Essay on Kite in Kannada Language: In this article, we are providing ಗಾಳಿಪಟ ಬಗ್ಗೆ ಪ್ರಬಂಧ for students and teachers. Students can use this Essay on Kite in Kannada Language to complete their homework. ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಗ್ರೀಸ್ ದೇಶದ ಅಚಿಟಿಸ್ ಎಂಬುವನು ಗಾಳಿಪಟದ ರಚನೆಯನ್ನು ಕಂಡುಹಿಡಿದನೆಂದು ಪ್ರತೀತಿ. ಚೀನಾದಲ್ಲಿ ಕ್ರಿ.ಪೂ. 206ರಲ್ಲಿ ಹನ್‌ಸನ್ ಎಂಬ ಸೇನಾಧಿಪತಿ ಯುದ್ಧ ತಂತ್ರದಲ್ಲಿ ಬಳಕೆಗಾಗಿ ಗಾಳಿಪಟ ಕಂಡುಕೊಂಡನೆಂದು ಚೀನಾದಲ್ಲಿ ಹೇಳಲಾಗುತ್ತಿದೆ. ಭಾರತದಲ್ಲಿ ಗಾಳಿಪಟ ಬಹಳ ವರ್ಷಗಳಿಂದ ಪ್ರಚಲಿತವಾಗಿದೆ. ಕಾಶಿ, ಲಕ್ಷ್ಮೀ ಮುಂತಾದ ಸ್ಥಳಗಳಲ್ಲಿ ಬಹಳ ಹಿಂದಿನ ಕಾಲದಿಂದ ಗಾಳಿಪಟ ಸ್ಪರ್ಧೆಗಳು ನಡೆಯಲ್ಪಡುತ್ತಿವೆ. ಔದ್‌ನ ನವಾಬರು ಗಾಳಿಪಟ ಸ್ಪರ್ಧೆಗಳನ್ನು ಪ್ರೋತ್ಸಾಹಿಸುತ್ತಿದ್ದರು.
Essay on Kite in Kannada Language: In this article, we are providing ಗಾಳಿಪಟ ಬಗ್ಗೆ ಪ್ರಬಂಧ for students and teachers. Students can use this Essay on Kite in Kannada Language to complete their homework.
ಗಾಳಿಪಟ ಬಗ್ಗೆ ಪ್ರಬಂಧ Essay on Kite in Kannada Language
1. ಉಗಮ 2. ವಿವರಣೆ. ರಚನೆ. 4. ವಿವಿಧೋದ್ದೇಶ 5. ವಿವರಣೆ
ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಗ್ರೀಸ್ ದೇಶದ ಅಚಿಟಿಸ್ ಎಂಬುವನು ಗಾಳಿಪಟದ ರಚನೆಯನ್ನು ಕಂಡುಹಿಡಿದನೆಂದು ಪ್ರತೀತಿ. ಚೀನಾದಲ್ಲಿ ಕ್ರಿ.ಪೂ. 206ರಲ್ಲಿ ಹನ್‌ಸನ್ ಎಂಬ ಸೇನಾಧಿಪತಿ ಯುದ್ಧ ತಂತ್ರದಲ್ಲಿ ಬಳಕೆಗಾಗಿ ಗಾಳಿಪಟ ಕಂಡುಕೊಂಡನೆಂದು ಚೀನಾದಲ್ಲಿ ಹೇಳಲಾಗುತ್ತಿದೆ. ಭಾರತದಲ್ಲಿ ಗಾಳಿಪಟ ಬಹಳ ವರ್ಷಗಳಿಂದ ಪ್ರಚಲಿತವಾಗಿದೆ. ಕಾಶಿ, ಲಕ್ಷ್ಮೀ ಮುಂತಾದ ಸ್ಥಳಗಳಲ್ಲಿ ಬಹಳ ಹಿಂದಿನ ಕಾಲದಿಂದ ಗಾಳಿಪಟ ಸ್ಪರ್ಧೆಗಳು ನಡೆಯಲ್ಪಡುತ್ತಿವೆ. ಔದ್‌ನ ನವಾಬರು ಗಾಳಿಪಟ ಸ್ಪರ್ಧೆಗಳನ್ನು ಪ್ರೋತ್ಸಾಹಿಸುತ್ತಿದ್ದರು.
ಸಾಮಾನ್ಯವಾಗಿ ಜುಲೈ ತಿಂಗಳು ಆಷಾಢ-ಶ್ರಾವಣ ಮಾಸದಲ್ಲಿ ಗಾಳಿಪಟವನ್ನು ಹಾರಿಸುತ್ತಾರೆ. ಗುಜರಾತಿನಲ್ಲಿ ಮಕರ ಸಂಕ್ರಮಣದ ದಿನ ವಿಶೇಷ ಸಡಗರ ಸಂಭ್ರಮದಿಂದ ಗಾಳಿಪಟ ಹಾರಿಸುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಕೆಲವೊಂದು ನಿರ್ದಿಷ್ಟ ಸಮಯದಲ್ಲಿ ಗಾಳಿಪಟ ಹಾರಿಸುವುದುಂಟು. ಚೀನಾದಲ್ಲಿ ಗಾಳಿಪಟ ಸ್ಪರ್ಧೆ ರಾಷ್ಟ್ರೀಯ ಆಟ ಎನಿಸಿದೆ. ಚೀನೀ ಕತೆಗಳಲ್ಲಿ ಇಂಥದೊಂದು ಆಟದ ಬಗ್ಗೆ ಬಹಳಷ್ಟು ಉಲ್ಲೇಖವಿದೆ. ಚೀನಾದಲ್ಲಿ ಒಂಬತ್ತನೆಯ ತಿಂಗಳು ಒಂಬತ್ತನೆಯ ದಿನವನ್ನು ಗಾಳಿಪಟ ದಿನವನ್ನಾಗಿ ಆಚರಿಸುತ್ತಾರೆ. ಮೀನು, ಹಕ್ಕಿ, ಚಿಟ್ಟೆ, ಪೆಡಂಭೂತ ಇತ್ಯಾದಿ ಆಕಾರಗಳ ಗಾಳಿಪಟ ರಚಿಸಿ ಹಾರಿಸುತ್ತಾರೆ. ಇಂಥ ಸಡಗರದ ದಿನವನ್ನು ಎತ್ತರಕ್ಕೇರಿಸುವ ಹಬ್ಬ'ವೆಂದು ಕರೆಯುವರು. - ಜಪಾನ್ ದೇಶದಲ್ಲಿ ಪ್ರತಿ ಕುಟುಂಬದವರು ತಮ್ಮ ಮನೆಯ ಗಂಡು ಮಕ್ಕಳ ಸಂಖ್ಯೆಯಷ್ಟು ಗಾಳಿಪಟಗಳನ್ನು ಮನೆಯೆದುರು ಮೇ 5 ರಂದು ಹಾರಿಸುತ್ತಾರೆ. ನ್ಯೂಜಿಲೆಂಡಿನ ಜನರು ಈ ಹಬ್ಬವನ್ನು ಧಾರ್ಮಿಕ ವಿಧಿಗಳೊಂದಿಗೆ ಪದ್ಯಗಳನ್ನು ಹೇಳುತ್ತಾ ಗಾಳಿಪಟವನ್ನು ಹಾರಿಸುತ್ತಾರೆ. ಅಮರಿಕದ ನಗರಗಳಲ್ಲಿ ವಸಂತಮಾಸದಲ್ಲಿ ಹುಡುಗ-ಹುಡುಗಿಯರಿಗಾಗಿ ಗಾಳಿಪಟ ಟೂರ್ನಮೆಂಟ್ ಜರುಗುತ್ತದೆ.
ಗಾಳಿಪಟ ಸ್ಪರ್ಧೆಯಲ್ಲಿ ಪಟದ ದಾರಗಳಿಗೆ ಮರವಜ್ರದೊಂದಿಗೆ ಗಾಜಿನಪುಡಿಯನ್ನು ಲೇಪಿಸಿರುತ್ತಾರೆ. ಆಟಗಾರರು ತಮ್ಮ ಗಾಳಿಪಟವನ್ನು ತುಂಬ ಎತ್ತರಕ್ಕೆ ಹಾರಿಸಿ ಎದುರಾಳಿಗಳ ಪಟದ ದಾರಗಳಿಗೆ ಅಡ್ಡ ಸಿಕ್ಕಿಸಿ ಆ ಪಟಗಳ ದಾರವನ್ನು ತುಂಡು ಮಾಡಲು ಪ್ರಯತ್ನಿಸುತ್ತಾರೆ. ದಾರ ತುಂಡಾಗಿ ಕೆಳಗೆ ಹಾರಿ ಬರುವ ಗಾಳಿಪಟವನ್ನು ಹಿಡಿದುಕೊಳ್ಳಲು ಪೈಪೋಟಿ ಇರುತ್ತದೆ.
ರಚನೆ: ಚಪ್ಪಟೆಯಾದ ಗಾಳಿಪಟ ವಜ್ರಾಕೃತಿಯಂಥ ರಚನೆಹೊಂದಿದೆ. ಬಿದಿರು ಅಥವಾ ತೆಳುವಾದ ಬೆತ್ತದ ಎರಡು ಕಡ್ಡಿಗಳನ್ನು ಒಂದಕ್ಕೊಂದು ಲಂಬವಾಗಿ ಜೋಡಿಸಿ ಚೌಕಟ್ಟು ಸಿದ್ಧಪಡಿಸಬೇಕು. ಗಾಳಿಯ ಒತ್ತಡಕ್ಕೆ ಹರಿದು ಹೋಗದಂಥ ಕಾಗದವನ್ನು ಈ ಚೌಕಟ್ಟಿನ ಮೇಲೆ ಅಂಟಿಸಬೇಕು. ಇದಕ್ಕಾಗಿ ಲಿನನ್, ಕ್ಯಾಲಿಕೋ ಅಥವಾ ಅಂಟು ಬಟ್ಟೆಯನ್ನೂ ಉಪಯೋಗಿಸಬಹುದು. ಗಾಳಿಪಟಕ್ಕೆ ಹೆಚ್ಚು ಬಲ ಬರುವಂತೆ ಮಾಡಲು ರಚಿಸಿದ ಚೌಕಟ್ಟಿನ ಮೇಲರ್ಧದಲ್ಲಿ ಬಿದಿರು ಅಥವಾ ಬೆತ್ತದ ಕಡ್ಡಿಯೊಂದನ್ನು ಬಿಲ್ಲಿನಂತೆ ಬಾಗಿಸಿ ಜೋಡಿಸಬಹುದು.
ಗಾಳಿಪಟ ಸಮತೋಲನದಲ್ಲಿರುವಂತೆ ಎಚ್ಚರಿಕೆ ವಹಿಸಿ ಅದು ತುಂಬ ಎತ್ತರಕ್ಕೆ ಹಾರುವಂತೆ ಸರಿಯಾದ ಜಾಗದಲ್ಲಿ ದಾರವನ್ನು ಕಟ್ಟುತ್ತಾರೆ. ಅಕಸ್ಮಾತ್ ಗಾಳಿಪಟ ಕೆಳಗೆ ಉರುಳಿದರೂ ಅದು ಮತ್ತೆ ಮೇಲೇರುವಂತೆ ಮಾಡಲು ಬಾಲಂಗೋಚಿ ಕಟ್ಟುತ್ತಾರೆ. ಗಾಳಿಪಟದ ದಾರಕ್ಕೆ ಅನುಗುಣವಾಗಿ ಬಾಲಂಗೋಚಿಯ ಉದ್ದ ಪಟದ ಉದ್ದದ ಎರಡರಷ್ಟಿರುತ್ತದೆ. ಗಂಟು ಹಾಕಿದ ಅರಿವೆ, ಕಾಗದದ ಪಟ್ಟಿ ಮತ್ತು ಹಗ್ಗವನ್ನು ಬಾಲಂಗೋಚಿಯಾಗಿ ಜೋಡಿಸುವುದುಂಟು.
ಚೀನೀ ಗಾಳಿಪಟ ಪೆಟ್ಟಿಗೆಯಂತಿರುತ್ತದೆ. ಇದು ಟೊಳ್ಳು ಆಯತ ಘನಾಕೃತಿ. ಇದನ್ನು ಮೂರು ಭಾಗಗಳಾಗಿ ವಿಂಗಡಿಸಿ ನಡುವಿನ ಭಾಗಕ್ಕೆ ಕಾಗದ ಹಚ್ಚದೆ ಖಾಲಿ ಬಿಟ್ಟಿರುತ್ತಾರೆ. ಇದೇ ರೀತಿ 'ಪಟ್ಟಿಗೆ'ಯ ತುದಿ, ಬದಿಯ ಮೈಗಳು ತೆರೆದಿರುತ್ತವೆ.
ವಿವಿಧೋದ್ದೇಶ:- ಗಾಳಿಪಟವು ಬೇರೆ ಬೇರೆ ಉದ್ದೇಶಗಳಿಗಾಗಿಯೂ ಬಳಸಲ್ಪಟ್ಟಿದೆ. ಬೆಟ್ಟಗುಡ್ಡಗಳಂಥ ದುರ್ಗಮ ಸ್ಥಳಗಳಿಗೆ ಹೋಗಿ ಹಿಂದಿರುಗಲು ಕಷ್ಟಪಡುತ್ತಿದ್ದ ಜನರಿಗೆ ಆಹಾರವನ್ನು ಪಟ್ಟಿಗೆ ಗಾಳಿಪಟಗಳ ಮೂಲಕ ಸರಬರಾಜು ಮಾಡುತ್ತಿದ್ದ ಬಗ್ಗೆ ಚೀನಾದ ಪ್ರಾಚೀನ ಇತಿಹಾಸದಲ್ಲಿ ಪ್ರಸ್ತಾಪವಿದೆ. ಸೈನಿಕರು ನಗರ ಪ್ರವೇಶಿಸಲು ಪೆಟ್ಟಿಗೆ ಪಟಗಳಲ್ಲಿ ಕುಳಿತು ಗೋಡೆ ಏರಿ ಒಳಕ್ಕೆ ಇಳಿಯುತ್ತಿದ್ದರು ಎನ್ನಲಾಗಿದೆ. ಸ್ಕಾಟ್‌ಲೆಂಡಿನ ಇಬ್ಬರು ವಿದ್ಯಾರ್ಥಿಗಳಾದ ಅಲೆಕ್ಸಾಂಡರ್ ವಿಲ್ಸನ್ ಮತ್ತು ಥಾಮಸ್ ಮಲ್ಟಿಲಾ 1749ರಲ್ಲಿ ಉಷ್ಣತಾ ಮಾಪಕ ಜೋಡಿಸಿದ ರೈಲು ಗಾಳಿಪಟಗಳನ್ನು ಹಾರಿಸಿ ಮೇಲ್ಮಟ್ಟದಲ್ಲಿನ ವಾಯುವಿನ ಉಷ್ಣತೆಯನ್ನು ತಿಳಿಸಿದರು. 1752ರಲ್ಲಿ ಅಮರಿಕದ ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ ಮಿಂಚಿನಲ್ಲಿ ವಿದ್ಯುತ್ ಇದೆ ಎಂದು ತೋರಿಸಲು ಗಾಳಿಪಟದ ಸಹಾಯವನ್ನು ಪಡೆದ. 1903ರಲ್ಲಿ ಪ್ರಥಮ ವಿಮಾನ ನಿರ್ಮಿಸಿದ ರೈಟ್ ಸಹೋದರರು ಮೊದಲು ಪೆಟ್ಟಿಗೆ ಗಾಳಿಪಟದ ಮೂಲಕ ಮನುಷ್ಯನನ್ನು ಆಕಾಶಕ್ಕೇರಿಸುವ ಪ್ರಯೋಗ ನಡೆಸಿದ ಉದಾಹರಣೆಯಿದೆ.
ಅಮೆರಿಕದಲ್ಲಿ ಹವಾ ಮುನ್ಸೂಚನೆ ತಿಳಿಯಲು ಉಪಕರಣಗಳನ್ನೊಳಗೊಂಡ ಗಾಳಿಪಟವನ್ನು ಈ ಶತಮಾನದ ಆದಿ ಭಾಗದಲ್ಲಿ ಉಪಯೋಗಿಸುತ್ತಿದ್ದರು. ಚೀನಾದ ರೈತರು ಈಗಲೂ ಗಾಳಿ-ಮಳೆ ಮುನ್ಸೂಚನೆ ತಿಳಿಯಲು ಗಾಳಿಪಟ ಬಳಸುವುದುಂಟು. ಆಕಾಶದಿಂದ ಫೋಟೋ ತೆಗೆಯಲು ಗಾಳಿಪಟವನ್ನು ಉಪಯೋಗಿಸಲಾಗುತ್ತಿತ್ತು. 1899-196ರ ದಕ್ಷಿಣ ಆಫ್ರಿಕಾದ ಬೋಯರ್ ಯುದ್ಧದಲ್ಲಿ ಬ್ರಿಟಿಷ್ ಸೈನಿಕರು ಎದುರಾಳಿಗಳ ಚಲನವಲನವನ್ನು ಅರಿಯಲು ಮಾನವನಿದ್ದ ಪೆಟ್ಟಿಗೆ ಗಾಳಿಪಟವನ್ನು ಶತ್ರುಪ್ರದೇಶದ ಮೇಲೆ ಹಾರಿಸಿದ್ದರು. - ಎರಡನೇ ವಿಶ್ವ ಯುದ್ದದಲ್ಲಿ ಜರ್ಮನರು ಜಲಾಂತರ್ಗಾಮಿಯಿಂದ ನಿಯಂತ್ರಿಸಲ್ಪಡುವ ಮಾನವಸಹಿತ ಪೆಟ್ಟಿಗೆ ಗಾಳಿಪಟ ಉಪಯೋಗಿಸುತ್ತಿದ್ದರು. ಇದೇ ವೇಳೆಯಲ್ಲಿ ಅಮೆರಿಕನರು ವಿಮಾನವನ್ನು ಹೊಡೆದುರುಳಿಸುವ ತರಬೇತಿಗಾಗಿ ಗಾಳಿಪಟವನ್ನು ಗುರಿಬಿಂದುಗಳಾಗಿ ಉಪಯೋಗಿಸುತ್ತಿದ್ದರು.
COMMENTS