ನನ್ನ ನೆಚ್ಚಿನ ಹವ್ಯಾಸ ಅಂಚೆ ಚೀಟಿ ಸಂಗ್ರಹ ಪ್ರಬಂಧ Essay on My favourite Hobby Stamb Collection in Kannada Language: ಮಕ್ಕಳು ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅಂಚೆ ಚೀಟಿ ಸಂಗ್ರಹ ಹವ್ಯಾಸ ಒಳ್ಳೆಯದು. ಜಗತ್ತಿನ ಪ್ರಥಮ ಅಂಚೆಚೀಟಿ 1840ರಲ್ಲಿ ಬಿಡುಗಡೆಯಾಯಿತು. ಅದರ ಹೆಸರು 'ಪಬ್ಲಾಕ್', ಅದರ ಬೆಲೆ ಒಂದು ಪನ್ನಿ. ವಿಕ್ಟೋರಿಯಾ ರಾಣಿಯ ಚಿತ್ರವಿದೆ. ಅಂದಿನಿಂದ ಬೇರೆ ಕೆಲವು ದೇಶಗಳು ಅಂಚೆಚೀಟಿ ಪದ್ಧತಿ ಅನುಸರಿಸಿದವು. ಇಂದು ದೇಶ-ವಿದೇಶಗಳ ಕಲೆ, ಸಾಹಿತ್ಯ, ಸಂಸ್ಕೃತಿ, ಭೂಗೋಳ, ಇತಿಹಾಸ, ಕೈಗಾರಿಕೆ ಹೀಗೆ ಅನೇಕ ವಿಷಯಗಳು ಅದರಲ್ಲಿ ಒಡಮೂಡಿವೆ. ಮಕ್ಕಳ ಕಥೆಯ ಘಟನೆಯಿಂದ ಹಿಡಿದು ಚಂದ್ರಲೋಕ ಯಾತ್ರ, ವಿಶ್ವಸಂಸ್ಥೆ, ಒಲಿಂಪಿಕ್ಸ್ ಕ್ರೀಡೆ ಇತ್ಯಾದಿ ವಿಷಯಗಳ ಅಂಚೆಚೀಟಿಯೂ ಹೊರಬಂದಿವೆ.
Essay on My favourite Hobby Stamp Collection in Kannada Language: In this article, we are providing ನನ್ನ ನೆಚ್ಚಿನ ಹವ್ಯಾಸ ಅಂಚೆ ಚೀಟಿ ಸಂಗ್ರಹ ಪ್ರಬಂಧ for students and teachers. Students can use this Essay on My favourite Hobby Stamp Collection in Kannada Language to complete their homework.
ನನ್ನ ನೆಚ್ಚಿನ ಹವ್ಯಾಸ ಅಂಚೆ ಚೀಟಿ ಸಂಗ್ರಹ ಪ್ರಬಂಧ Essay on My favourite Hobby Stamb Collection in Kannada Language
ಅಂಚೆಚೀಟಿ ಸಂಗ್ರಹ 1. ವಿವರಣೆ 2. ಉಗಮ ಮತ್ತು ಬೆಳೆದು ಬಂದ ಬಗೆ 3, ಸಂಗ್ರಹ ಮತ್ತು ವರ್ಗಿಕರಣ 4. ಕಾಪಾಡುವುದು. 5. ಉಪಸಂಹಾರ.
ಮಕ್ಕಳು ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅಂಚೆ ಚೀಟಿ ಸಂಗ್ರಹ ಹವ್ಯಾಸ ಒಳ್ಳೆಯದು. ಜಗತ್ತಿನ ಪ್ರಥಮ ಅಂಚೆಚೀಟಿ 1840ರಲ್ಲಿ ಬಿಡುಗಡೆಯಾಯಿತು. ಅದರ ಹೆಸರು 'ಪಬ್ಲಾಕ್', ಅದರ ಬೆಲೆ ಒಂದು ಪನ್ನಿ. ವಿಕ್ಟೋರಿಯಾ ರಾಣಿಯ ಚಿತ್ರವಿದೆ. ಅಂದಿನಿಂದ ಬೇರೆ ಕೆಲವು ದೇಶಗಳು ಅಂಚೆಚೀಟಿ ಪದ್ಧತಿ ಅನುಸರಿಸಿದವು. ಇಂದು ದೇಶ-ವಿದೇಶಗಳ ಕಲೆ, ಸಾಹಿತ್ಯ, ಸಂಸ್ಕೃತಿ, ಭೂಗೋಳ, ಇತಿಹಾಸ, ಕೈಗಾರಿಕೆ ಹೀಗೆ ಅನೇಕ ವಿಷಯಗಳು ಅದರಲ್ಲಿ ಒಡಮೂಡಿವೆ. ಮಕ್ಕಳ ಕಥೆಯ ಘಟನೆಯಿಂದ ಹಿಡಿದು ಚಂದ್ರಲೋಕ ಯಾತ್ರ, ವಿಶ್ವಸಂಸ್ಥೆ, ಒಲಿಂಪಿಕ್ಸ್ ಕ್ರೀಡೆ ಇತ್ಯಾದಿ ವಿಷಯಗಳ ಅಂಚೆಚೀಟಿಯೂ ಹೊರಬಂದಿವೆ.
ಬ್ರಿಟನ್ನಿನ ಅಂಗಡಿಯೊಂದರಲ್ಲಿ 1861ರಲ್ಲಿ ಅಂಚೆಚೀಟಿ ಮಾರಾಟ ಅಥವಾ ವಿನಿಮಯ ವ್ಯವಹಾರ ಆರಂಭವಾಯಿತು. ಅಂಚೆಚೀಟಿ ಸಂಗ್ರಹ ಪುಸ್ತಕಗಳು 1862ರಲ್ಲೇ ಹೊರಬಂದವು. ಪ್ರಾರಂಭದಲ್ಲಿ ಸಂಗ್ರಹದ ಹುಚ್ಚು ಬಹಳವಾಗಿತ್ತು. ಕೊಠಡಿಯ ಗೋಡ, ಮೇಲ್ಯಾವಣಿ ಎಲ್ಲೆಡೆ ಇದನ್ನು ಅಂಟಿಸಿ ಅಲಂಕರಿಸಲಾಗುತ್ತಿತ್ತು. ಅಂಚೆಚೀಟಿಯ ಬದಿಯಲ್ಲಿರುವ ಚುಕ್ಕೆ ತೂತುಗಳ ಸಂಖ್ಯೆ, ಅದಕ್ಕೆ ಉಪಯೋಗಿಸಿದ ಕಾಗದ ಮತ್ತು ವಿನ್ಯಾಸ ಅವುಗಳ ಅಭ್ಯಾಸವೇ ಒಂದು ಹವ್ಯಾಸವಾಗಿ ಹುಟ್ಟಿತು.
ವಿಕ್ಟೋರಿಯಾ ರಾಣಿಯ ಚಿತ್ರವಿರುವ ಅಂಚೆ ಚೀಟಿ ಭಾರತದಲ್ಲಿ ಬಿಡುಗಡೆಯಾಯಿತು. ಕೈತಪ್ಪಿನಿಂದಾಗಿ 8-10 ಅಂಚೆಚೀಟಿಗಳಲ್ಲಿ ರಾಣಿಯ ಚಿತ್ರ ತಲೆಕೆಳಗಾಗಿ ಬಿದ್ದಿದ್ದು ಈಗ ಅವುಗಳ ಬೆಲೆ 15,000 ರೂಪಾಯಿ ಎಂದರೆ ಆಶ್ಚರ್ಯವಾಗದಿರದು.
ವರ್ನನ್ ವಾಗನ್ ಬ್ರಿಟಿಷ್ ಗಯಾನದ ಹನ್ನೆರಡು ವರ್ಷದ ಶಾಲಾ ಬಾಲಕ, ತನ್ನ ಮನೆಯ ಮಹಡಿಯ ಮೇಲೆ ಸಿಕ್ಕಿದ ಒಂದು ಅಂಚೆ ಚೀಟಿಯನ್ನು ಷಿಲಿಂಗಿಗೆ ಮಾರಾಟ ಮಾಡಿದ. ಸಂಗ್ರಹಾಕರ ಕೈದಾಟುತ್ತಾ ಅದಕ್ಕೆ ಅಪಾರ ಬೆಲೆಯಾಯಿತು. 1856ರಲ್ಲಿ ಬ್ರಿಟಿಷ್ ಗಯಾನದಲ್ಲಿ ಪ್ರಕಟವಾದ ಅಂಥ ಅಂಚೆಚೀಟಿ ಇದುವರೆಗೆ ಅದೊಂದೇ ದೊರೆತಿರುವುದು,
ಪತ್ರಕರ್ತ ಕಮಲ್ ಬ್ಯಾನರ್ಜಿ ಕಲ್ಕತ್ತದವರು. ಭಾರತದ ಪ್ರಾರಂಭಿಕ ಅಂಚೆ ಚೀಟಿ ಸಂಗ್ರಾಹಕರು, ದೇಶದಲ್ಲಿ ಪ್ರಥಮವಾಗಿ ಬಿಡುಗಡೆಯಾದ ಅಪೂರ್ವ ಅಂಚೆಚೀಟಿಗಳು ಅವರಲ್ಲಿದ್ದವು.
ಅಂಚೆ ಚೀಟಿ ಸಂಗ್ರಹದ ಹವ್ಯಾಸದ ಹುಚ್ಚು ಎಷ್ಟೆಂದರೆ ಕೆಲವರು ಕೊಠಡಿಯ ತುಂಬ ಅದನ್ನು ಅಂಟಿಸಿ ಆನಂದಿಸಿದರೆ, ಮತ್ತೆ ಕೆಲವರು ಅಂಚೆ ಚೀಟಿಯ ಬದಿಯಲ್ಲಿರುವ ಚುಕ್ಕೆ ತೂತುಗಳ ಸಂಖ್ಯೆ ಎಣಿಸುವುದು, ಅದಕ್ಕೆ ಉಪಯೋಗಿಸಿದ ಕಾಗದದ ರಚನೆ, ಅದರಲ್ಲಿನ ನೀರ್ಗುರುತುಗಳು - ಇತ್ಯಾದಿಗಳ ಅಭ್ಯಾಸದಲ್ಲಿ ನಿರತರಾಗಿರುವರು.
ಅಂಚೆ ಚೀಟಿ ಸಂಗ್ರಾಹಕರು ಹೆಚ್ಚು ಸ್ನೇಹ ಪ್ರಿಯರಾಗಿರಬೇಕು. ಬೇರೆ ಸಂಗ್ರಾಹಕರಾರೊಡನೆ ಸ್ನೇಹ ಬೆಳೆಸಿಕೊಂಡು ತಮ್ಮ ಬಳಿ ಇರುವ ಒಂದೇ ರೀತಿಯ ಅಂಚೆ ಚೀಟಿಯನ್ನು ಅವರಿಗೆ ಕೊಟ್ಟು ತಮ್ಮಲ್ಲಿಲ್ಲದ ಅಂಚೆಚೀಟಿ ಅವರಿಂದ ಪಡೆಯಬೇಕು. ಇದಕ್ಕಾಗಿಯೇ ಕೆಲವರು ವಿದೇಶಿ ಪತ್ರಮಿತ್ರರ ಸಖ್ಯ ಬೆಳೆಸುತ್ತಾರೆ.
ವ್ಯಾಪಾರಿಗಳಿಂದ ಕೆಲವೊಮ್ಮೆ ಅಂಚೆಚೀಟಿ ಕೊಂಡು ಉತ್ತಮ ರೀತಿಯಲ್ಲಿ ವರ್ಗಿಕರಿಸಿಕೊಳ್ಳಬಹುದು. ಇದರಿಂದ ಒಂದೇ ರೀತಿಯ ಅಂಚೆಚೀಟಿ ಒಂದಕ್ಕಿಂತ ಹೆಚ್ಚು ಇರಬಾರದು.
ಅಂಚೆ ಚೀಟಿಯನ್ನು ಬರಿಗೈಯಲ್ಲಿ ಮುಟ್ಟಬಾರದು. ಹಾಗೆ ಮಾಡಿದರೆ ಮಾಸಿ ಹೋಗುವುದು. ಇದಕ್ಕಾಗಿ ಚಿಕ್ಕ ಚಿಮಟ ಉಪಯೋಗಿಸಬೇಕು. ಅಂಟಿಸಿದ ಕಾಗದದಿಂದ ಪ್ರತ್ಯೇಕಿಸಬೇಕಾಗಿದ್ದರೆ ತಟ್ಟೆಯೊಂದರಲ್ಲಿ ಬಿಸಿ ನೀರು ಹಾಕಿ ನೆನೆಸಿ ಬಿಡಿಸಬೇಕು. ಅನಂತರ ಒತ್ತು ಕಾಗದದ ಮಧ್ಯೆ ಇಟ್ಟು ಭಾರ ಹೇರಬೇಕು.
ಅಂಚೆ ಚೀಟಿ ಜೋಡಿಸುವಾಗ ದೇಶದ ಆಕಾರಾದಿಯಲ್ಲಿ ಜೋಡಿಸಿಟ್ಟುಕೊಳ್ಳುವುದು ಉತ್ತಮ. ಚೆನ್ನಾಗಿರುವ ಅಂಚೆಚೀಟಿ, ಮುದ್ರೆಯ ಗುರುತು ತಳುವಾಗಿರುವುದನ್ನೇ ಆಯ್ತು ಅಂಟಿಸುವುದು ಒಳ್ಳೆಯದು. ಹಾಳೆಯ ಒಂದೇ ಬದಿಯಲ್ಲಿ ಅಂಟು ಕಾಗದ ಉಪಯೋಗಿಸಿ ಅಂಟಿಸಬೇಕು. ಅದಕ್ಕೆ ಸಂಬಂಧಿಸಿದ ವಿವರಗಳನ್ನು ಪಕ್ಕದಲ್ಲೇ ಬರೆದಿಡಬೇಕು. ಬಿಡುಗಡೆಯ ಕಾಲಾನುಕ್ರಮದಲ್ಲಿ ಅಂಟಿಸಿದರೆ ಚೆನ್ನ. ಇದಕ್ಕಾಗಿ ನುರಿತ ವ್ಯಾಪಾರಿ ಸಂಸ್ಥೆಗಳು ಪ್ರಕಟಿಸುವ ಕ್ಯಾಟಲಾಗಿನ ಸಹಾಯ ಪಡೆಯಬಹುದು.
COMMENTS