲನೆ, ಹೋರಾಟ ಮನೋಭಾವ, ಸೋಲನ್ನು ಎದುರಿಸುವ ಶಕ್ತಿ ಮುಂತಾದ ಗುಣಗಳು ಬೆಳೆಯುತ್ತವೆ.
ದೈಹಿಕ ಶಿಕ್ಷಣದಲ್ಲಿ ತಾಳಬದ್ದ ಚಟುವಟಿಕೆಗಳಲ್ಲಿ ಸಹ ಸೇರಿವೆ. ಕೂಚು, ಲೆಜೀಮ್, ಹಾಡಿನ ಆಟ, ಜಾನಪದ ಕುಣಿತ, ಕೋಲಾಟ ಇತ್ಯಾದಿ ಚಟುವಟಿಕೆಗಳೂ ಸೇರಿವೆ. ತಾಳಬದ್ದವಾಗಿ ಮಾಡುವ ಕೆಲವು ಅಂಗಸಾಧನೆಗಳು ಈ ವರ್ಗಕ್ಕೆ ಸೇರುತ್ತವೆ. ದೈಹಿಕ ಶಿಕ್ಷಣದಲ್ಲಿ ಹೋರಾಟದ ಚಟುವಟಿಕೆಗಳಿಗೂ ಸ್ಥಾನವಿದೆ. ಇದರಿಂದ ನಿಯಮಬದ್ದ ಹೋರಾಟ ಪ್ರವೃತ್ತಿ, ಶೀಘ್ರ ನಿರ್ಣಯ, ಸಹನ ಶಕ್ತಿ ಬೆಳೆಯುತ್ತದೆ. ವ್ಯಕ್ತಿಗಳ ಮಧ್ಯೆ ನಡೆಯುವ ಹೋರಾಟಗಳೆಂದರೆ ಕುಸ್ತಿ, ಜೂಡೋ, ಮಲ್ಲಯುದ್ದ ಐಕಿಡೋ-ಮುಂತಾದುವುಗಳು, ಉಪಕರಣ ರಹಿತ ದ್ವಂದ್ವ ಲಾಠಿ, ಖಡ್ಗ, ದಂಡ ಮುಂತಾದ ಹೋರಾಟದಲ್ಲಿ ಉಪಕರಣ ಸಹಿತ ದ್ವಂದ್ವಗಳು, ಈಜು, ಮುಳುಗು, ಜಲ, ಪೋಲೋ, ದೋಣಿಯಾನ ಇತ್ಯಾದಿ ನೀರಿನಲ್ಲಿನ ಚಟುವಟಿಕೆಗಳನ್ನು ದೈಹಿಕ ಶಿಕ್ಷಣದಲ್ಲಿ ವಿಶಿಷ್ಟವಾಗಿ ಬಳಸಬಹುದು. ಶಾರೀರಿಕ ಚಟುವಟಿಕೆಗಳನ್ನು ಪ್ರದರ್ಶನ, ಮೇಲಾಟ ಅಥವಾ ಪಂದ್ಯ ಎಂದು ಪ್ರತ್ಯೇಕ ಮಾಡಬಹುದು.
ಪ್ರಾಚೀನ ಸಂಸ್ಕೃತಿಗಳಲ್ಲಿ ದೈಹಿಕ ಶಿಕ್ಷಣಕ್ಕೆ ಮಹತ್ವವಿದ್ದಿತು. ಭಾರತದಲ್ಲಿ ವೇದಕಾಲದಲ್ಲಿ ದೈಹಿಕ ಶಿಕ್ಷಣಕ್ಕೆ ಆದ್ಯತೆಯಿತ್ತು. ನಲಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ದೈಹಿಕ ಶಿಕ್ಷಣವನ್ನು ಕ್ರಮಬದ್ದಗೊಳಿಸಲಾಗಿತ್ತು. ರಜಪೂತರು, ಮರಾಠರು ಕ್ಷಾತ್ರ ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಕುಸ್ತಿ ಮುಂತಾದ ಅಂಗಸಾಧನೆಯ ಆಖಾಡಗಳನ್ನು ನಿರ್ಮಿಸಿದ್ದರು. ಮುಸಲ್ಮಾನರ ಆಳ್ವಿಕೆಯ ಕಾಲದಲ್ಲಿ ಕುಸ್ತಿ, ಮುಷ್ಟಿಯುದ್ದ, ಈಜು, ಬೇಟೆ, ಗೂಳಿ ಕಾಳಗಗಳ ಸ್ಪರ್ಧೆ ನಡೆಯುತ್ತಿದ್ದವು. ಪರ್ಷಿಯಾದಿಂದ ಮಲ್ಲರು ಭಾರತಕ್ಕೆ ಬಂದು ಕುಸ್ತಿ ನಡೆಸಿದ ದಾಖಲೆಗಳೂ ಇವೆ.
ಗ್ರೀಸ್ ರಾಜ್ಯದಲ್ಲಿ ದೈಹಿಕ ಶಿಕ್ಷಣ ವ್ಯವಸ್ಥಿತ ಕ್ರೀಡೋತ್ಸವಗಳಿಗೆ ಅವಕಾಶ ಮಾಡಿಕೊಟ್ಟಿತು. ರೋಮನರೂ ಸೈನಿಕರೂ, ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದರು. 19ನೇ ಶತಮಾನದಲ್ಲಿ ಯೂರೋಪಿನಲ್ಲಿ ಕ್ರೀಡೆಗಳು ಜನಪ್ರಿಯಗೊಂಡವು, ಶಾಲೆ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣದ ಮಹತ್ವ ಹೆಚ್ಚಿತು. ಬ್ರಿಟಿಷರ ಕಾಲದಲ್ಲಿ ಪಾಶ್ಚಾತ್ಯ ಕ್ರೀಡೆಗಳು ಮತ್ತು ದೈಹಿಕ ಶಿಕ್ಷಣ ಪದ್ಧತಿಯನ್ನ ಭಾರತದಲ್ಲಿ ಪ್ರಚಾರ ಮಾಡಲಾಯಿತು.
COMMENTS