ಹವ್ಯಾಸ ಪ್ರಬಂಧ Essay on Havyasa in Kannada Language ಬಿಡುವಿನ ವೇಳೆಯಲ್ಲಿ ಆಸಕ್ತಿಯಿಂದ ಮಾಡುವಂಥ, ಮನೋಲ್ಲಾಸ ನೀಡುವ ಹಾಗೂ ಲಾಭದಾಯಕವಾಗುವಂಥದು ಹವ್ಯಾಸ. ಆಸಕ್ತಿ ಕೆರಳಿಸುವ ಯಾವುದೇ ಸಂದರ್ಭ ಅಥವಾ ಸನ್ನಿವೇಶ ಉತ್ತಮ ಹವ್ಯಾಸಕ್ಕೆ ಎಡೆ ಮಾಡಬಹುದು. ಹುಟ್ಟಿದ ಹಬ್ಬ ಅಥವಾ ಹೊಸ ವರ್ಷಕ್ಕೆಂದು ಬಂದ ಕಾಣಿಕೆ, ಸಾಗರ ತೀರ ಪ್ರದೇಶದಲ್ಲಿರುವ ಸುಂದರ ಚಿಪ್ಪುಗಳು, ವಸ್ತುಪ್ರದರ್ಶನದಲ್ಲಿರುವ ವಿಮಾನಗಳ ಮಾದರಿ-ಇವುಗಳನ್ನು ಪಡೆದವನಿಗೆ, ಕಂಡವನಿಗೆ, ಸಂಬಂಧಿಸಿದ ಹವ್ಯಾಸದಲ್ಲಿ ಆಸಕ್ತಿ ಉಂಟಾಗಬಹುದು. ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಹಡಗು-ವಿಮಾನಗಳ ಮಾದರಿ ತಯಾರಿ, ಮರಗೆಲಸ-ಇಂಥದೇ ಹವ್ಯಾಸ ತಮಗೆ ಒಗ್ಗುತ್ತದೆಂದು ನಿರ್ಧರಿಸಿದ ಮೇಲೆ, ಹಿರಿಯರ ಅನುಮತಿ ಪಡೆದು ಅದನ್ನು ಮುಂದುವರಿಸಬಹುದು.
Essay on Havyasa in Kannada Language: In this article, we are providing ಹವ್ಯಾಸ ಪ್ರಬಂಧ for students and teachers. Students can use this Essay on Havyasa in Kannada Language to complete their homework.
ಹವ್ಯಾಸ ಪ್ರಬಂಧ Essay on Havyasa in Kannada Language
1.ಹವ್ಯಾಸ ಎಂದರೇನು 2, ಹೊಸಬರಿಗೆ ಮಾರ್ಗದರ್ಶನ.ಕರಕೌಶಲ್ಯದ ಅಗತ್ಯ 4. ಆಧುನಿಕ ಕಾಲದ ಹವ್ಯಾಸಗಳು 5. ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾದ ಹವ್ಯಾಸಗಳು
ಬಿಡುವಿನ ವೇಳೆಯಲ್ಲಿ ಆಸಕ್ತಿಯಿಂದ ಮಾಡುವಂಥ, ಮನೋಲ್ಲಾಸ ನೀಡುವ ಹಾಗೂ ಲಾಭದಾಯಕವಾಗುವಂಥದು ಹವ್ಯಾಸ. ಆಸಕ್ತಿ ಕೆರಳಿಸುವ ಯಾವುದೇ ಸಂದರ್ಭ ಅಥವಾ ಸನ್ನಿವೇಶ ಉತ್ತಮ ಹವ್ಯಾಸಕ್ಕೆ ಎಡೆ ಮಾಡಬಹುದು. ಹುಟ್ಟಿದ ಹಬ್ಬ ಅಥವಾ ಹೊಸ ವರ್ಷಕ್ಕೆಂದು ಬಂದ ಕಾಣಿಕೆ, ಸಾಗರ ತೀರ ಪ್ರದೇಶದಲ್ಲಿರುವ ಸುಂದರ ಚಿಪ್ಪುಗಳು, ವಸ್ತುಪ್ರದರ್ಶನದಲ್ಲಿರುವ ವಿಮಾನಗಳ ಮಾದರಿ-ಇವುಗಳನ್ನು ಪಡೆದವನಿಗೆ, ಕಂಡವನಿಗೆ, ಸಂಬಂಧಿಸಿದ ಹವ್ಯಾಸದಲ್ಲಿ ಆಸಕ್ತಿ ಉಂಟಾಗಬಹುದು. ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಹಡಗು-ವಿಮಾನಗಳ ಮಾದರಿ ತಯಾರಿ, ಮರಗೆಲಸ-ಇಂಥದೇ ಹವ್ಯಾಸ ತಮಗೆ ಒಗ್ಗುತ್ತದೆಂದು ನಿರ್ಧರಿಸಿದ ಮೇಲೆ, ಹಿರಿಯರ ಅನುಮತಿ ಪಡೆದು ಅದನ್ನು ಮುಂದುವರಿಸಬಹುದು.
ಮನೆಯವರ ಆದಾಯ ತಾನು ಆರಿಸುವ ಹವ್ಯಾಸಕ್ಕೆ ಸರಿ ಹೊಂದಬಲ್ಲದೆ ಎಂದು ಮೊದಲು ಯೋಚಿಸಬೇಕು. ತನ್ನಂತೆಯೇ ಆಸಕ್ತಿಯಿರುವ ಸ್ನೇಹಿತನ ಜೊತೆ ಸೇರಿ ಆರಂಭಿಸಿದರೆ ವೆಚ್ಚ ಕಡಿಮೆಯಾಗುತ್ತದೆ.
ವಸ್ತುಗಳ ತಯಾರಿ, ವಸ್ತುಗಳ ಸಂಗ್ರಹಣೆ ಮತ್ತು ಕಲಿಕೆ-ಹೀಗೆ ಹವ್ಯಾಸಗಳನ್ನು ಮೂರು ಮುಖ್ಯ ವಿಧಗಳಾಗಿ ವರ್ಗಿಕರಿಸಬಹುದು. ಮನೆಯ ಹಿಂದೆ ಕೊಂಚ ಸ್ಥಳವಿದ್ದರೆ ತೋಟಗಾರಿಕೆ ಆರಂಭಿಸಬಹುದು. ಹೂಗಿಡ, ತರಕಾರಿ ಬೆಳೆಯಬಹುದು. ನೃತ್ಯ, ಹೈಕಿಂಗ್, ಜೂಡೋ, ಈಜು, ಕುಸ್ತಿ ಮುಂತಾದ ಕ್ರಿಯೆಗಳು ವಿದ್ಯಾರ್ಥಿ ತಾನಾಗಿ ಕಲಿಯಬಲ್ಲ ಹವ್ಯಾಸಗಳು, ಸಂಗೀತ, ಚಿತ್ರಕಲೆ, ಶಿಲ್ಪ ಮೊದಲಾದ ಲಲಿತ ಕಲೆಗಳು ಉತ್ತಮ ಹವ್ಯಾಸಗಳು, ಸಾಬೂನು ಅಥವಾ ಮೇಣದ ತುಂಡಿನಿಂದ ಮೂರ್ತಿಗಳನ್ನು ಮಾಡುವುದು, ದೋಣಿ ಕಟ್ಟುವಿಕೆ, ಮಾದರಿ ತಯಾರಿ, ಆಭರಣ ಮಾಡುವುದು, ಛಾಯಾಚಿತ್ರಣ-ಈ ಹವ್ಯಾಸಗಳಿಗೆ ಕರಕೌಶಲ್ಯ ಅಗತ್ಯ.
ಅಂಚೆಚೀಟಿ ಮತ್ತು ನಾಣ್ಯಗಳಂತೆಯೇ ಅನೇಕ ಸಂಗ್ರಹ ಯೋಗ್ಯವಸ್ತುಗಳು ನಮ್ಮ ಕಣ್ಣಿಗೆ ಬೀಳಬಹುದು. ಕಲ್ಲು, ಖನಿಜ, ಗುಂಡಿ, ಪುರಾತನ ವಸ್ತು. ಪ್ರಸಿದ್ಧ ಪುರುಷರು ಬಳಸುತ್ತಿದ್ದ ಸಾಮಾನುಗಳು, ಗಂಟೆ, ಪುಸ್ತಕಗಳು ಪ್ರಸಿದ್ಧ ಚಿತ್ರಕಾರರ ಕೃತಿಗಳು, ಬಾಟಲಿ, ಬೊಂಬೆ, ದೀಪೆ, ಬೀಗ ಮತ್ತು ಕೈಗಳು, ಸಂಗೀತ ವಾದ್ಯಗಳು, ಗ್ರಾಮಾಫೋನ್ ರಿಕಾರ್ಡುಗಳು, ಇಸ್ಪೀಟು ಎಲೆಗಳು, ಆಟದ ಸಾಮಾನುಗಳು - ಇವುಗಳ ಸಂಗ್ರಹ ನಮಗೆ ಅಮೂಲ್ಯ ಎನಿಸಬಹುದು.
ಇತ್ತೀಚಿಗೆ ವಿಜ್ಞಾನ, ಎಂಜಿನಿಯರಿಂಗ್‌ಗಳ ಪ್ರಗತಿಯಿಂದ ಹೊಸ ಹೊಸ ಹವ್ಯಾಸಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಸರಳ ರೇಡಿಯೋ ಗ್ರಾಹಗಳನ್ನು ಜೋಡಿಸುವುದು, ಗೃಹ ವಿದ್ಯುದೀಕರಣಕ್ಕೆ ತಂತಿ ಹಾಕುವುದು, ದೂರದರ್ಶಕ-ಸೂಕ್ಷ್ಮದರ್ಶಕಗಳ ತಯಾರಿ, ತಾವೇ ಖುದ್ದಾಗಿ ಸಿದ್ಧಪಡಿಸಿದ ದೂರದರ್ಶಕಗಳಿಂದ ನಕ್ಷತ್ರ ವಿಕ್ಷಣೆ ಮಾಡುವ ಹವ್ಯಾಸಿಗಳು ಇದ್ದಾರೆ. ಕೃತಕ ಉಪಗ್ರಹಗಳು ಕಳಿಸುವ ಸಂದೇಶ, ಫೋಟೋಗಳನ್ನು ಪಡೆಯಲು ಆಂಟೆನಾಗಳನ್ನು ತಯಾರಿಸುವ ಎಲೆಕ್ಟ್ರಾನಿಕ್ಸ್ ಹವ್ಯಾಸಿಗಳು ವಿದೇಶಗಳಲ್ಲಿದ್ದಾರೆ.
ತೋಟಗಾರಿಕೆ, ಬೊಂಬೆ ತಯಾರಿಕೆ, ಮರಗೆಲಸ, ಪದರ ಹಲಗೆಗಳಲ್ಲಿ ಗರಗಸದಿಂದ ಕೊಯ್ದು ಬಗೆಬಗೆಯ ವಿನ್ಯಾಸಗಳನ್ನು ತಯಾರಿಸುವುದು-ಇತ್ಯಾದಿ ದೇಹಕ್ಕೆ ವ್ಯಾಯಾಮ, ಉಲ್ಲಾಸಗಳನ್ನು ನೀಡುತ್ತವೆ. ಇಂಥ ಉಪಯುಕ್ತ ಹವ್ಯಾಸಗಳಿಂದ ಸಮಯದ ಸದುಪಯೋಗದ ಜೊತೆಗೆ ಬುದ್ದಿ ವಿಕಾಸ ಹಾಗೂ ಆರ್ಥಿಕ ಲಾಭ ಆಗುವುದು.
COMMENTS