Essay on Kambala in Kannada Language: In this article, we are providing ಕಂಬಳ ಬಗ್ಗೆ ಪ್ರಬಂಧ for students and teachers. Students can use this Essay on Kambala in Kannada Language to complete their homework. ಕಂಬಳ' ಎಂದರೆ ಕೋಣಗಳ ಓಟದ ಸ್ಪರ್ಧೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿಯೂ 'ಕಂಬಳ' ನಡಯುವುದುಂಟು. ಕರಾವಳಿಯಲ್ಲಿ ಮಾತ್ರ ನೋಡಲು ಸಿಕ್ಕುವ ಈ ಕ್ರೀಡೆ ಅಲ್ಲಿಯ ಗ್ರಾಮೀಣ ರೈತರಿಗೆ ಪ್ರಧಾನ ಮನರಂಜನೆ ಎನ್ನಲಡ್ಡಿಯಿಲ್ಲ.
Essay on Kambala in Kannada Language: In this article, we are providing ಕಂಬಳ ಬಗ್ಗೆ ಪ್ರಬಂಧ for students and teachers. Students can use this Essay on Kambala in Kannada Language to complete their homework.
ಕಂಬಳ ಬಗ್ಗೆ ಪ್ರಬಂಧ Essay on Kambala in Kannada Language
1.ಅರ್ಥವಿವರಣೆ 2.ಕೋಣಗಳ ಆರೈಕೆ ಹಾಗೂ ಸಾಕಾಣಿಕೆ 3.ಸಮಯ ನಿರ್ಧಾರಕ್ಕೆ ಜ್ಯೋತಿಷ್ಯ ಪೂಜೆ 4.ನಿಯಮ 5.ಬಹುಮಾನದ ನಿಯಮಗಳು 6.ಉಪಸಂಹಾರ.
ಕಂಬಳ' ಎಂದರೆ ಕೋಣಗಳ ಓಟದ ಸ್ಪರ್ಧೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿಯೂ 'ಕಂಬಳ' ನಡಯುವುದುಂಟು. ಕರಾವಳಿಯಲ್ಲಿ ಮಾತ್ರ ನೋಡಲು ಸಿಕ್ಕುವ ಈ ಕ್ರೀಡೆ ಅಲ್ಲಿಯ ಗ್ರಾಮೀಣ ರೈತರಿಗೆ ಪ್ರಧಾನ ಮನರಂಜನೆ ಎನ್ನಲಡ್ಡಿಯಿಲ್ಲ.
'ಕಂಬಳ' ನಡೆಯುತ್ತದೆ ಎಂದರೆ ಸಾಕು; ಎಲ್ಲೆಡೆಯಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ. 'ಕಂಬಳ' ಕ್ರೀಡೆಯನ್ನು ವೀಕ್ಷಿಸುವುದೊಂದು ರೋಮಾಂಚಕ ಅನುಭವ. ದೂರದ ಊರುಗಳಿಂದ ಕ್ರೀಡೆಯಲ್ಲಿ ಭಾಗವಹಿಸಲು ಕೋಣಗಳನ್ನು ಕರೆತರುತ್ತಾರೆ. 'ಕಂಬಳ' ನಡೆಯಲು ಇನ್ನೂ ದಿನಗಳಿರುವಾಗಲೇ ಎಲ್ಲೆಲ್ಲೂ ಜಾತ್ರೆಯ ವಾತಾವರಣ ಕಂಡುಬರುತ್ತದೆ. ಎಲ್ಲೆಲ್ಲೂ ಕಂಬಳದ ಬಗೆಗೆ ಮಾತುಕತೆ ನಡೆಯುತ್ತಿರುತ್ತದೆ. ನಗರ ಪ್ರದೇಶಗಳಲ್ಲಿ ಕ್ರಿಕೆಟ್ ಜ್ವರ ಬರುವಂತ ತುಳುನಾಡಿನಲ್ಲಿ 'ಕಂಬಳ ಜ್ವರ' ತೀವ್ರಗತಿಯಿಂದ ಹರಡುತ್ತದೆ.
ಕಂಬಳದಲ್ಲಿ ಓಡುವ ಕೋಣಗಳ ಮಾಹಿತಿ, ಅವುಗಳು ಎಲ್ಲೆಲ್ಲಿ ಗದ್ದಿವೆ? ಕೋಣ ಓಡಿಸುವವರಾರು? ಅವರ ಬಾಲೂಕು ಎಂಥದು? ಹಲಗೆ ಯಾವುದು ? ಹಗ್ಗದಲ್ಲಿ ಯಾವುದು? ಹೀಗೆ ಕಂಬಳದ ಬಗಗೆ ಕರಾರುವಾಕ್ಕಾಗಿ ಅಲ್ಲಿಯ ಜನರು ಹೇಳಬಲ್ಲರು. ಯಕ್ಷಗಾನ ಮತ್ತು ಕಂಬಳ ತುಳುನಾಡಿನ ಜನರಿಗೆ ಅಧಿಕ ಪ್ರಿಯವಾದವು.
ಕಂಬಳ ಕ್ರೀಡೆಯ ಹಿಂದಿರುವ ಉದ್ದೇಶ ಕೇವಲ ಮನರಂಜನೆ, ಕೆಲವೊಮ್ಮೆ ಪ್ರತಿಷ್ಠೆಯೂ ಹೌದು. ಹಿಂದ ಹೊಲಗಳನ್ನು ಉತ್ತು ಹದಮಾಡಿ ಕೋಣಗಳನ್ನು ಮನರಂಜನೆಗಾಗಿ ಓಡಿಸುತ್ತಿದ್ದರು. ಕ್ರಮೇಣ ಕಂಬಳ ಕ್ರೀಡೆಗೆ ವ್ಯವಸ್ಥಿತ ರೂಪ ಬಂದಿದೆ.
ಸಾಮಾನ್ಯವಾಗಿ ಸುಗ್ಗಿ ಕಳೆದ ಮೇಲೆ ಕಂಬಳ ನಡೆಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಂತೆ ಸಮಯ, ದಿನಾಂಕವನ್ನು ನಿರ್ಧರಿಸುತ್ತಾರೆ. ಕಂಬಳಕ್ಕೆ ಮೊದಲು ಕಂಬಳ ಗದ್ದೆಯಲ್ಲಿ ನಾಗಧ್ವಜವನ್ನು ನೆಡುತ್ತಾರೆ. ಅದಕ್ಕೆ ಹಸುವಿನ ಹಾಲಿನಲ್ಲಿ ಅಭಿಷೇಕ ಮಾಡುತ್ತಾರೆ. ಊರಿನ ಪ್ರಮುಖರು ಪ್ರಾರ್ಥನೆ ಸಲ್ಲಿಸುವ ಕಂಬಳದ ದಿನ ನಿಶ್ಚಯವಾದ ಮೇಲೆ ಹತ್ತು ಹದಿನೈದು ಮಂದಿ ಒಟ್ಟಾಗಿ ಕೋಲು ಬೆಣೆ ಬಡಿದುಕೊಂಡು ಡೋಲು ಬಾರಿಸಿ ಕುಣಿಯುತ್ತಾ ಊರಿನ ಎಲ್ಲ ಬೀದಿಗಳಲ್ಲಿ ಸುತ್ತಾಡಿ ಕಂಬಳದ ಬಗೆಗೆ ವಿಶೇಷ ಮಾಹಿತಿಯನ್ನು ನೀಡುತ್ತಾರೆ.
'ಕಂಬಲತ್ತಾಯ' ದೇವರು ಕಂಬಳ ಕ್ರೀಡೆಯ ಅಧಿದೇವತೆ. ಕಂಬಳ ನಡೆಯುವ ಗದ್ದೆಯ ಯಜಮಾನ ಮುಂಜಾನೆ ಕಂಬಳ ಗದ್ದೆಯ ಅಂಚಿನಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿ ದೇವರಿಗೆ ಬಲಿಪೂಜೆ ಸಲ್ಲಿಸುತ್ತಾನೆ. ಮಧ್ಯಾಹ್ನ ಗದ್ದೆಯ ಯಜಮಾನನ ಮನೆಯಲ್ಲಿ ಔತಣಕೂಟ ಇರುತ್ತದೆ. ಸುತ್ತಮುತ್ತಲಿನ ಹಳ್ಳಿಯವರೆಲ್ಲಾ ಅಲ್ಲಿ ಸೇರುತ್ತಾರೆ. ಕಂಬಳದ ಬಗೆಗೆ ಏನಾದರೂ ವಾದವಿವಾದಗಳಿದ್ದರೆ ಅಲ್ಲಿಯೇ ತೀರ್ಮಾನಿಸಿಕೊಳ್ಳುತ್ತಾರೆ.
ಕಂಬಳದಲ್ಲಿ ಕೆಲವು ನಿಯಮಗಳಿವೆ. ಗದ್ದೆಯಲ್ಲಿ ಇಷ್ಟೇ ನೀರು ಇರಬೇಕೆಂಬ ನಿಯಮವಿದೆ. ಟ್ರಾಕ್‌ಗಳನ್ನು ನಿಗದಿ ಮಾಡಿರಲಾಗುತ್ತದೆ. ಕೋಣಗಳು ನಿಗದಿ ಮಾಡಿದ ಟ್ರಾಕ್ಗಳಲ್ಲೇ ಓಡಬೇಕು. ಇಲ್ಲದಿದ್ದರೆ 'ಫೇಲ್' ಎಂದು ತೀರ್ಮಾನಿಸುತ್ತಾರೆ. ಕೋಣಗಳ ಓಟವನ್ನು ಸರಿಯಾಗಿ ಗಮನಿಸಿ ಗೆಲುವು-ಸೋಲು ಸೂಚಿಸಲು ತೀರ್ಪುಗಾರರು ಇರುತ್ತಾರೆ.
ನಿರ್ದಿಷ್ಟ ಸ್ಥಳದಿಂದ ನಿಶ್ಚಿತ ಗುರಿಯನ್ನು ಕಡಿಮೆ ಕಾಲದಲ್ಲಿ ಮುಟ್ಟುವುದರ ಆಧಾರದ ಮೇಲೆ ಗೆಲುವನ್ನು ನಿರ್ಧರಿಸುತ್ತಾರೆ. ಸಮಯವನ್ನು ಗುರುತಿಸಿ ಬಹುಮಾನ ನೀಡುವುದೂ ಉಂಟು. ಏಕಕಾಲದಲ್ಲಿ ಎಷ್ಟು ಬೇಕಾದರೂ ಕೋಣಗಳ ಜೊತೆಗಳನ್ನು ಓಡಿಸಬಹುದು. ತೀರ್ಪುಗಾರರು ಎಲ್ಲ ರೀತಿಯಿಂದ ಕೋಣಗಳ ನೇರ ಓಟ, ಅಂಗಸೌಷ್ಟವ, ನಡಿಗೆ ಇತ್ಯಾದಿಯನ್ನು ಗಮನಿಸಿ ಬಹುಮಾನ ಘೋಷಿಸುತ್ತಾರೆ.
ಓಟದ ಕೋಣಗಳ ಸ್ಪರ್ಧೆಯಲ್ಲಿ 'ನಿಶಾನಿ' ಅಥವಾ 'ಗೋರಿ' ಅತ್ಯಂತ ರೋಮಾಂಚಕಾರಿಯಾಗಿರುತ್ತದೆ. ನೀರು ತುಂಬಿದ ಕಂಬಳ ಗದ್ದೆಯ ಮಧ್ಯೆ ಸುಮಾರು ಮೂವತ್ತು ಅಡಿ ಎತ್ತರದಲ್ಲಿ ಕಂಬಳಕ್ಕೆ ನಿಶಾನಿ ಅಥವಾ ಬಿಳಿ ವಸ್ತ್ರವನ್ನು ಕಟ್ಟುತ್ತಾರೆ. ಯಾವ ಜೋಡಿ ನಿಶಾನಿಗೆ ನೀರು ಚಿಮ್ಮಿಸಲು ಸಮರ್ಥವಾಗುವುದೋ ಆ ಜೋಡಿ ಗೆಲ್ಲುತ್ತದೆ.
ಇದಕ್ಕೆ ಓಡುವ ಕೋಣಗಳಿಗಿಂತ ಅಧಿಕ ಬುದ್ದಿವಂತಿಕೆ, ಚಾತುರ್ಯ, ಸಾಮರ್ಥ್ಯ ಮತ್ತು ಶಕ್ತಿ ಓಟಗಾರನಲ್ಲಿರಬೇಕು. ತುದಿ ಮುಟ್ಟುವ ಕೋಣಗಳ ಚಾಲಕ ಅವುಗಳ ಹಿಂದಿನಿಂದ ಓಡಿಬರುತ್ತಾನೆ. ಆದರೆ ನಿಶಾನಿ ಕಂಬಳದಲ್ಲಿ ಅಥವಾ ಹಲಗೆ ಕಂಬಳದಲ್ಲಿ ಆತ ಕೋಣಗಳಿಗೆ ಕಟ್ಟಿದ ಸುಮಾರು ಒಂದೂವರೆ ಅಡಿ ಅಗಲದ ಹಲಗೆಯ ಮೇಲು ಅಂಚಿನಲ್ಲಿ ಒಂಟಿ ಕಾಲಿನಲ್ಲಿ ನಿಂತಿರುತ್ತಾನೆ. ಇದು ನಿಜವಾಗಿಯೂ ಕಠಿಣ. ಇದಕ್ಕೆ ಸತತ ಅಭ್ಯಾಸಬೇಕು.
ಇಲ್ಲಿ ಬಹುಮಾನಕ್ಕಿಂತ ಹೆಚ್ಚಾಗಿ ಜನರ ಜಯಘೋಷವೇ ಮುಖ್ಯ. ಪ್ರಶಂಸೆಗೆ ಅಧಿಕ ಬೆಲೆ. ಗೆದ್ದವರಿಗೆ ಸಾಂಪ್ರದಾಯಿಕವಾಗಿ ಒಂದು ಗೊನೆ ಪಕ್ವವಾದ ಬಾಳೆಹಣ್ಣು, ಎಳನೀರಿನ ಒಂದು ಗೊನೆ, ವೀಳೆದೆಲೆ ಪಟ್ಟಿ ಕೊಡುತ್ತಾರೆ. ಇತ್ತೀಚೆಗೆ ಬೆಳ್ಳಿ, ಚಿನ್ನದ ಪದಕ ಕೊಡುತ್ತಾರೆ. ನಗದು ಬಹುಮಾನ ಕೊಡುವುದೂ ಉಂಟು.
ಕಟ್ಟಾಳುಗಳು ಮತ್ತು ಕೊಬ್ಬಿದ ಕೋಣಗಳು ಮಾತ್ರ ಭಾಗವಹಿಸಲು ಸಾಧ್ಯವಿರುವ 'ತುಳುನಾಡಿನ ವಿಶಿಷ್ಟ ಕ್ರೀಡೆ ಕಂಬಳ' ಇದು ಜನತೆಯ ಹೃದಯಕ್ಕೆ ಮಿಗಿಲಾದ ಆನಂದವನ್ನು ನೀಡುತ್ತದೆ.
Read also :
Read also :
COMMENTS