ಕನ್ನಡ ಕ್ರಿಕೆಟ್ ಪ್ರಬಂಧ Essay on My favourite Game Cricket in Kannada Language ಕ್ರಿಕೆಟ್‌ನ ಉಗಮದ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಐರ್‌ಲೆಂಡಿನ ವೀರರ ಕಥೆಗಳಲ್ಲಿ ಬರುವ 'ನ್ಯಾಟ್‌ಲೀಕರ್' ಎನ್ನುವ ಆಟದಿಂದ ಕ್ರಿಕೆಟ್ ಉಗಮವಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಜೂಟ್ ಜನಾಂಗದವರು ಕ್ರಿ.ಶ.400ರಲ್ಲಿ ಕ್ರಿಕೆಟ್ ಆಟವನ್ನು ಇಂಗ್ಲೆಂಡಿಗೆ ತಂದರು ಎನ್ನಲಾಗಿದೆ. ಸುಮಾರು ಏಳು ಶತಮಾನಕ್ಕೂ ಮುಂಚೆ ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಟ ಪ್ರಚಲಿತವಿತ್ತು ಎಂದು ಊಹಿಸಲಾಗಿದೆ. 1774ರಿಂದ ಕ್ರಿಕೆಟ್ ಆಟದ ನಿಯಮಗಳ ಬಗೆಗೆ ಲಿಖಿತ ದಾಖಲೆಗಳಿವೆ. 1787ರಲ್ಲಿ ಮಾರಿಲಿಬೋನ್ ಕ್ರಿಕೆಟ್ ಕ್ಲಬ್ ಅಥವಾ ಎಂ.ಸಿ.ಸಿ. ಸ್ಥಾಪಿತವಾಯಿತು. ಅದು ಇಂದಿಗೂ ಕ್ರಿಕೆಟ್ ಆಟದ ನಿಯಮಾವಳಿಗಳನ್ನು ರೂಪಿಸುತ್ತದೆ."
Essay on My favourite Game Cricket in Kannada Language: In this article, we are providing ಕನ್ನಡ ಕ್ರಿಕೆಟ್ ಪ್ರಬಂಧ for students and teachers. Students can use this Essay on My favourite Game Cricket in Kannada Language to complete their homework.
ಕನ್ನಡ ಕ್ರಿಕೆಟ್ ಪ್ರಬಂಧ Essay on My favourite Game Cricket in Kannada Language
1.ಉಗಮ ಮತ್ತು ಪರಿಚಯ 2.ಉಪಯೋಗಿಸುವ ಸಲಕರಣೆ ಅಥವಾ ಆಟಿಕೆಗಳು 3.ಆಟದ ಮೈದಾನ 4 ಆಡುವ ಬಗೆ 5. ಉಪಸಂಹಾರ
ಕ್ರಿಕೆಟ್‌ನ ಉಗಮದ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಐರ್‌ಲೆಂಡಿನ ವೀರರ ಕಥೆಗಳಲ್ಲಿ ಬರುವ 'ನ್ಯಾಟ್‌ಲೀಕರ್' ಎನ್ನುವ ಆಟದಿಂದ ಕ್ರಿಕೆಟ್ ಉಗಮವಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಜೂಟ್ ಜನಾಂಗದವರು ಕ್ರಿ.ಶ.400ರಲ್ಲಿ ಕ್ರಿಕೆಟ್ ಆಟವನ್ನು ಇಂಗ್ಲೆಂಡಿಗೆ ತಂದರು ಎನ್ನಲಾಗಿದೆ. ಸುಮಾರು ಏಳು ಶತಮಾನಕ್ಕೂ ಮುಂಚೆ ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಟ ಪ್ರಚಲಿತವಿತ್ತು ಎಂದು ಊಹಿಸಲಾಗಿದೆ. 1774ರಿಂದ ಕ್ರಿಕೆಟ್ ಆಟದ ನಿಯಮಗಳ ಬಗೆಗೆ ಲಿಖಿತ ದಾಖಲೆಗಳಿವೆ. 1787ರಲ್ಲಿ ಮಾರಿಲಿಬೋನ್ ಕ್ರಿಕೆಟ್ ಕ್ಲಬ್ ಅಥವಾ ಎಂ.ಸಿ.ಸಿ. ಸ್ಥಾಪಿತವಾಯಿತು. ಅದು ಇಂದಿಗೂ ಕ್ರಿಕೆಟ್ ಆಟದ ನಿಯಮಾವಳಿಗಳನ್ನು ರೂಪಿಸುತ್ತದೆ."
ಇದು ಕ್ರಿಕೆಟ್ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ಆಟವಾಗಿದೆ. ಈ ದೇಶಗಳ ಮಧ್ಯೆ ಪರಸ್ಪರ 'ಟೆಸ್ಟ್' ಆಟಗಳು ನಡೆಯುತ್ತಿವೆ.
ಬ್ರಿಟಿಷರು ಭಾರತಕ್ಕೆ ಬಂದಾಗ ಕ್ರಿಕೆಟ್ ಆಟ ಸಹ ಅವರೊಂದಿಗೆ ಬಂದಿತು. 1792ರ ಹೊತ್ತಿಗೆ ಭಾರತದಲ್ಲಿ ಕಲ್ಕತ್ತ ಕ್ರಿಕೆಟ್ ಕ್ಲಬ್' ಅಸ್ತಿತ್ವದಲ್ಲಿತ್ತು ಈ ಕ್ಲಬ್‌ನ ಆಟದ ಮೈದಾನ'ಈಡನ್ ಗಾರ್ಡನ್'. ಪ್ರಾರಂಭದಲ್ಲಿ ಈ ಕ್ಲಬ್‌ನಲ್ಲಿ ಭಾರತೀಯ ಆಟಗಾರರು ಇರಲಿಲ್ಲ. ಭಾರತ ಸ್ವತಂತ್ರವಾದ ಮೇಲೆ ರಾಜ್ಯಗಳು ತಮ್ಮದೇ ತಂಡಗಳನ್ನು ಕಟ್ಟಿಕೊಂಡು 'ರಣಜಿ ಟ್ರೋಫಿ' ಪಂದ್ಯಗಳಲ್ಲಿ ಭಾಗವಹಿಸುತ್ತಿವೆ.
ಆಟದ ಸಲಕರಣಿಗಳು:- ಕ್ರಿಕೆಟ್ ಆಡಲು ಮುಖ್ಯವಾಗಿ ಬೇಕಾದ ಸಲಕರಣೆಗಳೆಂದರೆ ಚೆಂಡು, ಬ್ಯಾಟು, ವಿಕೆಟ್, ಪ್ಯಾಡು ಇತ್ಯಾದಿ. ಕ್ರಿಕೆಟ್ ಆಡಲು ವಿಶೇಷ ಬಗೆಯ ಚೆಂಡನ್ನು ಸಿದ್ದಪಡಿಸಿರುತ್ತಾರೆ. ಕಾರ್ಕ್ನ ಸುತ್ತಲೂ ಬಿಗಿಯಾಗಿ ಟೈನ್ ದಾರ ಸುತ್ತಿ ಮೆರುಗು ಕೊಟ್ಟು ಕೆಂಪು ಬಣ್ಣ ಬಳಿದ ಚರ್ಮದಿಂದ ಈ ಚೆಂಡನ್ನು ಮುಚ್ಚುತ್ತಾರೆ. ಇದರ ಸುತ್ತಳತೆ ಒಂಭತ್ತು ಅಂಗುಲ. ತರಕು 1/2 ಔನ್ಸ್ ನಷ್ಟು.
ಕ್ರಿಕೆಟ್ ಬ್ಯಾಟನ್ನು ವಿಲೋ ಮರದಿಂದ ತಯಾರಿಸುತ್ತಾರೆ. ಹಿಡಿಯೂ ಸೇರಿ ಇದರ ಉದ್ದ 38 ಅಂಗುಲಕಕಿಂತ ಹೆಚ್ಚಿರುವಂತಿಲ್ಲ. ಅಗಲ 41/4 ಅಂಗುಲ ಮೀರಿರಬಾರದು. ಬ್ಯಾಟಿನ ಹಿಡಿಯನ್ನು ಬೆತ್ತದಿಂದ ರಚಿಸಿ ಮೇಲ್ಬಾಗದಲ್ಲಿ ಸೇರಿಸಿರುತ್ತಾರೆ.
Read also : ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ Short Essay on Parisara Malinya in Kannada Language
Read also : ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ Short Essay on Parisara Malinya in Kannada Language
ಬ್ಯಾಟುಗಾರನ ಹಿಂದೆ ಮೂರು ಸ್ಪಂಪ್ ಇರುತ್ತದೆ. ಇದಕ್ಕೆ 'ವಿಕಟ್' ಎನ್ನುವರು. ಈ ಸ್ಟಂಪ್‌ಗಳ ಮೇಲೆ ಎರಡು ಮರದ ತುಂಡುಗಳನ್ನು ಅಡ್ಡವಾಗಿ ಇಟ್ಟಿರುತ್ತಾರೆ. ಇವುಗಳಿಗೆ 'ಬೇಲ್ಸ್' ಎಂದು ಹೆಸರು. ವಿಕೆಟ್‌ನ ಅಗಲ9 ಅಂಗುಲ ಬೇಲ್ಸ್ನ ಅಗಲ ಅರ್ಧ ಅಂಗುಲ ದಪ್ಪವನ್ನು ಸೇರಿಸಿದರೆ ನೆಲದಿಂದ ಅದರ ಎತ್ತರ28.5 ಅಂಗುಲ.
ಬೌಲ್ ಮಾಡಿದಾಗ ಚಂಡಿನಿಂದ ಏಟು ಬೀಳದಂತ ಬ್ಯಾಟುಗಾರರು ಕಾಲುಗಳಿಗೆ 'ಪ್ಯಾಡ್' ಧರಿಸಿರುತ್ತಾರೆ. ಮತ್ತು ಕೈಗವಸು ಹಾಕಿಕೊಂಡಿರುತ್ತಾರೆ. ವಿಕೆಟ್ ಕೀಪರ್ ವಿಶಿಷ್ಟ ರೀತಿಯಲ್ಲಿ ಸಿದ್ಧಪಡಿಸಿದ ಕೈಗವಸು ಹಾಕಿಕೊಳ್ಳುತ್ತಾರೆ. ಕ್ರಿಕೆಟ್ ಆಟಗಾರರು ಸಾಮಾನ್ಯವಾಗಿ ಬಿಳಿ ಬಟ್ಟೆ ಧರಿಸಿ ಬಿಳಿ ಬೂಟು ಹಾಕುತ್ತಾರೆ.
ಆಟದ ಮೈದಾನ:- ಸುಮಾರು ಎಪ್ಪತ್ತೈದು ಗಜಗಳಿಗಿಂತಲೂ ಉದ್ದವಿರದ ವಿಶಾಲವಾದ ಮೈದಾನದಲ್ಲಿ ಕ್ರಿಕೆಟ್ ಆಡಲಾಗುತ್ತದೆ. ಮೈದಾನದ ಮಧ್ಯ ಇರುವ 'ಪಿಚ್'ನ ಮೇಲೆ ಕ್ರಿಕೆಟ್ ಆಟ ನಡೆಯುತ್ತದೆ. ಪಿಚ್‌ನ ಉದ್ದbಅಡಿ, ಅಗಲ 10ಅಡಿ. ಪಿಚ್‌ನ ಎರಡೂ ತುದಿಗಳ ಕೊನೆಯಲ್ಲಿ ವಿಕೆಟ್ ನಿಲ್ಲಿಸಿರುತ್ತಾರೆ. ಒಂದು ತುದಿಯಿಂದ ಬೌಲರ್ ಚೆಂಡನ್ನು ಎಸೆಯುತ್ತಾನೆ. ಇನ್ನೊಂದು ತುದಿಯಲ್ಲಿ ವಿಕೆಟ್‌ನ ಮುಂದೆ ನಿಂತಿರುವ ಬ್ಯಾಟುಗಾರ ಚೆಂಡನ್ನು ಬ್ಯಾಟಿನಿಂದ ಜೋರಾಗಿ ಹೊಡೆಯುತ್ತಾನೆ.
ವಿಕೆಟ್‌ನ ಮುಂದೆ 4 ಅಡಿ ದೂರದಲ್ಲಿ ಒಂದು ಬಿಳಿ ಅಡ್ಡಗೆರೆ ಇರುತ್ತದೆ. ಇದನ್ನು 'ಪಾಪಿಂಗ್ ಕ್ರೀಸ್' ಎನ್ನುತ್ತಾರೆ. ಎರಡು ತಂಡಗಳ ನಡುವೆ ಕ್ರಿಕೆಟ್ ಆಟ ನಡೆಯುತ್ತದೆ. ಪ್ರತಿಯೊಂದು ತಂಡದಲ್ಲಿ ಹನ್ನೊಂದು ಮಂದಿ ಆಟಗಾರರು ಇರುತ್ತಾರೆ. ಆಟವನ್ನು ಅಚ್ಚುಕಟ್ಟಾಗಿ ನಡೆಸಲು ಇಬ್ಬರು ಅಂಪೈರುಗಳು ಇರುತ್ತಾರೆ. ಆಟ ಪ್ರಾರಂಭವಾಗುವ ಮೊದಲು ಎರಡೂ ತಂಡಗಳ ಕ್ಯಾಪ್ಟನ್ನರಲ್ಲಿ ಯಾರಾದರೊಬ್ಬರು ಟಾಸ್ ಹಾಕುತ್ತಾರೆ. ಟಾಸ್ ಗೆದ್ದ ಕ್ಯಾಪ್ಟನ್ ತಮ್ಮ ತಂಡದ ಆಟಗಾರರು ಮೊದಲು ಬ್ಯಾಟ್ ಮಾಡಬೇಕೋ ಅಥವಾ ಫೀಲ್ಡ್ ಮಾಡಬೇಕೋ ಎಂದು ನಿರ್ಧರಿಸುತ್ತಾನೆ.
Read also : ಜನಸಂಖ್ಯಾ ಸ್ಫೋಟ ಮತ್ತು ಅದರ ನಿಯಂತ್ರಣ ಪ್ರಬಂಧ Essay on Population Explosion in Kannada language
ಫೀಲ್ಡ್ ಮಾಡುವ ತಂಡದ ಹನ್ನೊಂದು ಆಟಗಾರರು ಕ್ರಿಕೆಟ್ ಮೈದಾನದಲ್ಲಿರುತ್ತಾರೆ. ತಂಡದ ಕ್ಯಾಪ್ಟನ್ ಅಥವಾ ಬೌಲರ್ ಯಾವ ಆಟಗಾರ ಎಲ್ಲಿ ನಿಂತಿರಬೇಕು ಎಂದು ಸೂಚಿಸುತ್ತಾರೆ. ವಿಕೆಟ್‌ಗಳ ಹಿಂದೆ ನಿಂತಿರುವವನು ವಿಕೆಟ್ ಕೀಪರ್. ಅವನು ಬ್ಯಾಟುಗಾರನ ಹಿಂದೆ ನಿಂತಿರುತ್ತಾನೆ. ಬೌಲರ್ ಇನ್ನೊಂದು ತುದಿಯಿಂದ ಚೆಂಡು ಎಸೆಯುತ್ತಾನೆ. ಉಳಿದ ಆಟಗಾರರು ಫೀಲ್ಡ್ ಮಾಡುತ್ತಾರೆ. ಬ್ಯಾಟುಗಾರ ಹೆಚ್ಚು ರನ್ನು ಮಾಡದಂತ ಈ ಫೀಲ್ಡರುಗಳು ಎಚ್ಚರವಹಿಸಿ ಕಾಯುತ್ತಾರೆ. ಬ್ಯಾಟು ಮಾಡುವ ತಂಡದ ಇಬ್ಬರು ಆಟಗಾರರು ಒಂದೊಂದು ಬದಿಯ ವಿಕೆಟ್‌ನ ಬಳಿ ನಿಲ್ಲುತ್ತಾರೆ.
ಬೌಲರನ ಉದ್ದೇಶ ಬಾಟುಗಾರನನ್ನು ಔಟ್ ಮಾಡುವುದು, ಬೌಲರ್ ಎಸದ ಚೆಂಡನ್ನು ಬ್ಯಾಟುಗಾರನಿಗೆ ತಡೆಯಲಾಗದಿದ್ದರೆ ಚೆಂಡು ವಿಕೆಟ್‌ಗೆ ತಗುಲಿ ಬೇಲ್ ಬಿದ್ದರೆ ಬ್ಯಾಟುಗಾರ ಔಟ್ ಆಗುತ್ತಾನೆ. ಬ್ಯಾಟುಗಾರ ಚೆಂಡನ್ನು ಹೊಡೆದಾಗ ಅದು ನೆಲವನ್ನು ತಾಗುವಷ್ಟರಲ್ಲಿ ಫೀಲ್ಡರ್ ಹಿಡಿದುಬಿಟ್ಟರೆ ಆ ಬ್ಯಾಟುಗಾರ ಔಟ್ ಆದಂತ. ಬ್ಯಾಟುಗಾರನ ಉದ್ದೇಶ ಔಟ್ ಆಗದಂತ ಅಧಿಕ ರನ್ನು ಗಳಿಸುವುದು,
ಚಂಡು ಬೌಲರ್ ಅಥವಾ ವಿಕೆಟ್ ಕೀಪರ್ ಕೈ ಸೇರುವಷ್ಟರಲ್ಲಿ ಪಿಚ್‌ನ ಮತ್ತೊಂದು ಬದಿಯ ವಿಕೆಟ್ ಬಳಿಗೆ ಓಡಬೇಕು. ಆ ವಿಕೆಟ್ ಬಳಿಯಿರುವ ಬ್ಯಾಟುಗಾರ ಈ ಬದಿಗೆ ಓಡಿ ಬರುತ್ತಾನೆ. ಹೀಗೆ ಇಬ್ಬರೂ ಪರಸ್ಪರ ಅರಿತು ಓಡಿದಾಗ ಒಂದು ಓಟ' ಅಥವಾ ರನ್' ಮಾಡಿದಂತಾಗುತ್ತದೆ. ಹೀಗೆ ಓಡುವ ಆಟಗಾರರು ವಿಕೆಟ್ ತಲುಪುವ ಮೊದಲೇ ಬೌಲರ್, ವಿಕೆಟ್ ಕೀಪರ್ ಅಥವಾ ಫೀಲ್ಡರ್ ಚೆಂಡನ್ನು ವಿಕೆಟ್‌ಗೆ ಹೊಡೆದು ಉರುಳಿಸಿದರೆ ಆ ಸಮಯದಲ್ಲಿ ಉರುಳಿದ ವಿಕೆಟ್ ಕಡ ಯಾವ ಬ್ಯಾಟುಗಾರ ಓಡುತ್ತಿರುತ್ತಾನೋ ಅವನು ಔಟ್ ಆದಂತೆ. ಇದಕ್ಕೆ 'ರನ್ ಔಟ್' ಎಂದು ಹೆಸರು.
ಬ್ಯಾಟುಗಾರ ಚೆಂಡು ಹೊಡೆಯಲು ಕ್ರೀಸ್ ಬಿಟ್ಟು ಮುಂದೆ ಬಂದಾಗ ಆ ಚೆಂಡು ತಪ್ಪಿ ವಿಕೆಟ್ ಕೀಪರನ ಕೈ ಸೇರುತ್ತದೆ. ಚುರುಕಾದ ವಿಕೆಟ್ ಕೀಪರ್, ಬ್ಯಾಟುಗಾರ ಮತ್ತೆ ಕ್ರೀಸ್ ಒಳಗೆ ಬರುವಷ್ಟರಲ್ಲಿ ಚೆಂಡನ್ನು ವಿಕೆಟ್‌ಗೆ ಹೊಡೆದು ಅದನ್ನು ಉರುಳಿಸಿದರೆ ಬ್ಯಾಟುಗಾರ ಔಟ್, ಇದಕ್ಕೆ 'ಸ್ಟಂಪಿಂಗ್' ಎಂದು ಹೆಸರು. ಬೌಲರ್ ಎಸೆದ ಚೆಂಡು ವಿಕೆಟ್‌ಗೆ ಬೀಳುವಂತಿದ್ದಾಗ ಅದನ್ನು ಬ್ಯಾಟಿನಿಂದ ತಡೆಯದೆ ಕೈಯಲ್ಲದೆ ದೇಹದ ಯಾವುದೇ ಭಾಗದಿಂದ ತಡೆದರೂ ಅವನು ಔಟ್. ಇದನ್ನು 'ಎಲ್.ಬಿ.ಡಬ್ಲ್ಯು' ಅಥವಾ 'ಲೆಗ್ ಬಿಫೋರ್ ವಿಕೆಟ್' ಎನ್ನುತ್ತಾರೆ. ಬ್ಯಾಟುಗಾರ ಆಡುವಾಗ ಎಚ್ಚರ ತಪ್ಪಿ ಬ್ಯಾಟನ್ನು ಅಥವಾ ದೇಹವನ್ನು ವಿಕೆಟ್‌ಗೆ ತಗುಲಿಸಿ ಬೇಲ್ಸ್ ಉರುಳಿಸಿದರೆ ಅವನು ಔಟಾಗುತ್ತಾನೆ. ಇದಕ್ಕೆ ಹಿಟ್ ವಿಕೆಟ್' ಎನ್ನುತ್ತಾರೆ.
ಕ್ರಿಕೆಟ್ ಮೈದಾನದ ಅಂಚಿನಲ್ಲಿ ಎಳೆದಿರುವ ಗೆರೆಗೆ 'ಬೌಂಡರಿ ಲೈನ್' ಎಂದು ಹೆಸರು. ಬ್ಯಾಟುಗಾರ ಹೊಡೆದ ಚೆಂಡು ಈ ಗೆರೆಯನ್ನು ದಾಟಿ ಹೋದರೆ ಅದನ್ನು “ಬೌಂಡರಿ' ಎನ್ನುವರು. ಇದರಿಂದ ಬ್ಯಾಟುಗಾರನಿಗೆ ನಾಲ್ಕು ರನ್ನು ಸಿಕ್ಕುತ್ತದೆ. ಚೆಂಡು ಎಲ್ಲೂ ನೆಲಕ್ಕೆ ತಗುಲದ ಬೌಂಡರಿಯನ್ನು ದಾಟಿ ನೆಲಕ್ಕೆ ಬಿದ್ದರೆ ಅದಕ್ಕೆ 'ಸಿಕ್ಸರ್' ಎನ್ನುತ್ತಾರೆ. ಇದಕ್ಕೆ ಆರು ರನ್ನು' ಸಿಕ್ಕುತ್ತದೆ.
ಒಂದು ತಂಡದ ಹತ್ತು ಮಂದಿ ಆಟಗಾರರು ಔಟಾದಾಗ ಆ ತಂಡದ ಮೊದಲ ಇನ್ನಿಂಗ್ಸ್‌ನ ಆಟ ಮುಗಿದಂತ, ಅನಂತರ ಈ ತಂಡದವರು ಫೀಲ್ಡ್ ಮಾಡಬೇಕು. ಇನ್ನೊಂದು ತಂಡದವರು ಬ್ಯಾಟ್ ಮಾಡುತ್ತಾರೆ. ಇವರ ಬ್ಯಾಟಿಂಗ್ ಮುಗಿದ ಮೇಲೆ ಪಂದ್ಯದ ಒಂದು ಇನ್ನಿಂಗ್ಸ್ ಮುಗಿಯುತ್ತದೆ. ಹೀಗೆ ಎರಡು ತಂಡದವರೂ ಎರಡು ಇನ್ನಿಂಗ್ಸ್ ಆಡುತ್ತಾರೆ. ಅಧಿಕ ರನ್ನು ಗಳಿಸಿದ ತಂಡದವರು ಗೆದ್ದಂತ, ಒಂದು ದಿನದ ಪಂದ್ಯದಲ್ಲಿ ಎರಡು ತಂಡ ಆಡಿ ಎಲ್ಲರೂ ಔಟಾದರೆ ಅಧಿಕ ರನ್ನು ಗಳಿಸಿದವರು ಗೆದ್ದ ಹಾಗ, ಒಂದು ತಂಡದವರು ತಾವು ಗೆಲ್ಲಲು ಅಧಿಕ ಮೊತ್ತದ ರನ್ನು ಗಳಿಸಿದ್ದೇವೆ ಎನಿಸಿದಾಗ ಅವರು ತಮ್ಮ ಆಟವನ್ನು ಅಷ್ಟಕ್ಕೆ ನಿಲ್ಲಿಸಿ ಇನ್ನೊಂದು ತಂಡದವರಿಗೆ ಆಟವಾಡಲು ಅವಕಾಶ ಮಾಡಿಕೊಡಬಹುದು. ಇದಕ್ಕೆ ಡಿಕ್ಟೇರಿಂಗ್' ಎನ್ನುತ್ತಾರೆ.
ಆಟಗಾರರ ಒಂದು ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಪಂದ್ಯದಲ್ಲಿ ಎದುರಾಳಿ ತಂಡಕ್ಕಿಂತ 150 ರನ್ನುಗಳಷ್ಟು ಹಿಂದಿದ್ದಾಗ ತನ್ನ ಎರಡನೆಯ ಇನ್ನಿಂಗ್ನನ್ನು ಮುಂದುವರಿಸುವುದಕ್ಕೆ (ಫಾಲೋ ಆನ್' ಎಂದು ಹೆಸರು.
COMMENTS