ಕಂಪ್ಯೂಟರ್ ಬಗ್ಗೆ ಪ್ರಬಂಧ Essay on Computer in Kannada Language: ಆಧುನಿಕ ಯುಗದ ವೈಜ್ಞಾನಿಕ ವಿಸ್ಮಯಗಳಲ್ಲಿ ಕಂಪ್ಯೂಟರ್ ಒಂದಾಗಿದೆ. ಇದು ಹಲವಾರು ವಿಧಗಳಲ್ಲಿ ಮಾನವನಿಗೆ ಸಹಾಯಕ. ಆಕಾಶದಲ್ಲಿ ಧಾವಿಸುವ ರಾಕೆಟ್ಟಿನ ದಿಕ್ಕು ಮತ್ತು ದೂರಗಳ ನಿಖರತೆ ಕಂಪ್ಯೂಟರಿನಿಂದ ಗೊತ್ತಾಗುತ್ತದೆ. ರಾಕೆಟ್ ಯಾವ ದಾರಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಕಂಪ್ಯೂಟರಿನ ನೆನಪಿನಲ್ಲಿರುತ್ತದೆ. ರಾಕೆಟ್ಟಿಗೆ ಕಂಪ್ಯೂಟರಿನಿಂದ ಸೂಚನೆಗಳು ಸಾಗುತ್ತವೆ. ಈ ಸೂಚನೆಗಳಿಗೆ ಅನುಸಾರವಾಗಿ ರಾಕೆಟ್ಟಿನ ನಿಯಂತ್ರಣ ವ್ಯವಸ್ಥೆಗಳು ಸಾಗುತ್ತವೆ. ಇದರಲ್ಲಿ ಕಂಪ್ಯೂಟರ್ ಯಂತ್ರದ್ದೇ ಮುಖ್ಯ ಪಾತ್ರ. ತನಗೆ ಒದಗುವ ದತ್ತಾಂಶಗಳ ಆಧಾರದ ಮೇಲೆ ಗಣಿತದ ಕೆಲಸಗಳನ್ನು ತಾನೇ ತಾನಾಗಿ ನಡೆಸುವ ಯಂತ್ರ ಕಂಪ್ಯೂಟರ್,
Essay on Computer in Kannada Language: In this article, we are providing ಕಂಪ್ಯೂಟರ್ ಬಗ್ಗೆ ಪ್ರಬಂಧ for students and teachers. Students can use this Essay on Computer in Kannada Language to complete their homework.
ಕಂಪ್ಯೂಟರ್ ಬಗ್ಗೆ ಪ್ರಬಂಧ Essay on Computer in Kannada Language
1.ಕಂಪ್ಯೂಟರ್ ನಡೆದುಬಂದ ದಾರಿ 2.ವಿಜ್ಞಾನ ವಿಸ್ಮಯ 3.ಕಂಪ್ಯೂಟರ್ ಬಳಕೆ 4ಉಪಯೋಗಗಳು 5. ಉಪಸಂಹಾರ
ಆಧುನಿಕ ಯುಗದ ವೈಜ್ಞಾನಿಕ ವಿಸ್ಮಯಗಳಲ್ಲಿ ಕಂಪ್ಯೂಟರ್ ಒಂದಾಗಿದೆ. ಇದು ಹಲವಾರು ವಿಧಗಳಲ್ಲಿ ಮಾನವನಿಗೆ ಸಹಾಯಕ. ಆಕಾಶದಲ್ಲಿ ಧಾವಿಸುವ ರಾಕೆಟ್ಟಿನ ದಿಕ್ಕು ಮತ್ತು ದೂರಗಳ ನಿಖರತೆ ಕಂಪ್ಯೂಟರಿನಿಂದ ಗೊತ್ತಾಗುತ್ತದೆ. ರಾಕೆಟ್ ಯಾವ ದಾರಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಕಂಪ್ಯೂಟರಿನ ನೆನಪಿನಲ್ಲಿರುತ್ತದೆ. ರಾಕೆಟ್ಟಿಗೆ ಕಂಪ್ಯೂಟರಿನಿಂದ ಸೂಚನೆಗಳು ಸಾಗುತ್ತವೆ. ಈ ಸೂಚನೆಗಳಿಗೆ ಅನುಸಾರವಾಗಿ ರಾಕೆಟ್ಟಿನ ನಿಯಂತ್ರಣ ವ್ಯವಸ್ಥೆಗಳು ಸಾಗುತ್ತವೆ. ಇದರಲ್ಲಿ ಕಂಪ್ಯೂಟರ್ ಯಂತ್ರದ್ದೇ ಮುಖ್ಯ ಪಾತ್ರ. ತನಗೆ ಒದಗುವ ದತ್ತಾಂಶಗಳ ಆಧಾರದ ಮೇಲೆ ಗಣಿತದ ಕೆಲಸಗಳನ್ನು ತಾನೇ ತಾನಾಗಿ ನಡೆಸುವ ಯಂತ್ರ ಕಂಪ್ಯೂಟರ್,
ಮೊದಲಿಗೆ ವಸ್ತು ಮತ್ತು ಘಟನೆಗಳನ್ನು ಎಣಿಸಲು ಮಾನವ ಕೈ ಬೆರಳುಗಳನ್ನು ಎಣಿಸುತ್ತಿದ್ದ. ಮುಂದೆ ಮರಳಿನಲ್ಲಿ ಸಾಲಾಗಿ ಕಲ್ಲುಗಳನ್ನು ಜೋಡಿಸಿ, ತಂತಿಗಳ ಮೇಲೆ ಮಣಿಗಳನ್ನು ತೂರಿಸಿದ ಮಣಿ ಚೌಕಟ್ಟು ಬಳಸಿ ಎಣಿಕೆ ಮಾಡುತ್ತಿದ್ದ. ಸಂಖ್ಯೆಗಳನ್ನು ಉದ್ದುದ್ದಕ್ಕೆ ಜೋಡಿಸುವ ಯಾಂತ್ರಿಕ ಕೆಲಸವನ್ನು ಯಂತ್ರವೇ ಮಾಡಬಹುದೆಂಬುದನ್ನು ಫ್ರಾನ್ಸಿನ ಬ್ಲಸ್ ಪಾಸ್ಕಲ್ (1623-62) ಯೋಚಿಸಿ ಯಂತ್ರವೊಂದನ್ನು ರಚಿಸಿದ. ಅನಂತರ ಜರ್ಮನಯ ಲೀಸ್ಟೆಜ್ (1647-1716) ಉತ್ತಮ ತರದ ಗಣಕಯಂತ್ರ ರಚಿಸಿದ. ಅನಂತರ ಇಂಗ್ಲೆಂಡಿನ ರ್ಚಾಲ್ಡ್ ಜಾಬೇಜ್ (1799-1871) ಎಂಬಾತ ಇಂದಿನ ಕಂಪ್ಯೂಟರನ್ನು ಹೋಲುವ ಗಣಕಯಂತ್ರ ರಚಿಸಿದ. 20ನೇ ಶತಮಾನದಲ್ಲಿ ಎಲೆಕ್ಟ್ರಾನಿಕ್ ವಿಧಾನಗಳಿಂದ ಅತಿ ಶೀಘ್ರ ಲೆಕ್ಕಾಚಾರ ಮಾಡುವ ಗಣಕಯಂತ್ರಗಳ-ಕಂಪ್ಯೂಟರುಗಳ ನಿರ್ಮಾಣವಾಯಿತು. * ಕಂಪ್ಯೂಟರುಗಳಲ್ಲಿ ಎರಡು ಬಗೆ: ಅಂಕನ ಕಂಪ್ಯೂಟರ್ ಮತ್ತು ಸಾದೃಶ ಕಂಪ್ಯೂಟರ್, ಅಂಕನ ಕಂಪ್ಯೂಟರ್, ಸಂಖ್ಯೆ ಅಥವಾ ಅಕ್ಷರಗಳ ಸಹಾಯದಿಂದ ಪ್ರಶ್ನೆಗೆ ಉತ್ತರ ಕಂಡುಹಿಡಿಯುತ್ತದೆ. ಸಾದೃಶ ಕಂಪ್ಯೂಟರ್ ವಿದ್ಯುತ್ ವಿಭವ, ಬಲ-ಇತ್ಯಾದಿ ಬಳಕೆಗೆ ಸಿಲುಕದ ಪರಿಮಾಣಗಳಿಂದ ಕೆಲಸ ಮಾಡುತ್ತದೆ.
ಕಾರು, ಸ್ಕೂಟರು ಮುಂತಾದ ವಾಹನಗಳ ವೇಗ ಸೂಚಿಸಲು ಮಾಪಕಗಳಿರುತ್ತವೆ. ಚಕ್ರ ತಿರುಗುವ ವೇಗಕ್ಕೆ ಅನುಗುಣವಾಗಿ ಮಾಪಕದಲ್ಲಿ ಕಾಂತ ಕ್ಷೇತ್ರದ ತೀವ್ರತೆ ಹೆಚ್ಚು-ಕಡಿಮೆ ಆಗುತ್ತದೆ. ಅಂಕನ ವಿಧಾನದಲ್ಲಿ ಬಿಡಿಬಿಡಿ ಅಂಶಗಳು ಲೆಕ್ಕಾಚಾರದಲ್ಲಿ ಬಂದರೆ ಸಾದೃಶ ವಿಧಾನದಲ್ಲಿ ಗಣನೆಗೆ ಬರುವ ಅಂಶಗಳು ಅವಿಚ್ಛಿನ್ನವಾಗಿರುತ್ತವೆ. ಸಾದೃಶ ಕಂಪ್ಯೂಟರುಗಳು ಅಂಕನ ಕಂಪ್ಯೂಟರುಗಳಿಗಿಂತ ಸರಳ. ಆದರೆ ಅಂಕನ ಕಂಪ್ಯೂಟರುಗಳು ಹೆಚ್ಚು ನಿಖರವಾದವು.
ಕಂಪ್ಯೂಟರುಗಳು ಕೆಲಸ ಮಾಡಲು ವಿದ್ಯುತ್ ಬೇಕು. ಈ ವಿದ್ಯುತ್ ಬೇಕೆಂದಾಗ ಸ್ವಲ್ಪ ಕಾಲ ನಿಲ್ಲುತ್ತದೆ. ಮತ್ತೊಂದು ಕ್ಷಣದಲ್ಲಿ ಹರಿಯುತ್ತದೆ. ಈ ಎರಡು ಸ್ಥಿತಿಗಳನ್ನೇ ಸಂಖ್ಯಾಂಕಗಳಾಗಿ ಬಳಸಬಹುದು. ಈ ಎರಡು ಸಂಖ್ಯಾಂಕಗಳಿಂದ ಲೆಕ್ಕಾಚಾರ ಮಾಡುವುದನ್ನು 'ದ್ವಿಮಾನ ಪದ್ಧತಿ' ಎನ್ನುವರು. ಕಂಪ್ಯೂಟರ್1, 0 ರೂಪದ ದ್ವಿಮಾನ ಸಂಕೇತಗಳನ್ನು X, Y ರೀತಿಯ ಬೀಜಗಣಿತದ ನಿರೂಪಣೆಯನ್ನಾಗಿ ಗ್ರಹಿಸುತ್ತದೆ. ಅದು ನೀಡುವ ಉತ್ತರ x, yಗಳನ್ನು ಒಳಗೊಂಡ ಬೀಜಗಣಿತದ ರೀತಿಯಲ್ಲೇ ಇರುತ್ತದೆ.
ಲಿಪಿಯಲ್ಲಿರುವ ಬರವಣಿಗೆ ಕಂಪ್ಯೂಟರಿನ ದ್ವಿಮಾನ ಪದ್ಧತಿಯ ಭಾಷೆಯಾಗಿ ರೂಪಾಂತರ ಹೊಂದುತ್ತದೆ.
ಕಂಪ್ಯೂಟರುಗಳ ಬಳಕೆ ಅತ್ಯಂತ ಉಪಯುಕ್ತವಾಗುವುದಕ್ಕೆ ಕಾರಣವೆಂದರೆ ಲೆಕ್ಕಾಚಾರದಲ್ಲಿ ಅದರ ಶೀಘ್ರಗತಿ. ಒಬ್ಬ ಮನುಷ್ಯನ ಮೆದುಳು3 ವರ್ಷ ಸತತವಾಗಿ ಲೆಕ್ಕಾಚಾರ ಮಾಡಿ ಪಡೆಯುವ ಉತ್ತರವನ್ನು ಕಂಪ್ಯೂಟರು ಒಂದು ನಿಮಿಷನಲ್ಲಿ ನೀಡಬಲ್ಲದು. ಆಕಾಶಯಾನ, ವೈದ್ಯಕೀಯ, ಸ್ಪಟಿಕದ ರಚನೆ, ಉತ್ಪಾದಿಸಲಾದ ವಸ್ತುಗಳ ಎಣಿಕೆ ಮುಂತಾದ ಬಗೆಬಗೆಯ ಕ್ಷೇತ್ರಗಳನ್ನು ಕಂಪ್ಯೂಟರ್ ಜಾಲಗಳು ಆವರಿಸಿವ.
COMMENTS