Essay on Health in Kannada Language : In this article, we are providing ಆರೋಗ್ಯ ಪ್ರಬಂಧ for students and teachers. Students can use this Es...
Essay on Health in Kannada Language: In this article, we are providing ಆರೋಗ್ಯ ಪ್ರಬಂಧ for students and teachers. Students can use this Essay on Health in Kannada Language to complete their homework.
ಆರೋಗ್ಯ ಪ್ರಬಂಧ Essay on Health in Kannada Language
1. ಅರ್ಥ ವಿವರಣೆ 2. ಆಹಾರ , ಪ್ರೋಟೀನುಗಳು 4. ಕೊಬ್ಬು 4. ಶರ್ಕರಪಿಷ್ಟ 6.ಖನಿಜಗಳು 7. ಉಪಸಂಹಾರ.
“ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿರಸ್ತು” ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. ಆರೋಗ್ಯವೇ ಭಾಗ್ಯ'-ಎಂಬ ನಾಣ್ಣುಡಿ ಇದೆ. ಇವು ಆರೋಗ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತವೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸಿಗಿಂತ ಬೇರೆ ಭಾಗ್ಯವಿಲ್ಲ.
ಆರೋಗ್ಯವೆಂದಾಗ ಕೇವಲ ರೋಗರಹಿತ ಅಥವಾ ದೈಹಿಕ ನ್ಯೂನತೆಗಳಿಲ್ಲದ ಸ್ಥಿತಿಯಲ್ಲ. ಇದು ಭೌತಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿ. ಮನುಷ್ಯನ ಅಂಗಾಂಗಗಳಲ್ಲ ಸರಿ ಇದ್ದು, ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದು ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ. ಸ್ಮರಣಶಕ್ತಿ, ಆಲೋಚನೆ, ಸಹಜ ನಡವಳಿಕೆಯ ಸ್ವಭಾವಗಳಿದ್ದರೆ ಅದು ಮಾನಸಿಕ ಆರೋಗ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಹೊಂದಿರುವವನೇ ಆರೋಗ್ಯವಂತ. ಇವನು ಸದಾ ಚಟುವಟಿಕೆಯಿಂದ ಕೂಡಿರುತ್ತಾನೆ.
ಆದ್ದರಿಂದ ದೇಹದ ಪ್ರತಿಯೊಂದು ಅಂಗವೂ ಚಟುವಟಿಕೆಯಿಂದಿರುವಂತ ಕೆಲಸ ಮಾಡಬೇಕು. ಆಹಾರ, ವಸತಿ, ನೈರ್ಮಲ್ಯ, ವಾತಾವರಣ, ದುಡಿಮ, ಉಡುಪು, ಚಟ, ಮನೋರಂಜನೆ ಮುಂತಾದ ಸಂಗತಿಗಳು ಮನುಷ್ಯನ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳು.
ಆಹಾರ:- ನಮ್ಮ ಎಲ್ಲಾ ಚಟುವಟಿಕೆಗಳಿಗೂ ಆಹಾರ ಪೋಷಕಾಂಶವೇ ಮೂಲ. ನಮಗೆ ಚೈತನ್ಯವನ್ನು ಒದಗಿಸುವುದು ನಾವು ತಿನ್ನುವ ಆಹಾರ. ಅಲ್ಲದೆ ದೇಹದ ಅಂಗಾಂಶಗಳು, ಜೀವಕಣಗಳು ಸವೆಯುತ್ತವೆ. ಇವುಗಳನ್ನು ಸರಿಪಡಿಸುವ ಕೆಲಸವನ್ನು ಆಹಾರದ ಪೋಷಕ ವಸ್ತುಗಳು ಮಾಡುತ್ತವೆ. ದೇಹವನ್ನು ಕಟ್ಟುವ ಕೆಲಸವನ್ನು ಪ್ರೋಟೀನು ಮತ್ತು ಕ್ಯಾಲ್ಸಿಯಂ, ಶಕ್ತಿಯನ್ನು ನೀಡುವ ಕೆಲಸವನ್ನು ಶರ್ಕರಪಿಷ್ಟ, ಕೊಬ್ಬು ಮತ್ತು ಪ್ರೋಟೀನುಗಳು, ಶಕ್ತಿ ಮತ್ತು ಬೆಳವಣಿಗೆಯನ್ನು ಪ್ರಚೋದಿಸುವ ಕೆಲಸವನ್ನು ಜೀವಸತ್ವ ಮತ್ತು ಖನಿಜಗಳು ಮಾಡುತ್ತವೆ. ಪ್ರೋಟೀನುಗಳು:- ಸಸ್ಯಗಳನ್ನು ಮತ್ತು ಸಸ್ಯಾಹಾರ ಸೇವಿಸುವುದರ ಮೂಲಕ ಇವನ್ನು ಪಡೆಯಬಹುದು. ಅಲ್ಲದೆ ಪ್ರಾಣಿಜನ್ಯ ವಸ್ತುಗಳಿಂದಲೂ ಪಡೆಯಬಹುದು. ಮಾಂಸ, ಮೀನು, ಹಾಲು, ಮೊಟ್ಟೆ, ದ್ವಿದಳಧಾನ್ಯ ಇವುಗಳಲ್ಲಿ ಬೇರೆ ಬೇರೆ ರೀತಿಯ ಪ್ರೋಟೀನುಗಳಿರುತ್ತವೆ.
ಕೊಬ್ಬು:- ಇದು ಪ್ರಾಣಿ ಮತ್ತು ಸಸ್ಯಜನ್ಯ ಆಹಾರದಿಂದ ದೊರೆಯುತ್ತದೆ. ಮೀನು, ಮಾಂಸ, ಮೊಟ್ಟೆ, ಹಾಲು, ಬೆಣ್ಣೆ, ಗಿಣ್ಣು ಇವು ಪ್ರಾಣಿಜನ್ಯ ಕೊಬ್ಬಿನ ಮೂಲ. ತೆಂಗಿನಕಾಯಿ, ನೆಲಗಡಲೆ, ಕೊಬ್ಬರಿ, ಎಳ್ಳು ಇವುಗಳಿಂದ ದೊರೆಯುವ ಎಣ್ಣೆ ಸಸ್ಯಜನ್ಯ ಕೊಬ್ಬಿನ ಮೂಲ.
ಶರ್ಕರಪಿಷ್ಟ:- ಇದು ಅಕ್ಕಿ, ರಾಗಿ, ಗೋಧಿ, ಜೋಳ, ಬಾರ್ಲಿ, ಸಜ್ಜೆ ಇವುಗಳಲ್ಲಿ ವಿಪುಲವಾಗಿರುತ್ತದೆ. ಮಾಗದ ಹಣ್ಣುಗಳು, ಆಲೂಗಡ್ಡೆ, ಬಟಾಣಿ, ಹುರುಳಿ, ಬೇಳೆಕಾಳುಗಳಲ್ಲಿ ಇದು ಸಾಕಷ್ಟ ಪ್ರಮಾಣದಲ್ಲಿರುತ್ತದೆ. ಪಿಷ್ಟದಿಂದ ಸಿದ್ದಗೊಳಿಸಲ್ಪಡುವ ಗ್ಲಕೋಸ್, ಜೇನು, ಮಾಗಿದ ಹಣ್ಣುಗಳಲ್ಲಿ ಇರುತ್ತದೆ.
ಖನಿಜಗಳು:- ದೇಹದ ವಿವಿಧ ಅಂಗಗಳ ಮೇಲೆ ಪ್ರಭಾವಬೀರುವ ಕ್ಯಾಲ್ಸಿಯಂ, ಮಜ್ಜಿಗೆ, ಗಿಣ್ಣ ಕೋಸುಗೆಡ್ಡೆ, ಹುರುಳಿ, ದಂಟು, ಮೆಂತೆಸೊಪ್ಪು, ನುಗ್ಗೆಕಾಯಿ, ಮರಗೆಣಸು, ರಾಗಿ, ಎಳ್ಳು, ಮೊಟ್ಟೆಗಳಲ್ಲಿ ದೊರೆಯುತ್ತದೆ. ಕ್ಯಾಲ್ಸಿಯಂ ಜೊತೆಗೆ ಬೇಕಾದ ರಂಜಕವು ಹಾಲು, ಮಾಂಸ, ಮೊಟ್ಟೆ, ದ್ವಿದಳ ಧಾನ್ಯಗಳಲ್ಲಿ ವಿಪುಲವಾಗಿ ಸಿಗುವುದು ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಮತ್ತು ರಂಜಕ ಬೇಕು.
ದೇಹದ ಕೋಶಿಕೆಗಳನ್ನು ಭದ್ರಪಡಿಸಲು ಕಬ್ಬಿಣ ಬೇಕು. ಇದು ಹಸಿರು ಎಲೆ, ತರಕಾರಿ, ರಾಗಿ, ಮೊಟ್ಟೆಯ ಹಳದಿ, ಮಾಂಸ, ದ್ವಿದಳ ಧಾನ್ಯ ಇವುಗಳಲ್ಲಿ ದೊರೆಯುತ್ತದೆ. ಹುರುಳಿಕಾಯಿ, ಬಟಾಣಿ, ಪಾಲಕಸೊಪ್ಪಿನಲ್ಲಿ ವಿಪುಲವಾಗಿರುತ್ತದೆ.
ದೇಹದ ಬೆಳವಣಿಗೆಗೆ ಮತ್ತು ಬುದ್ಧಿಯ ಬೆಳವಣಿಗೆಗೆ ಬೇಕಾದ ಅಯೊಡಿನ್ ಕುಡಿಯುವ ನೀರಿನಲ್ಲಿ ಲಭಿಸುತ್ತದೆ. ಉಪ್ಪು ನೀರು ಮೀನು, ಕಡಲ ಮೀನು, ಚಿಪ್ಪು ಮೀನುಗಳಲ್ಲಿ ಅಯೋಡಿನ್ ಇದೆ. ಫ್ಲೋರಿನ್ ನೀರು, ಮೀನು, ಒಣಗಿದ ಧಾನ್ಯಗಳಲ್ಲೂ ಸಿಗುವುದು. ಸೋಡಿಯಂ ಮತ್ತು ಪೊಟಾಸಿಯಂ, ತರಕಾರಿ ಮತ್ತು ಹಣ್ಣುಗಳಲ್ಲಿ ದೊರೆಯುವುದು. ಉಪ್ಪಿನಲ್ಲಿ ಸಹ ವಿಪುಲವಾಗಿರುತ್ತದೆ.
ಸಮತೋಲನ ಆಹಾರ:- ನಮ್ಮ ದೇಹದ ಬೇಡಿಕೆಗೆ ಅನುಗುಣವಾಗಿ, ದೇಹದ ಕಾರ್ಯ ಚಟುವಟಿಕೆಗಳಿಗೆ ಬೇಕಾದ ಎಲ್ಲ ಪೌಷ್ಟಿಕಾಂಶಗಳನ್ನೂ ಒಳಗೊಂಡ ಆಹಾರವೇ ಸಮತೋಲನ ಆಹಾರ. ಒಬ್ಬ ವಯಸ್ಕನು ತನ್ನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು 400 ಗ್ರಾಂ ಧಾನ್ಯ, 70 ಗ್ರಾಂ ಬೇಳೆ, 100 ಗ್ರಾಂ ಎಲೆ ತರಕಾರಿ, 85ಗ್ರಾಂ ಕಾಯಿಪಲ್ಲೆ 57 ಗ್ರಾಂ ಹಣ್ಣು, 170ಗ್ರಾಂ ಹಾಲು, 57 ಗ್ರಾಂ ಸಕ್ಕರೆ, 28 ಗ್ರಾಂ ಸಸ್ಯ ಜನ್ಯ ಎಣ್ಣೆ 28 ಗ್ರಾಂ ಮಾಂಸ, ಮೀನು ಮತ್ತು ಮೊಟ್ಟೆಯನ್ನು ಸೇವಿಸಬೇಕು.
COMMENTS